Home » KS Eshwarappa On Zameer Ahmed Khan:’ಸ್ಪೀಕರ್ ಖಾದರ್’ಗೆ ಗೌರವ ವಿಚಾರ- ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಈಶ್ವರಪ್ಪ !!

KS Eshwarappa On Zameer Ahmed Khan:’ಸ್ಪೀಕರ್ ಖಾದರ್’ಗೆ ಗೌರವ ವಿಚಾರ- ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಈಶ್ವರಪ್ಪ !!

1 comment
KS Eshwarappa On Zameer AhmedKhan

KS Eshwarappa On Zameer AhmedKhan : ಬಿಜೆಪಿ ಹಿರಿಯ ನಾಯಕ ಕೆಎಸ್‌ ಈಶ್ವರಪ್ಪ ಸ್ವೀಕರ್‌ ಸ್ಥಾನದ ಬಗ್ಗೆ (KS Eshwarappa On Zameer AhmedKhan)ವಿವಾದಿತ ಹೇಳಿಕೆ ನೀಡಿದ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ವಿರುದ್ಧ ಹರಿಹಾಯ್ದಿದ್ದಾರೆ.

ಶಿವಮೊಗ್ಗದಲ್ಲಿ ಹಿರಿಯ ನಾಯಕ ಕೆಎಸ್‌ ಈಶ್ವರಪ್ಪ(KS Eshwarappa) ಅವರು ಸಚಿವ ಜಮೀರ್‌ ಅಹಮ್ಮದ್‌ ಖಾನ್‌ (Zameer Ahmed Khan) ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ”ಮುಸ್ಲಿಂ ನಾಯಕರಿಗೆ ತಲೆಭಾಗಬೇಕು ಎಂಬುದಕ್ಕೆ ನನ್ನ ವಿರೋಧವಿದ್ದು, ಸಂವಿಧಾನ ಪೀಠಕ್ಕೆ, ಸ್ಪೀಕರ್ ಸ್ಥಾನಕ್ಕೆ ನಾವು ಮರ್ಯಾದೆ ನೀಡುತ್ತೇವೆ. ಖಾದರ್ ಅನ್ನೋ ಬೋಳಪ್ಪ ಇದ್ದಾನೆ ಎಂಬ ಕಾರಣಕ್ಕೆ ನಾವು ಗೌರವ ನೀಡಲ್ಲ. ಸಂವಿಧಾನ ಪೀಠಕ್ಕೆ, ಸ್ಪೀಕರ್ ಖಾದರ್ ಗೆ ನಾವು ಗೌರವ ನೀಡುತ್ತೇವೆ” ಎಂದು ಹೇಳಿದ್ದಾರೆ.

ಒಂದು ಹಳ್ಳಿಯಲ್ಲಿ ಕತ್ತೆ ಮೇಲೆ ದೇವರು ಕೂರಿಸಿಕೊಂಡು‌ ಮೆರವಣಿಗೆ ಮಾಡುತ್ತಿದ್ದರು. ಆಗ ನಾವು ಗೌರವ ನೀಡುವುದು ದೇವರಿಗೆ ಹೊರತು ಕತ್ತೆಗಲ್ಲ. ಅಲ್ಲಿ ಕುಳಿತಿರೋರು ಕತ್ತೆ ಎಂದು ಹೇಳುವುದಿಲ್ಲ ಬದಲಿಗೆ ಅಲ್ಲಿ ಕುಳಿತಿರುವುದು ದೇವರು‌‌ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.ಸಚಿವ ಜಮೀರ್ ಅಹಮ್ಮದ್ ಸಂವಿಧಾನ ಪೀಠಕ್ಕೆ ಅವಮಾನ ಮಾಡಿದ್ದು,ಹೀಗಾಗಿ, ಜಮೀರ್ ಅಹಮ್ಮದ್ ಖಾನ್‌ ಅವರನ್ನು ಆ ಸ್ಥಾನದಿಂದ ಕಿತ್ತು ಬಿಸಾಕಿ ಎಂದು ಕಿಡಿ ಕಾರಿದ್ದಾರೆ. ಶೀಘ್ರವೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು.‌ ಮುಂದಿನ ದಿನಗಳಲ್ಲಿ ಜನ ಮತ ಹಾಕಬೇಕಾದರೆ ಯೋಚನೆ ಮಾಡಬೇಕು ಎಂದು ಇದೇ ವೇಳೆ ಸಚಿವರು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Indira Canteen: ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್- ‘ಕ್ಯಾಂಪಸ್’ಗೆ ಎಂಟ್ರಿ ಕೊಡಲಿದೆ ಇಂದಿರಾ ಕ್ಯಾಂಟೀನ್ !!

You may also like

Leave a Comment