Home » D K Shivakumar :ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೋ, ಇಲ್ವೋ ?! ಜೈನ ಮುನಿ ನುಡಿದ್ರು ಸ್ಪೋಟಕ ಭವಿಷ್ಯ

D K Shivakumar :ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೋ, ಇಲ್ವೋ ?! ಜೈನ ಮುನಿ ನುಡಿದ್ರು ಸ್ಪೋಟಕ ಭವಿಷ್ಯ

0 comments
D K Shivakumar

D K Shivakumar: ಹಲಗಾದ ಜೈನ ಬಸದಿಯ ಪರಮ ಪೂಜ್ಯ ಬಾಲಾಚಾರ್ಯ ಶ್ರೀ ಸಿದ್ದಸೇನ ಮುನಿ ಮಹಾರಾಜರು, ಬೆಳಗಾವಿ ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar) ಅವರು ಮುಖ್ಯಮಂತ್ರಿ ಆಗ್ತಾರೆ ಅಂತ ಭವಿಷ್ಯ ನುಡಿದಿದ್ದು ಎಲ್ಲೆಡೆ ಈ ಕುರಿತು ಚರ್ಚೆ ಆರಂಭ ಆಗಿದೆ.

ಹೌದು, ವಿನಯ್ ಕುಲಕರ್ಣಿ ಅವರು ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಜೈನ ಬಸದಿಗೆ ಭೇಟಿ ನೀಡಿದ್ದ ವೇಳೆ, ಜೈನ ಮುನಿಗಳು ಲೋಕಸಭೆ ಚುನಾವಣೆ ಬಳಿಕ ವಿನಯ್ ಕುಲಕರ್ಣಿ ಸಚಿವರಾಗುತ್ತಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತೀರಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಈಗಾಗಲೇ ಡಿಕೆ ಶಿವಕುಮಾರ್ ಅವರಿಗೂ ಈ ಹಿನ್ನೆಲೆ ಆಶೀರ್ವಾದ ಕೊಟ್ಟಿದ್ದೇನೆ. ಅವರೂ ಸಹ ಮುಖ್ಯಮಂತ್ರಿಯಾಗುತ್ತಾರೆ ಎಂದು ಸಿದ್ಧಸೇನ ಮುನಿ ಮಹಾರಾಜರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯದ ಅಕ್ಕಿ ಹಣ ಬೇಕಂದ್ರೆ ಈ ಕೆಲಸ ಮಾಡೋದು ಕಡ್ಡಾಯ !!

You may also like

Leave a Comment