Home » C M Siddaramaiah: ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಿದ್ದಂತೆ ಹೊಸ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ !!

C M Siddaramaiah: ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಿದ್ದಂತೆ ಹೊಸ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ !!

1 comment
CM Siddaramaiah

CM Siddaramaiah: ನಿನ್ನೆ ತಾನೆ ಬಿಜೆಪಿ ಮಾಜಿ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ್ ಅವರು ಅಪಾರ ಬೆಂಬಲಿಗರೊಂದಿಗೆ, ಬಿಜೆಪಿ ನಾಯಕರೇ ನಡುಗುವಂತೆ ದೊಡ್ಡ ಕಾರ್ಯಕ್ರಮ ಆಯೋಜನೆ ಮೂಲಕ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಪೂರ್ಣಿಮಾ ಅವರು ಕಾಂಗ್ರೆಸ್ ಸೇರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯನವರು(CM Siddaramaiah) ಹೊಸ ಬಾಂಬ್ ಸಿಡಿಸಿದ್ದಾರೆ.

ಎಲ್ಲರಿಗೂ ತಿಳಿದಂತೆ ಪೂರ್ಣಿಮಾ ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಸಾಮಾಜಿಕ ನ್ಯಾಯಶಾದಿ, ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಧ್ವನಿಯಾಗಿದ್ದ ಎ.ಕೃಷ್ಣಪ್ಪ ಅವರ ಮಗಳು. 2013 ರಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಹಾಗೂ ಟಿಕೆಟ್ ಸಿಗದ ಕಾರಣ ಕೃಷ್ಣಪ್ಪ ಅವರು ಪಕ್ಷ ಬಿಡಬೇಕಾಯಿತು. ಬಳಿಕ ಅವರ ಕಾಲವಾದ ಬಳಿಕ ಮಗಳು ಪೂರ್ಣಿಮ ಬಿಜೆಪಿ ಸೇರಿ ಶಾಸಕರೂ ಆದರೂ. ಆದರೆ ಕಳೆದ ಸಲದ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡು ಇದೀಗ ಮತ್ತೆ ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ. ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಬಳಿಕ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ನಿನ್ನೆ ನಡೆದ ಪೂರ್ಣಿಮ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 2013ರಲ್ಲಿ ಎ. ಕೃಷ್ಣಪ್ಪಗೆ ಅಂದರೆ ಪೂರ್ಣಿಮ ಅವರ ತಂದೆಗೆ ಕಾಂಗ್ರೆಸ್ ಟಿಕೆಟ್ ತಪ್ಪಲು ನಾನೇ ಕಾರಣ ಎಂದು ಸ್ಪೋಟಕ ವಿಚಾರವನ್ನು ತೆರೆದಿಟ್ಟಿದ್ದಾರೆ. ಅಲ್ಲದೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು ‘ಪಕ್ಷ ದ್ರೋಹದ ಕೆಲಸ ಮಾಡಿ ಬಿಜೆಪಿಗೆ ಹೋಗಿರುವ ಶಾಸಕ ಬೈರತಿ ಬಸರಾಜ್‌ ಗೆ ಟಿಕೆಟ್‌ ಕೊಡುವ ಸಲುವಾಗಿ 2013ರಲ್ಲಿ ಎ.ಕೃಷ್ಣಪ್ಪ ಅವರಿಗೆ ಟಿಕೆಟ್‌ ತಪ್ಪಿಸಲು ನಾನೇ ಕಾರಣ’ ಎಂದ ಹೇಳಿದ್ದಾರೆ. ಅಲ್ಲದೆ ಬಳಿಕ ಮಾತನಾಡಿದ ಅವರ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವ ಅವರ ಪುತ್ರಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ಮುಂದೆ ರಾಜಕೀಯವಾಗಿ ಯಾವುದೇ ರೀತಿಯ ಅನ್ಯಾಯವಾಗಲು ನಾನು ಬಿಡಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Gaganayana Mission: ಗಗನಯಾನ ಪರೀಕ್ಷಾರ್ಥ ಉಡಾವಣೆ ಸಕ್ಸಸ್: ಇಸ್ರೋ ಮತ್ತೊಂದು ವಿಕ್ರಮ !

You may also like

Leave a Comment