Home » Nithin gadkhari: ಯಾರೂ ಕಾಂಗ್ರೆಸ್ ತೊರೆಯಬೇಡಿ, ಕಾಂಗ್ರೆಸ್ ಅನ್ನು ಬಲಿಷ್ಠ ಮಾಡಬೇಕು – ಬಿಜೆಪಿ ನಾಯಕ ನಿತಿನ್ ಗಡ್ಕರಿಯ ಅಚ್ಚರಿ ಸ್ಟೇಟ್ಮೆಂಟ್!!

Nithin gadkhari: ಯಾರೂ ಕಾಂಗ್ರೆಸ್ ತೊರೆಯಬೇಡಿ, ಕಾಂಗ್ರೆಸ್ ಅನ್ನು ಬಲಿಷ್ಠ ಮಾಡಬೇಕು – ಬಿಜೆಪಿ ನಾಯಕ ನಿತಿನ್ ಗಡ್ಕರಿಯ ಅಚ್ಚರಿ ಸ್ಟೇಟ್ಮೆಂಟ್!!

4 comments
Nithin gadkhari

Nithin gadkhari: ಕಾರ್ಯಕರ್ತರೇ, ನಾಯಕರೇ ಯಾರೂ ಕಾಂಗ್ರೆಸ್ ತೊರೆಯಬೇಡಿ, ಕಾಂಗ್ರೆಸ್ ಅನ್ನು ಬಲಿಷ್ಠ ಮಾಡಬೇಕು. ಇದಕ್ಕೆ ನಿಮ್ಮೆಲ್ಲಯ ಸಹಕಾರ ಅಗತ್ಯ ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ(Nithin Gadkhari)ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ದಾರೆ.

ಹೌದು, ಮುಂಬೈ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಬಹಿರಂಗವಾಗಿ ಹೇಳಿಕೆ ನೀಡಿರುವ ಗಡ್ಕರಿಯವರು ಕಾಂಗ್ರೆಸ್ ಗೆ ಸಾಂತ್ವಾನದ ನುಡಿಗಳನ್ನಾಡಿದ್ದಾರೆ. ‘ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅವಶ್ಯವಿದೆ. ಸತತ ಸೋಲಿ ನಿಂದ ಜರ್ಜರಿತವಾಗಿರುವ ಕಾಂಗ್ರೆಸ್ ಬಲಿಷ್ಠ ವಾಗಬೇಕು ಹಾಗೂ ಅದರ ನಾಯಕರಾರೂ ಪಕ್ಷ ತೊರೆಯಬಾರದು ಎಂಬುದು ನನ್ನ ಪ್ರಾಮಾಣಿಕ ಬಯಕೆ’ ಎಂದು ಸಚಿವರು ಹೇಳಿದ್ದು ಭಾರೀ ಅಚ್ಚರಿ ಮೂಡಿಸಿದೆ.

ಇದನ್ನು ಓದಿ: Oyo Booking ನಲ್ಲಿ ದಾಖಲೆ ಮಟ್ಟದಲ್ಲಿ ಒಂದೇ ದಿನಕ್ಕೆ ಸೇಲ್ ಆದ ಕಾಂಡೋಮ್ !!ಹೊಸ ವರ್ಷಕ್ಕೆ ಕಾಂಡೋಮ್ ಸೇಲ್ ಆಗಿದೆಷ್ಟು??

ಅಲ್ಲದೆ ದೇಶದ ಪ್ರಜಾ ಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ನಾಯಕರು ಸೋಲಿನಿಂದ ಎದೆಗುಂದಬಾರದು. ಈಗ ಸೋತಿದ್ದರೂ ಮುಂದೊಂದು ದಿನ ಜಯ ಕಾದಿದೆ. ಹೀಗಾಗಿ ಅದರ ನಾಯಕರು ಪಕ್ಷ ತೊರೆಯಬಾರದು. ಎಂದೂ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ಕ್ಕೆ ಬಿಜೆಪಿ ಪಣ ತೊಟ್ಟಿರುವಾಗಲೇ, ಅದೇ ಪಕ್ಷದ ನಾಯಕರೊ ಬ್ಬರು ಕಾಂಗ್ರೆಸ್ ಬಲಿಷ್ಠವಾಗಬೇಕೆಂದು ವಾದ ಮಂಡಿಸಿರುವುದು ಕುತೂಹಲ ಕೆರಳಿಸಿದೆ.

You may also like

Leave a Comment