Home » Zameer Ahmed Khan: ಕಾಲಮಿತಿಯೊಳಗೆ ವಸತಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು – ಜಮೀರ್ ಅಹ್ಮದ್ ಸೂಚನೆ!

Zameer Ahmed Khan: ಕಾಲಮಿತಿಯೊಳಗೆ ವಸತಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು – ಜಮೀರ್ ಅಹ್ಮದ್ ಸೂಚನೆ!

0 comments
Zameer Ahmed Khan

Zameer Ahmed Khan: ಕಾಂಗ್ರೆಸ್ ಗ್ಯಾರಂಟಿಯಲ್ಲಿ ಒಂದಾದ ಉಚಿತ ವಿದ್ಯುತ್’ನಿಂದಾಗಿ ಜನರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಈ ಸೌಲಭ್ಯ ಬಾಡಿಗೆದಾರರಿಗೂ ಲಭ್ಯವಿದೆ. ಈ ಮಧ್ಯೆ ಮನೆ ಇಲ್ಲದ ಬಡವರಿಗೂ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಕಾಲಮಿತಿಯೊಳಗೆ ವಸತಿ ಯೋಜನೆ ಜಾರಿಗೆ ತರಲು ವಸತಿ ಸಚಿವ ಜಮೀರ್ ಸೂಚನೆ ನೀಡಿದ್ದಾರೆ.

“ಬಡವರಿಗೆ ರೂಪಿಸಿದ ವಸತಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು” ಎಂದು ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed Khan) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಮೀರ್, ರಾಜೀವ್‌ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ್ದು, ಕಾಲಮಿತಿಯೊಳಗೆ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು.‌ ಯಾವುದೇ ಕಾರಣಕ್ಕೂ ಸಮಯ ಮುಂದೂಡಬಾರದು ಎಂದು ಹೇಳಿದರು. ಅಲ್ಲದೆ, ವಸತಿ ಯೋಜನೆ ಪೂರ್ಣಗೊಂಡ ನಂತರ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳುವಂತೆ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಜನರಿಗೆ ಒಂದು ಲಕ್ಷ ವಸತಿ ಕಲ್ಪಿಸುವ ಯೋಜನೆ ರೂಪಿಸಿದ್ದಾರೆ. ಆದರೆ, ಅದು ನಿರೀಕ್ಷಿಸಿದಂತೆ ಪ್ರಗತಿ ಆಗುತ್ತಿಲ್ಲ. ಮೊದಲು ಹಣ ಹಣ ಪಾವತಿಸಿದ ಅರ್ಜಿದಾರರಿಗೆ, ಫಲಾನುಭವಿಗಳಿಗೆ ಇನ್ನೂ ಮನೆ ಕೊಟ್ಟಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಸಮಾಧಾನ ವ್ಯಕ್ತಪಡಿಸಿ ಹೇಳಿದರು.

ಇದನ್ನೂ ಓದಿ: ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿದ ಆರೋಪ! ಶಿಕ್ಷಣಾಧಿಕಾರಿಗೆ ಇಂಕ್‌ ಹಾಕಿ ಆಕ್ರೋಶ

You may also like

Leave a Comment