Consumer Court : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಅವರ ಸೋದರ ಡಿ.ಕೆ. ಸುರೇಶ್ ಅವರಿಗೆ ಗ್ರಾಹಕರ ನ್ಯಾಯಾಲಯ (Consumer court) ಬಿಗ್ ಶಾಕ್ ನೀಡಿದೆ. ಬೆಂಗಳೂರಿನ ಎನ್ಟಿವೈ ಬಡಾವಣೆಯ ನಿವಾಸಿ ಜೆ. ರಾಘವೇಂದ್ರ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಡಿ.ಕೆ ಶಿವಕುಮಾರ್ ಹಾಗೂ ಸೋದರರಿಗೆ ಶಾಕ್ ನೀಡಿದೆ.
ಗ್ರಾಹಕರೊಬ್ಬರು ₹30 ಲಕ್ಷ ಮುಂಗಡ ಹಣ ಪಾವತಿಸಿ ಕಾಯ್ದಿರಿಸಿದ ಫ್ಲ್ಯಾಟ್ ಅನ್ನು ನಿಗದಿತ ಸಮಯದಲ್ಲಿ ಪೂರ್ಣ ಹಣ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ 17 ಲಕ್ಷ ರೂ. ಕಡಿತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಬ್ರದರ್ಸ್ಗೆ (DK Brothers) ಹೀನಾಯ ಸೋಲಾಗಿದೆ.ಬೆಂಗಳೂರಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಡಿ.ಕೆ ಬ್ರದರ್ಸ್ಗೆ (DK Brothers)ಕಡಿತ ಮಾಡಿರುವ ಹಣವನ್ನು ವಾರ್ಷಿಕ ಶೇ. 10ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶ ನೀಡಿದೆ.
ಡಿ.ಕೆ ಶಿವಕುಮಾರ್, ಅವರ ಸಹೋದರ ಡಿ.ಕೆ ಸುರೇಶ್, ಸೋದರಿ ಡಿ.ಕೆ ಮಂಜುಳಾ ಹಾಗೂ ಸಲಾರ್ಪುರಿಯಾ ಪ್ರಾಪರ್ಟಿಸ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದ ಡಿವಿನಿಟಿ ಪ್ರಾಜೆಕ್ಟ್ನ ಫ್ಲ್ಯಾಟ್ ಒಂದನ್ನು 86.06 ಲಕ್ಷ ರೂ.ಗಳಿಗೆ ಖರೀದಿಸಲು 2017ರ ಏಪ್ರಿಲ್ 10ರಂದು ರಾಘವೇಂದ್ರ ಒಪ್ಪಂದ ಮಾಡಿಕೊಂಡಿದ್ದರಂತೆ. ಇದರ ಜೊತೆಗೆ ಮುಂಗಡವಾಗಿ 30,81,352 ರೂ. ಪಾವತಿ ಕೂಡ ಮಾಡಿದ್ದರಂತೆ. ಈ ನಡುವೆ, ಕೊರೊನಾ ಹಿನ್ನೆಲೆ ಬಾಕಿ 55,25,448 ರೂ.ವನ್ನು ನಿಗದಿತ ಸಮಯಕ್ಕೆ ಪಾವತಿಸಲು ರಾಘವೇಂದ್ರ ಅವರಿಗೆ ಸಾಧ್ಯವಾಗಿಲ್ಲ.
ಆದರೆ, ಡಿ.ಕೆ. ಬ್ರದರ್ಸ್ ಒಳಗೊಂಡ ಡಿವಿನಿಟಿ ಪ್ರಾಜೆಕ್ಟ್ ರಾಘವೇಂದ್ರ ಅವರಿಗೆ ಯಾವುದೇ ಪೂರ್ವ ಮಾಹಿತಿಯನ್ನು ಕೂಡ ನೀಡದೆ ಒಪ್ಪಂದ ರದ್ದು ಮಾಡಿದ್ದು ಮಾತ್ರವಲ್ಲದೇ, ಫ್ಲ್ಯಾಟ್ ಅನ್ನು ಬೇರೆಯವರಿಗೆ ಮಾರಿಬಿಟ್ಟಿದೆ. ರಾಘವೇಂದ್ರ ಅವರು ಪಾವತಿಸಿದ್ದ 30 ಲಕ್ಷ ರೂ.ನಲ್ಲಿ 17,77,422 ರೂ.ವನ್ನು ಕಡಿತಗೊಳಿಸಿ ಕೇವಲ 13,03,930 ರೂ.ವನ್ನು ಮಾತ್ರ ಚೆಕ್ ಮೂಲಕ ಹಿಂದುರಿಗಿಸಲಾಗಿದೆ. ಹೀಗಾಗಿ, ರಾಘವೇಂದ್ರ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಗ್ರಾಹಕ ನ್ಯಾಯಾಲಯ ಹೇಳಿದ್ದೇನು??
