Karnataka BJP: ರಾಜ್ಯ ಬಿಜೆಪಿಯು ಎಲ್ಲಾ ಬಿಜೆಪಿ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದೆ. 39 ಸಂಘಟನಾ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆದೇಶ ಹೊರಡಿಸಿರುವುದಾಗಿ ಬಿಜೆಪಿ ತಿಳಿಸಿದೆ.
ಹೌದು, ಈ ಬಗ್ಗೆ ರಾಜ್ಯಾಧ್ಯಕ್ಷ ಬಿ . ವೈ ವಿಜಯೇಂದ್ರ ಪ್ರಕಟಣೆ ಹೊರಡಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಪಕ್ಷದನಿಷ್ಠಾವಂತರನ್ನೂ ಗುರುತಿಸಿ ಜವಾಬ್ದಾರಿ ವಹಿಸಿದ್ದಾರೆ.
ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ನೇಮಕಗೊಂಡಿದ್ದರೆ, ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ ನೇಮಕಗೊಂಡಿದ್ದಾರೆ. ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿಎಸ್. ನಿರಂಜನ್ ಕುಮಾರ್ ಮತ್ತು ಅರುಣ್ ಕುಮಾರ್ ಪೂಜಾರ ಅವರಿಗೂ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಇದನ್ನೂ ಓದಿ: Shivraj kumar: ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ನಟ ಶಿವರಾಜ್ ಕುಮಾರ್ ನಿರ್ಧಾರ? ಶಿವಣ್ಣ ಹೇಳಿದ್ದಿಷ್ಟು!!
ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು?!
ಧಾರವಾಡ ಗ್ರಾಮಾಂತರ ನಿಂಗಪ್ಪ ಸುತ್ತಗಟ್ಟಿ
• ಬೆಳಗಾವಿ ನಗರ: ಗೀತಾ ಸುತಾರ್
• ಬೆಳಗಾವಿ ಗ್ರಾಮಾಂತರ: ಸುಭಾಷ್ ಪಾಟೀಲ್
• ಚಿಕ್ಕೋಡಿ: ಸತೀಶ್ ಅಪ್ಪಾಜಿಗೋಳ್
• ಬಾಗಲಕೋಟೆ: ಶಾಂತಗೌಡ ಪಾಟೀಲ್
• ವಿಜಯಪುರ: ಆರ್.ಎಸ್.ಪಾಟೀಲ್
• ಬೀದರ್: ಸೋಮನಾಥ ಪಾಟೀಲ್
• ಮೈಸೂರು ನಗರ ಎಲ್.ನಾಗೇಂದ್ರ
• ಮೈಸೂರು ಗ್ರಾಮಾಂತರ ಎಲ್.ಆರ್.ಮಹಾದೇವಸ್ವಾಮಿ
• ಚಾಮರಾಜನಗರ ಸಿ.ಎಸ್.ನಿರಂಜನ್ ಕುಮಾರ್
• ಮಂಡ್ಯ ಇಂದ್ರೇಶ್ ಕುಮಾರ್
• ಹಾವೇರಿ ಅರುಣ್ ಕುಮಾರ್ ಪೂಜಾರ
• ದಾವಣಗೆರೆ: ರಾಜಶೇಖರ್
• ತುಮಕೂರು: ಎಚ್.ಎಸ್.ರವಿಶಂಕರ(ಹೆಬ್ಬಾಕ)
• ಬೆಂಗಳೂರು ಗ್ರಾಮಾಂತರ: ರಾಮಕೃಷ್ಣಪ್ಪ
• ಚಿಕ್ಕಬಳ್ಳಾಪುರ: ರಾಮಲಿಂಗಪ್ಪ
• ವಿಜಯನಗರ: ಚನ್ನಬಸವನಗೌಡ ಪಾಟೀಲ್
• ಬಳ್ಳಾರಿ: ಅನಿಲ್ ಕುಮಾರ್ ಮೋಕಾ
• ರಾಯಚೂರು: ಡಾ.ಶಿವರಾಜ ಪಾಟೀಲ್
• ಕೊಪ್ಪಳ: ನವೀನ್ ಗುಳಗಣ್ಣನವರ್
• ಯಾದಗಿರಿ: ಅಮೀನ್ ರೆಡ್ಡಿ
• ಕೋಲಾರ: ಡಾ.ಕೆ.ಎನ್.ವೇಣುಗೋಪಾಲ್
• ಬೆಂಗಳೂರು ಉತ್ತರ: ಎಸ್.ಹರೀಶ್
• ಬೆಂಗಳೂರು ಕೇಂದ್ರ: ಸಪ್ತಗಿರಿಗೌಡ
• ಬೆಂಗಳೂರು ದಕ್ಷಿಣ: ಕೆ.ಸಿ.ರಾಮಮೂರ್ತಿ
• ಹುಬ್ಬಳ್ಳಿ-ಧಾರವಾಡ ತಿಪ್ಪಣ್ಣ ಮಜ್ಜಗಿ
• ಉತ್ತರ ಕನ್ನಡ – ಎನ್.ಎಸ್.ಹೆಗಡೆ
• ಶಿವಮೊಗ್ಗ – ಟಿ.ಡಿ.ಮೇಘರಾಜ್
• ಚಿಕ್ಕಮಗಳೂರು- ದೇವರಾಜ ಶೆಟ್ಟಿ
• ಉಡುಪಿ ಕಿಶೋರ್ ಕುಂದಾಪುರ
• ರಾಮನಗರ: ಆನಂದಸ್ವಾಮಿ
• ಮಧುಗಿರಿ: ಬಿ.ಸಿ.ಹನುಮಂತೇಗೌಡ
• ಚಿತ್ರದುರ್ಗ: ಎ.ಮುರಳಿ
• ಕೊಡಗು ರವಿ ಕಾಳಪ್ಪ
• ಹಾಸನ ಸಿದ್ದೇಶ್ ನಾಗೇಂದ್ರ
• ಕಲಬುರಗಿ ಗ್ರಾಮಾಂತರ : ಶಿವರಾಜ ಪಾಟೀಲ್ ರದ್ದೇವಾರಿ
• ಕಲಬುರಗಿ ನಗರ: ಚಂದ್ರಕಾಂತ ಪಾಟೀಲ್
• ಗದಗ: ರಾಜು ಕುರಡಗಿ
• ದಕ್ಷಿಣ ಕನ್ನಡ ಸತೀಶ್ ಕುಂಪಲ
• ರಾಯಚೂರು – ಹಾಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್
• ಬೆಂಗಳೂರು ದಕ್ಷಿಣ- ಸಿ.ಕೆ.ರಾಮಮೂರ್ತಿ
• ಮೈಸೂರು ನಗರ- ಎಲ್.ನಾಗೇಂದ್ರ
• ಹಾವೇರಿ – ಅರುಣ್ ಕುಮಾರ್ ಪೂಜಾರ್
