Congress Guarantees: ರಾಜ್ಯದಲ್ಲಿ ಸರ್ಕಾರಕ್ಕೆ ಬರುವ ಅನುದಾನವೆಲ್ಲಾ ಬರೀ ಗ್ಯಾರಂಟಿ ಯೋಜನೆಗಳಿಗೇ ಹೋಗುತ್ತಿರುವ ಕಾರಣ ಅಭಿವೃದ್ಧಿ ಕುಟಿತವಾಗಿದೆ. ಹೀಗಾಗಿ ಹಿಂದೆ ಸದ್ದು ಮಾಡಿದ್ದ ಗ್ಯಾರಂಟಿ ರದ್ದು ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದೂ ಕೂಡ ಕಾಂಗ್ರೆಸ್ ಸಚಿವರೇ(Congress Ministers)ಗ್ಯಾರಂಟಿ ರದ್ಧಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಹೌದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುತ್ತಿದ್ದಂತೆ ತಾನು ಮಾತು ಕೊಟ್ಟಂತೆ ಐದು ಗ್ಯಾರಂಟಿಗಳಾದ(Congress Guarantees ) ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ ಹಾಗೂ ಅನ್ನ ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿದೆ. ಆರಂಭದಲ್ಲಿ ಇವುಗಳ ಕುರಿತು ಅಪಸ್ವರ, ಟೀಕೆ-ಟಿಪ್ಪಣಿಗಳು ಎದುರಾದರು ನಂತರ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಸರ್ಕಾರ ಮಾತ್ರ ಇವುಗಳಿಗೆ ಹಣ ಹೊಂದಿಸುವ ಸಲುವಾಗಿ ಹೆಣಗಾಡುತ್ತಿದೆ. ದಿನನಿತ್ಯದ ವಸ್ತುಗಳ, ಮದ್ಯದ ದರವನ್ನು ಏರಿಸಿ ಹೇಗೋ ಒಂದು ವರ್ಷ ಯಶಸ್ವಿಯಾಗಿ ಗ್ಯಾರಂಟಿಗಳನ್ನು ತಲುಪಿಸಿದೆ. ಆದರೆ ಇನ್ನು ಮುಂದೆ ಏನು ಅನ್ನುವುದೇ ಯಕ್ಷ ಪ್ರಶ್ನೆ!! ಹೀಗಾಗಿ ಕ್ಷೇತ್ರದ ಜನರು ಅಭಿವೃದ್ಧಿ, ಅನುದಾನದ ಬಗ್ಗೆ ಕೇಳುವ ಪ್ರಶ್ನೆಗಳಿಗೆ, ತಮ್ಮ ಮಂತ್ರಿ ವಲಯದ ಅಭಿವೃದ್ಧಿ ಕುಂಟಿತದಿಂದ ರೋಸಿ ಹೋದ ಮಂತ್ರಿಗಳು ಗ್ಯಾರಂಟಿಯನ್ನು ಬಂದ್ ಮಾಡಿ ಇಲ್ಲ ಕಂಟ್ರೋಲ್ ಮಾಡಿ ಎಂದು ಹೈಕಮಾಂಡ್ ಮೊರೆ ಹೋಗಿದ್ದಾರಂತೆ.
ಹೌದು, ಗ್ಯಾರಂಟಿ ಯೋಜನೆಗಳ ಸ್ವರೂಪದಲ್ಲಿ ಬದಲಾವಣೆ ಮಾಡಬೇಕು ಎಂದು ಖುದ್ದು ಸಚಿವರೇ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಅಲ್ಲದೆ ಈ ಯೋಜನೆಗಳ ವ್ಯಾಪ್ತಿಯಿಂದ ಶ್ರೀಮಂತರನ್ನು ಹೊರಗಿಡಬೇಕು ಎಂದು ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ಹೈಕಮಾಂಡ್‌ನ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿರಣದೀಪ್ ಈ ಸಿಂಗ್ ಸುರ್ಜೇವಾಲಾ ಅವರನ್ನು ನವದೆಹಲಿ ಯಲ್ಲಿ ಮಂಗಳವಾರ ಭೇಟಿ ಮಾಡಿದ ಸಚಿವರು, ಗ್ಯಾರಂಟಿಯ ಸಾಧಕ-ಬಾಧಕ, ಲೋಪ-ದೋಷಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರಂತೆ.
ಸಚಿವರ ವಾದವೇನು?
– ಗ್ಯಾರಂಟಿಗಾಗಿ ಅಭಿವೃದ್ಧಿ ಹತೋಟಿಯಲ್ಲಿಡಲಾಗಿದೆ, ಶಾಸಕರ ಅನುದಾನಕ್ಕೆ ಕತ್ತರಿ ಹಾಕಲಾಗಿದೆ
– ರಾಜ್ಯದ ಎಲ್ಲ ಆರ್ಥಿಕ ಸಂಪನ್ಮಲಗಳನ್ನು ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ವ್ಯಯಿಸುತ್ತಿದೆ
– ಗ್ಯಾರಂಟಿ ಯೋಜನೆಗಳಿಗೆ ಭಾರಿ ಮೊತ್ತ ವಿನಿಯೋಗವಾಗುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಾಗಿದೆ
– ಶ್ರೀಮಂತರು ‘ಗ್ಯಾರಂಟಿ’ಗಳ ಪ್ರಯೋಜನ ಪಡೆದರೂ ಅವುಗಳ • ಕುರಿತು ಲೇವಡಿ ಮಾಡುತ್ತಾರೆ. ಅಲ್ಲದೆ, ಕಾಂಗ್ರೆಸ್ ಪರವಾಗಿಯೂ ಅವರು ನಿಲ್ಲುವುದಿಲ್ಲ
– ಉಳ್ಳವರನ್ನು ಯೋಜನೆಯ ವ್ಯಾಪ್ತಿಯಿಂದ ಕೈಬಿಟ್ಟರೆ ಈ 20 ಸಾವಿರ ಕೋಟಿಯಷ್ಟು ಮೊತ್ತ ಅಭಿವೃದ್ಧಿ ಯೋಜನೆಗಳಿಗೆ ಸಿಗುತ್ತದೆ
– ಗೃಹಲಕ್ಷ್ಮಿ ಯೋಜನೆಗೆ ವೈಜ್ಞಾನಿಕ ಮಾನದಂಡ ರೂಪಿಸಿಲ್ಲ. ಬಡವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುವಂತೆ ನಿಯಮ ಪರಿಷ್ಕರಿಸಬೇಕು
– ಆಂಧ್ರಪ್ರದೇಶದಲ್ಲಿ ಹಲವು ಜನಕಲ್ಯಾಣ ಯೋಜನೆ ರೂಪಿಸಿದರೂ ಜಗನ್ ಮೋಹನ್ ರೆಡ್ಡಿ ಸರ್ಕಾರ ಅಧಿಕಾರ ಕಳೆದುಕೊಂಡಿದ್ದು ಪಾಠವಾಗಬೇಕು
