Home » Dr G Parameshwara: ಪೊಲೀಸರು ಹಣೆಗೆ ಕುಂಕುಮ – ವಿಭೂತಿ ಹಾಕುವಂತಿಲ್ಲ: ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ !

Dr G Parameshwara: ಪೊಲೀಸರು ಹಣೆಗೆ ಕುಂಕುಮ – ವಿಭೂತಿ ಹಾಕುವಂತಿಲ್ಲ: ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ !

3 comments
Dr G Parameshwara

Dr G Parameshwara: ಗೃಹ ಸಚಿವ ಡಾ ಜಿ ಪರಮೇಶ್ವರ (Dr G Parameshwara) ಅವರು, ರಾಜ್ಯದ ಪೊಲೀಸರಿಗೆ ಮತ್ತೊಂದು ಸೂಚನೆ ಒಂದನ್ನು ನೀಡಿದ್ದಾರೆ. ಹೌದು, ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಸಮವಸ್ತ್ರ ಧರಿಸಿದ ಸಂದರ್ಭದಲ್ಲಿ ಕುಂಕುಮ, ವಿಭೂತಿ ಹಚ್ಚುವಂತಿಲ್ಲ ಎಂದು ರಾಜ್ಯ ಪೊಲೀಸರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಈಗಾಗಲೇ ವಿವಿಐಪಿ ಭದ್ರತಾ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ. ಕಿಶೋರ್ ಬಾಬುರವರು ಆದೇಶ ಹೊರಡಿಸಿದ್ದರು. ಪೊಲೀಸರು ಎಂದರೆ ಶಿಸ್ತು ಪಾಲನಾ ಪಡೆ ಎಂದೇ ಪ್ರಸಿದ್ಧಿ. ಇಂತಹ ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿದಾಗ ಹಣೆಗೆ ಕುಂಕುಮ ಇಡುವುದು, ಕಿವಿಗೆ ಓಲೆ, ಕೈಗೆ ದಾರ ಕಟ್ಟುವಂತಿಲ್ಲ ಎಂದು ಪೊಲೀಸ್ ಮ್ಯಾನುಯಲ್‌ನಲ್ಲಿ ಹೇಳಲಾಗಿದೆ.

ಈ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರು ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ, ಹೀಗಾಗಿ ಈ ಮೇಲಿನಂತೆ ಸಮವಸ್ತ್ರ ಧರಿಸಿದ ಸಂದರ್ಭದಲ್ಲಿ ಕುಂಕುಮ, ವಿಭೂತಿ ಹಚ್ಚುವಂತಿಲ್ಲ ಎಂಬ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎನ್ನಲಾಗಿದೆ.

ಇದನ್ನೂ ಓದಿ: ಬಯಲಾಗಿದೆ ಜಪಾನೀ ಚಿರಯೌವನದ ಗುಟ್ಟು: ಪ್ರಾಯ 50 ಆದ್ರೂ 20 ರಂತೆ ಸದಾ ಇರ್ತೀರ, ಜಸ್ಟ್ ಹೀಗೆ ಮಾಡಿ ಸಾಕು !

You may also like

Leave a Comment