Home » BJP President BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ರಾಜ್ಯ ಸರ್ಕಾರದಿಂದ ಬಿಗಿ ಭದ್ರತೆ- ಏನೆಲ್ಲಾ ಸೌಲಭ್ಯ ಉಂಟು ಗೊತ್ತಾ ?!

BJP President BY Vijayendra: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ರಾಜ್ಯ ಸರ್ಕಾರದಿಂದ ಬಿಗಿ ಭದ್ರತೆ- ಏನೆಲ್ಲಾ ಸೌಲಭ್ಯ ಉಂಟು ಗೊತ್ತಾ ?!

1 comment
BJP President BY Vijayendra

BJP President BY Vijayendra: ಬಿಜೆಪಿ ರಾಷ್ಟ್ರೀಯ ನಾಯಕರು 2024ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಶಿಕಾರಿಪುರ ಕ್ಷೇತ್ರದ ಬಿಜೆಪಿ ಶಾಸಕ, ಕರ್ನಾಟಕ ಬಿಜೆಪಿಯ ನಿಯೋಜಿತ ಅಧ್ಯಕ್ಷ ವಿಜಯೇಂದ್ರರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಇದೀಗ ಬಿ. ವೈ. ವಿಜಯೇಂದ್ರಗೆ ( BJP President BY Vijayendra) ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪೊಲೀಸ್ ಭದ್ರತೆ, ಎಸ್ಕಾರ್ಟ್ ಸೌಲಭ್ಯವನ್ನು ನೀಡಿ ಆದೇಶ ಹೊರಡಿಸಿದೆ.

ಹೌದು, ಶುಕ್ರವಾರ ಬಿ. ವೈ. ವಿಜಯೇಂದ್ರರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ. ನವೆಂಬರ್ 15ರಂದು ನಡೆಯುವ ಕಾರ್ಯಕ್ರಮದಲ್ಲಿ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಶಿಷ್ಟಾಚಾರದಂತೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಇನ್ನುಮುಂದೆ ಮೂವರು ಪೊಲೀಸ್ ಸಿಬ್ಬಂದಿ ಇರುವ ಬೆಂಗಾವಲು ಇರುವ ವಾಹನ, ಬಿ. ವೈ. ವಿಜಯೇಂದ್ರರ ಭದ್ರತೆಯನ್ನು ನೋಡಿಕೊಳ್ಳಲಿದೆ. ನವೆಂಬರ್ 15ರಂದು ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಧಿಕೃತವಾಗಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಮತ್ತು ಬೆಂಗಾವಲು ವಾಹನ ನೀಡಲಾಗುತ್ತದೆ. ಹಾಲಿ ಶಾಸಕರಿಗೆ ನೀಡುವ ಪೊಲೀಸ್ ಭದ್ರತೆ ಅವರಿಗೆ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Mangaluru: ಹಾಸ್ಟೆಲ್ ನ 6 ನೇ ಮಹಡಿಯಿಂದ ಹಾರಿ MBBS ವಿದ್ಯಾರ್ಥಿನಿ ಆತ್ಮಹತ್ಯೆ!!

You may also like

Leave a Comment