Congress: ಕರ್ನಾಟಕ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು ಚಾಲನೆ ನೀಡಲಾಗುತ್ತಿದೆ. ಈ ಬೆನ್ನಲ್ಲೆ ಪಂಚ ಗ್ಯಾರಂಟಿಗಳ ಜಾರಿಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗುವುದರಲ್ಲಿ ಮತ್ತೊಂದು ಮಾತಿಲ್ಲ. ಆದಾಯ ಮೂಲ ಹೆಚ್ಚಿಸಲು ಇದೀಗ ಕಾಂಗ್ರೆಸ್ (Congress) ಸರ್ಕಾರ ಮೆಗಾ ಪ್ಲ್ಯಾನ್ ಮಾಡಿದ್ದು, ಅಬಕಾರಿ ಇಲಾಖೆಯಿಂದ ಹೆಚ್ಚು ಆದಾಯ ಗಳಿಸಲು ಹೊಸ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಶೇಕಡಾ 25 ರಷ್ಟು ಲಿಕ್ಕರ್ ಲೈಸೆನ್ಸ್ ತೆರಿಗೆಯನ್ನು ಹೆಚ್ಚಿಸಿ, ವಾರ್ಷಿಕ 175 ಕೋಟಿ ರೂ. ಆದಾಯ ಗಳಿಸೋದಕ್ಕೆ ಮುಂದಾಗಿದೆ. ಅದರಲ್ಲೂ ಹಾರ್ಡ್ ಡ್ರಿಂಕ್ಸ್ ದರ ಶೇಕಡಾ 10 ರಿಂದ 15 % ಹೆಚ್ಚಿಸಿದ್ದರೆ ಸುಮಾರು 3 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆಯನ್ನು ಇಡಲಾಗಿದೆ.
ಇನ್ನೂ ಯುವಕ ನೆಚ್ಚಿನ ಬಿಯರ್ ದರವನ್ನ ಶೇಕಡಾ 20 %ರಷ್ಟು ಹೆಚ್ಚಿಸುವ ಮೂಲಕ ವಾರ್ಷಿಕ 500 ಕೋಟಿ ಆದಾಯ ಗಳಿಸೋದಕ್ಕೆ ತೀರ್ಮಾಣಕ್ಕೆ ಮುಂದಾಗಿದೆ.ಈವರೆಗೆ 2016 ರಿಂದ ಲಿಕ್ಕರ್ ಲೈಸೆನ್ಸ್ ದರವನ್ನು ಹೆಚ್ಚಳ ಮಾಡಿರಲಿಲ್ಲ, ಇದೀಗ ಅಧಿಕಾರವೇರಿದ ಕಾಂಗ್ರೆಸ್ ಅಬಕಾರಿ ಇಲಾಖೆಯ ಮೇಲೆ ಹದ್ದಿನ ಕಣ್ಣಿಟ್ಟಿದೆ ಮುಂದಿನ ದಿನಗಳಲ್ಲಿ ಐದು ಗ್ಯಾರಂಟಿಗಳ ಜಾರಿ ಪೈಕಿ ಜನರಿಗೆ ಏಕಾಏಕಿ ಮದ್ಯದ ಬೆಲೆ ಹೆಚ್ಚಿಸುವ ಮೂಲಕ ಬಿಸಿ ತಟ್ಟುವುದಂತೂ ಗ್ಯಾರಂಟಿಯಾಗಿದೆ.
ಇದನ್ನು ಓದಿ: Biparjoy: ಬಿಫೋರ್ ಜಾಯ್ ಚಂಡಮಾರುತ: 24 ಗಂಟೆಗಳಲ್ಲಿ ಮತ್ತಷ್ಟು ತೀವ್ರ, ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ, ಭಾರೀ ಮಳೆ !
