Home » ಟೈಲರ್ ಕನ್ಹಯ್ಯ ಲಾಲ್ ಪುತ್ರರಿಗೆ ಸರಕಾರಿ ಕೆಲಸ ನೀಡಿದ ಸರಕಾರ

ಟೈಲರ್ ಕನ್ಹಯ್ಯ ಲಾಲ್ ಪುತ್ರರಿಗೆ ಸರಕಾರಿ ಕೆಲಸ ನೀಡಿದ ಸರಕಾರ

by Mallika
0 comments

ಇಡೀ ದೇಶವನ್ನೇ ಅಲ್ಲೋಲಕಲ್ಲೋಲ ಮಾಡಿಸಿದ ಘಟನೆ ಎಂದರೆ ರಾಜಸ್ಥಾನದ ಟೈಲರ್ ಹತ್ಯೆ.‌ ಎಂತವರ ಮನಸ್ಸನ್ನು ಘಾಸಿ ಮಾಡಿದ ವಿಷಯ. ಈಗ ಟೈಲರ್ ಕನ್ಹಯ್ಯ ಲಾಲ್ ತೇಲಿಯ ಪುತ್ರರನ್ನು ಮುಖ್ಯಮಂತ್ರಿ
ಅಶೋಕ್ ಗೆಹೋಟ್ ಸರ್ಕಾರಿ ಸೇವೆಗೆ ನೇಮಕ ಮಾಡಿದ್ದಾರೆ.

ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಾ ಲಾಲ್ ತೇಲಿಯ ಪುತ್ರರನ್ನು ಮುಖ್ಯಮಂತ್ರಿ ಅಶೋಕ್ ಗೆಹೋಟ್ ಸರ್ಕಾರಿ ಸೇವೆಗೆ ನೇಮಿಸಿದ್ದಾರೆ.

“ಉದಯಪುರದ ಭಯೋತ್ಪಾದಕ ಘಟನೆಯಲ್ಲಿ ಮಡಿದ ಕನ್ಹಯ್ಯಾ ಲಾಲ್ ತೇಲಿ ಪುತ್ರರಾದ ಯಶ್ ತೇಲಿ ಮತ್ತು ತರುಣ್ ತೇಲಿ ಅನ್ನು ಸರ್ಕಾರಿ ಸೇವೆಗೆ ನೇಮಿಸಲು ಸಂಪುಟ ನಿರ್ಧರಿಸಿದೆ” ಎಂದು ಮುಖ್ಯಮಂತ್ರಿ ಟ್ವೀಟ್‌ನಲ್ಲಿ ಬರೆದಿದ್ದಾರೆ. 2009ರ ರಾಜಸ್ಥಾನ ಅಧೀನ ಕಚೇರಿ ಕ್ಲರ್ಕ್ ಸೇವಾ (ತಿದ್ದುಪಡಿ) ನಿಯಮಗಳ ನಿಯಮ 60 ಅಡಿಯಲ್ಲಿ ನೇಮಕಾತಿ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ,” ಎಂದು ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಹತ್ಯೆಯಾದ ಕನ್ಹಯ್ಯಾ ಲಾಲ್ ತೇಲಿ ಆತನ ಮನೆಯ ಏಕೈಕ ಆದಾಯದ ಮೂಲವಾಗಿದ್ದರು. ಇವರ ದುಡಿಮೆಯಿಂದಲೇ ಎಲ್ಲಾ ಸಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನ ಸರ್ಕಾರವು ಕುಟುಂಬಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ಅದಕ್ಕಾಗಿಯೇ ಕನ್ಹಯ್ಯಾ ಲಾಲ್ ಇಬ್ಬರೂ ಪುತ್ರರನ್ನು ಸರ್ಕಾರಿ ಸೇವೆಗೆ ನೇಮಕ ಮಾಡಿಕೊಳ್ಳಲಾಗಿದೆ.

ಕಳೆದ ಜೂನ್ 28ರ ಮಂಗಳವಾರ ಮಧ್ಯಾಹ್ನ 3 ರಿಂದ 3.30 ಮಧ್ಯೆ ಕನ್ಹಯ್ಯಾ ಹತ್ಯೆ ನಡೆದಿತ್ತು.

You may also like

Leave a Comment