Home » Congress Government : ಸಿದ್ದು ಸರ್ಕಾರದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ – ಯಾರು ಒಳಕ್ಕೆ, ಯಾರು ಹೊರಕ್ಕೆ ?

Congress Government : ಸಿದ್ದು ಸರ್ಕಾರದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ – ಯಾರು ಒಳಕ್ಕೆ, ಯಾರು ಹೊರಕ್ಕೆ ?

1 comment
Congress govt

Congress govt : ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಆರು ತಿಂಗಳುಗಳು ಕೂಡ ಕಳೆದಿಲ್ಲ. ಆದರೆ ಈ ನಡುವೆಯೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಆಗುತ್ತದೆ ಎಂಬ ವಿಚಾರ ಸುದ್ದಿಯಾಗುತ್ತಿದೆ. ಹಾಗಿದ್ರೆ ಏನಿದು ಹೊಸ ಸಮಾಚಾರ? ಒಂದು ವೇಳೆ ಸರ್ಜರಿ ನಡೆದ್ರೂ ಯಾರು ಒಳಕ್ಕೆ, ಯಾರು ಹೊರಕ್ಕೆ ಗೊತ್ತಾ?

ಹೌದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ(Congress govt)ಸಚಿವ ಸ್ಥಾನದಿಂದ ವಂಚಿತರಾದವರು ಹಲವಾರು ಶಾಸಕರು ಅಸಮಾನಿತರಾಗಿದ್ದರು. ಆದರೆ ಅವರೆಲ್ಲರನ್ನು ಕೂಡ ಹಲವಾರು ಭರವಸೆಗಳೊಂದಿಗೆ ಸುಮನಾಗಿಸಲಾಗಿತ್ತು. ಎರಡುವರೆ ವರ್ಷಗಳ ಬಳಿಕ ಮತ್ತೆ ಚಾನ್ಸ್ ನೀಡಲಾಗುತ್ತೆ ಎನ್ನಲಾಗಿತ್ತು. ಆದರೀಗ ಮತ್ತೆ ಸಚಿವ ಸಂಪುಟದ ರಚನೆ ಪುನರವ ರಚನೆ ಬಗ್ಗೆ ಚರ್ಚೆಯಾಗುತ್ತಿದ್ದು ಯಾರಿಗೆಲ್ಲ ಕೋಕ್, ಯಾರಿಗೆಲ್ಲ ಶಾಕ್ ಎಂಬುದರ ಬಗ್ಗೆ ಹಲವಾರು ವಿಚಾರಗಳು ಮುನ್ನಲೆಗೆ ಬಂದಿದೆ.

ಅಂದಹಾಗೆ ಲೋಕಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಟಿವ ಸಂಪುಟವು ಪುನಾರಚನೆ ಆಗುತ್ತೆ ಎನ್ನುವ ಚರ್ಚೆ ಇದೀಗ ಹುಟ್ಟಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿರುವ ಕಾಂಗ್ರೆಸ್‌ ನಲ್ಲಿ ನಾಯಕರ ನಡುವಿನ ಅಂತರ ಹಾಗೂ ಮನಸ್ತಾಪವನ್ನ ಸರಿ ಪಡಿಸಿಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ. ಹೀಗಾಗಿ ಸಚಿವಾಕಾಂಕ್ಷಿಗಳ ಒತ್ತಡಕ್ಕೆ ಮಣಿದು ಲೋಕಸಭಾ ಚುನಾವಣೆಯ ಬಳಿಕ ಸಂಪುಟ ಸರ್ಜರಿಗೆ ಹೈಕಮಾಂಡ್‌ ಮುಂದಾಗಿದೆ ಎನ್ನಲಾಗಿದೆ.

ಯಾರಿಗೆ ಶಾಕ್?
ಪೂರ್ಣಪ್ರಮಾಣದ ಪುನಾರಚನೆ ಮಾಡದೆ ಕೆಲವು ಸಚಿವರಿಗೆ ಕೊಕ್ ನೀಡುವ ಲೆಕ್ಕಾಚಾರವನ್ನ ಕಾಂಗ್ರೆಸ್‌ ಹೈಕಮಾಂಡ್‌ ಹಾಕಿಕೊಂಡಿದೆ ಎನ್ನಲಾಗಿದೆ ಈ ನಿಟ್ಟಿನಲ್ಲಿ ಸಚಿವರಾದ ಕೆ.ವೆಂಕಟೇಶ್, ರೆಹಮಾನ್ ಖಾನ್, ಬೋಸರಾಜ್ , ಶರಣ ಬಸಪ್ಪ ದರ್ಶನಾಪುರ, ಡಾ. ಎಚ್ ಸಿ ಮಹದೇವಪ್ಪ ಸೇರಿದಂತೆ ಡಿ. ಸುಧಾಕರ್ ಕೊಕ್ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾರು ಒಳಕ್ಕೆ?
ಕಾಂಗ್ರೆಸ್ ನಲ್ಲಿ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಬಿ.ಕೆ ಹರಿಪ್ರಸಾದ್, ಅಶೋಕ್ ಪಟ್ಟಣ, ಬಸವರಾಜ ರಾಯರೆಡ್ಡಿ, ಮಹಾಂತೇಶ್ ಕೌಜಲಗಿ,‌ ವಿನಯ್ ಕುಲಕರ್ಣಿ, ರುದ್ರಪ್ಪ ಲಮಾನಿ, ಪ್ರಸಾದ್ ಅಬ್ಬಯ್ಯ, ಪ್ರಿಯಕೃಷ್ಞ/ ಎಂ ಕೃಷ್ಣಪ್ಪ ಎನ್ ಎ ಹ್ಯಾರಿಸ್, ಮಾಗಡಿ ಬಾಲಕೃಷ್ಣ, ನರೇಂದ್ರ ಸ್ವಾಮಿ, ‌ಭದ್ರಾವತಿ ಸಂಗಮೇಶ್, ತುಕರಾಮ್, ರಾಜೇಗೌಡ, ಶಿವಲಿಂಗೇಗೌಡ, ಟಿಬಿ ಜಯಚಂದ್ರ, ತನ್ವೀರ್ ಸೇಠ್, ಸಲೀಂ ಅಹ್ಮದ್ ಸೇರಿದಂತೆ ಹಲವುರು ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: C M Siddaramaiah: ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುತ್ತಿದ್ದಂತೆ ಹೊಸ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ !!

You may also like

Leave a Comment