Home » Gruhalakshmi scheme: ಯಜಮಾನಿಯರಿಗೆ ಬಿಗ್ ಶಾಕ್- ಗೃಹಲಕ್ಷ್ಮೀಯ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ?! ನಿಮ್ಮ ದುಡ್ಡು ಹೋಗುತ್ತಾ?!

Gruhalakshmi scheme: ಯಜಮಾನಿಯರಿಗೆ ಬಿಗ್ ಶಾಕ್- ಗೃಹಲಕ್ಷ್ಮೀಯ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ?! ನಿಮ್ಮ ದುಡ್ಡು ಹೋಗುತ್ತಾ?!

1 comment

Gruhalakshmi Scheme : ಸರ್ಕಾರದ ಪ್ರಮುಖ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi scheme) ಈಗಾಗಲೇ ರಾಜ್ಯದ ಎಲ್ಲಾ ಯಜಮಾನರಿಗೆ ಮೂರು ಕಂತಿನ ಹಣ ಸಂದಾಯವಾಗಿದ್ದು ಇದೀಗ 4ನೇ ಕಂತಿನ ಹಣ ಕೂಡ ಜಮಾ ಆಗಿದೆ. ಆದರೆ ಮಹಿಳೆಯರ ಖಾತೆಗೆ ಜಮಾ ಆದ ನಾಲ್ಕನೇ ಕಂತಿನ ಹಣ ಕೆಲವೇ ಸಮಯದಲ್ಲಿ ಮಾಯವಾಗಿದೆ.

ಹೌದು, ನವೆಂಬರ್(November) ತಿಂಗಳ ಹಣವನ್ನು 4ನೇ ಕಂತಿನ ರೂಪದಲ್ಲಿ ಯಜಮಾನಿಯರ ಖಾತೆ ಹಾಕಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಕೆಲವು ಮಹಿಳೆಯರ ಖಾತೆಗೆ ಹಣ ಬಂದಿದೆ ಎಂದು ಮೆಸೇಜ್ ಬಂದರೂ ಕೂಡ ಖಾತೆಗೆ ಹಣ ಇನ್ನೂ ಜಮ ಆಗಿಲ್ಲ. ಇದು ಎಲ್ಲಾ ಯಜಮಾನಿಯರಿಗೂ ಆಗಿಲ್ಲ. ಆದರೆ ಪ್ರತೀ ಜಿಲ್ಲೆಯ ಕೆಲವು ಮಹಿಳೆಯರಿಗೆ ಆಗಿದೆ.

ಇನ್ನು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ತಾಂತ್ರಿಕ ದೋಷಗಳು ಸರಾಯಾದ ಬಳಿಕ ಸರಿಯಾಗಿ ಹಣ ಸಂದಾಯವಾಗುತ್ತೆ. ಜೊತೆಗೆ ಇದುವರೆಗೂ ರೇಷನ್ ಕಾರ್ಡ್ ಗೆ ಇ-ಕೆವೈಸಿ ಮಾಡಿಸದ ಮಹಿಳೆಯರು ದಯವಿಟ್ಟು ಆದಷ್ಟು ಬೇಗ ಮಾಡಿಸಿ. ಇದರಿಂದ ಬೇಗ ಹಣ ಕೂಡ ನಿಮ್ಮ ಕೈ ಸೇರುತ್ತೆ.

You may also like

Leave a Comment