Home » JDS: ದೇವೇಗೌಡರ ಜೆಡಿಎಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೇ ಬಂತು ಕುತ್ತು – ಧಳಪತಿಗಳಿಗೆ ಯಾರೂ ಊಹಿಸದಂತ ಶಾಕ್ ಕೊಟ್ಟ ಸಿಎಂ ಇಬ್ರಾಹಿಂ !!

JDS: ದೇವೇಗೌಡರ ಜೆಡಿಎಸ್ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೇ ಬಂತು ಕುತ್ತು – ಧಳಪತಿಗಳಿಗೆ ಯಾರೂ ಊಹಿಸದಂತ ಶಾಕ್ ಕೊಟ್ಟ ಸಿಎಂ ಇಬ್ರಾಹಿಂ !!

1 comment
JDS

JDS: ರಾಜ್ಯದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್(JDS) ಮೈತ್ರಿ ಮಾಡಿಕೊಂಡಿಗಿನಿಂದಲೂ ಸಂಕಷ್ಟಕ್ಕೆ ಸಿಲುಕಿದೆ. ಪಕ್ಷದ ಕಾರ್ಯಕರ್ತರೇ ಪಚ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಅದರಲ್ಲೂ ದಳಪತಿಗಳ ಬುಡಕ್ಕೇ ಹೊಸ ಹೊಸ ಬಾಂಬ್ ಸಿಡಿಸುತ್ತಿದ್ದಾರೆ. ಅಂತೆಯೇ ಇದೀಗ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷ, ನಂದೇ ನಿಜವಾದ ಜೆಡಿಎಸ್ ಎಂದು ಹೇಳಿಕೊಂಡಿರವ ಸಿಎಂ ಇಬ್ರಾಹಿಮ್(CM Ibrahim) ಅವರು ಮಹಾ ಅಣ್ವಸ್ತ್ರವನ್ನೇ ಸಿಡಿಸಿದ್ದು, ಎಚ್ ಡಿ ದೇವೇಗೌಡ(HD Devegowda)ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂದು ಸಾರಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಹೌದು, ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಮುನಿಸಿಕೊಂಡು ನಾನೇ ಜೆಡಿಎಸ್ ರಾಜ್ಯಾಧ್ಯಕ್ಷ, ನಂದೇ ನಿಜವಾದ ಜೆಡಿಎಸ್ ಎಂದು ಹೇಳಿಕೊಂಡಿರವ ಸಿಎಂ ಇಬ್ರಾಹಿಮ್ ಅವರನ್ನು ಪಕ್ಷದಿಂದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಉಚ್ಚಾಟನೆ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಆದರೀಗ ಸ್ವಯಂ ಘೋಷಿತ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಮ್ ಅವರು ದೇವೇಗೌಡರ ಬುಡಕ್ಕೇ ಹೊಸ ಬಾಂಬ್ ಸಿಡಿಸಿ ಜೆಡಿಎಸ್ ವರಿಷ್ಠರಿಗೆ ಊಹಿಸದಂತ ಶಾಕ್ ನೀಡಿದ್ದಾರೆ.

ಅಂದಹಾಗೆ ನವ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಜತೆಗಿನ ಮೈತ್ರಿ (BJP JDS Alliance)ಯನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೀಗಾಗಿ ಇದನ್ನು ಬದಲಿಸದಿದ್ದರೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ (JDS National President Post) ಎಚ್.ಡಿ. ದೇವೇಗೌಡರನ್ನೇ (HD Deve Gowda) ಕೆಳಗಿಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ ಎಂದಿನಂತೆ ತಮ್ಮ ಹಾಸ್ಯ ನುಡಿಗಳಲ್ಲಿ, ಹೋಲಿಕೆಯ ಮಾತುಗಳಲ್ಲಿ ಮಾತನಾಡಿದ ಸಿ.ಎಂ. ಇಬ್ರಾಹಿಂ, ಅರೇಂಜ್ ಮ್ಯಾರೇಜ್ ಮಾಡಿದರೇ ನಿಲ್ಲುವುದಿಲ್ಲ. ಇನ್ನು ಬಸ್ ಸ್ಟ್ಯಾಂಡ್‌ನಲ್ಲಿ ಲವ್ ಮಾಡಿದ್ದು ಉಳಿಯುತ್ತದೆಯೇ? ಪಾರ್ಟಿಯಲ್ಲಿ ತೀರ್ಮಾನ ಆಗಿದ್ಯಾ? ಯಾರಿಗೆ ಏನು ಅಧಿಕಾರ ಇದೆ? ಶಾಸಕರು ಎಲ್ಲರೂ ಕಾದು ನೋಡಬೇಕು. ಮೈತ್ರಿ ವಿಚಾರವಾಗಿ ಎಚ್.ಡಿ. ದೇವೇಗೌಡ ಅವರು ಮನಸ್ಸು ಬದಲಾಯಿಸಿಲ್ಲ ಅಂದರೆ ರೆಸಲ್ಯೂಷನ್ ಮಾಡಿ ಬೇರೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಹಾಗೆಂದು ನಾವು ಅವರನ್ನ ಉಚ್ಚಾಟನೆ ಮಾಡಲು ನಾವು ಹೋಗುವುದಿಲ್ಲ. ಆದರೆ, ಅನಿವಾರ್ಯವಾಗಿ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಗೌಡರಿಗೆ ಅವಮಾನ ಆಗೋಕೆ ಬಿಡಬಾರದು, ಅವರಿಗೆ ಗೌರವ ಕೊಡಬೇಕು. ಅವರು ತಂದೆ ಸಮಾನ, ನಮ್ಮ ಜತೆ ನೀವೇ ನಾಯಕರಾಗಿ ಮುಂದುವರಿಯಿರಿ ಅಂತ ಕೇಳುತ್ತೇವೆ. ಆದರೆ ಮೈತ್ರಿ ಅನ್ನು ಮಾತ್ರ ಬಿಟ್ಟು ಬಿಡಲಿ. ಅದಾದ ಮೇಲೆ ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ಇದನ್ನೂ ಓದಿ: CM Siddaramaiah: ಬೆಳ್ಳಂಬೆಳಗ್ಗೆಯೇ ರಾಜ್ಯದ ವಿಪಕ್ಷಗಳಿಗೆ ಬಿಗ್ ಶಾಕ್- ಇಡೀ ರಾಜ್ಯದ ರಾಜಕೀಯಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ ಸಿದ್ದು

You may also like

Leave a Comment