* ರಾಘವೇಂದ್ರ ಅವರಿಗೆ ಮಂಜೂರಾಗಿದ್ದ ಫ್ಲ್ಯಾಟನ್ನು 2021ರಲ್ಲಿ ಬೇರೊಬ್ಬರಿಗೆ 1,04,70,000 ರೂ.ಗೆ ಮಾರಾಟ ಮಾಡಿರುವ ಹಿನ್ನೆಲೆ ಡಿಕೆಶಿ ಕುಟುಂಬಕ್ಕೆ ಯಾವುದೇ ರೀತಿ ನಷ್ಟ ಆಗದು. ಹೀಗಾಗಿ 17,77,422 ರೂ. ಕಡಿತಗೊಳಿಸಿರುವುದು ಅಕ್ರಮವೆಂದು ಗ್ರಾಹಕ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
* ಈ ನಿಟ್ಟಿನಲ್ಲಿ ಬಾಕಿ ಮೊತ್ತವನ್ನು ಒಪ್ಪಂದದ ದಿನವಾದ 10.04.2017ರಿಂದ ಅನ್ವಯವಾಗುವಂತೆ ಶೇ.10ರಷ್ಟು ಬಡ್ಡಿಯೊಂದಿಗೆ ರಾಘವೇಂದ್ರ ಅವರಿಗೆ ಹಿಂದಿರುಗಿಸಲು ಸೂಚನೆ ನೀಡಿದೆ.
* ರಾಘವೇಂದ್ರ ಅವರು ನ್ಯಾಯಾಂಗ ಹೋರಾಟ ನಡೆಸಿ ಹಿನ್ನೆಲೆ ಪರಿಹಾರವಾಗಿ ₹10 ಸಾವಿರ ಪಾವತಿ ಮಾಡಬೇಕು.
*ಈ ಆದೇಶವನ್ನು ಮುಂದಿನ 60 ದಿನಗಳಲ್ಲಿ ಪಾಲಿಸಲೇಬೇಕು. ಒಂದು ವೇಳೆ, ವಿಫಲವಾದಲ್ಲಿ ₹17,77,422 ಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ಮೊತ್ತ ಸೇರಿಸಿ ಪಾವತಿ ಮಾಡಬೇಕಾಗುತ್ತದೆ.
ಹಣ ಕಡಿತಕ್ಕೆ ಡಿವಿನಿಟಿ ಪ್ರಾಜೆಕ್ಟ್ ಕೊಟ್ಟ ವಿವರಣೆ ಹೀಗಿದೆ:
2017ರಲ್ಲಿ ಫ್ಲ್ಯಾಟ್ ಮಾರಾಟದ ಒಪ್ಪಂದ ನಡೆದಿತ್ತು. ಬಳಿಕ ಕೇಂದ್ರ ಸರ್ಕಾರ ಜಿಎಸ್ಟಿ ಜಾರಿ ಮಾಡಿದ ಹಿನ್ನೆಲೆ ಫ್ಲ್ಯಾಟ್ನ ವೆಚ್ಚ 1.4 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ. ರಾಘವೇಂದ್ರ ಅವರು ಒಪ್ಪಂದದ ಅನುಸಾರ, ಬಾಕಿ ಮೊತ್ತವಾದ 55 ಲಕ್ಷ ರೂ.ಗಳನ್ನು ನಿಗದಿತ ಸಮಯದಲ್ಲಿ ಪಾವತಿಸದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸೂಕ್ತ ಪ್ರತಿಕ್ರಿಯೆ ನೀಹೀಗಾಗಿ , ಇವರಿಗೆ ಅನೇಕ ಬಾರಿ ಇ-ಮೇಲ್ ಮಾಡಿದರು ಪ್ರತಿಕ್ರಿಯೆ ಸಿಕ್ಕಿಲ್ಲ.ಇದರ ಜೊತೆಗೆ ಕರೆ ಮಾಡಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ, 2019ರಲ್ಲಿ ಮತ್ತೊಂದು ಬಾರಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು. ಆದಾಗ್ಯೂ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ, ದೂರುದಾರರು ಪಾವತಿ ಮಾಡಿ ಮೊತ್ತದಲ್ಲಿ ರದ್ದತಿ ಶುಲ್ಕ (ಕ್ಯಾನ್ಸಲೇಷನ್) ಹಾಗೂ ತೆರಿಗೆಯನ್ನು ಸೇರಿ ₹17,98,077 ಅನ್ನು ಕಡಿತಗೊಳಿಸಿ, ಬಾಕಿ ₹13,03,930 ಅನ್ನು ಚೆಕ್ ಮೂಲಕ ಪಾವತಿಸಲಾಗಿದೆ. ದೂರುದಾರರುನಿಗದಿತ ಸಮಯಕ್ಕೆ ಸ್ಪಂದಿಸದೆ ಇದ್ದ ಹಿನ್ನೆಲೆ ಫ್ಲ್ಯಾಟನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಾಜೆಕ್ಟ್ ಕಾರಣ ನೀಡಿದೆ.
ಇದನ್ನೂ ಓದಿ: DV Sadananda Gowda: ಸದಾನಂದಗೌಡರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ – ಮಾಜಿ ಸಿಎಂಗೆ ಕಾದಿದೆಯಾ ಬಿಗ್ ಶಾಕ್ ?!
