Home » Pratap Simha: ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಜೊತೆ ಡಬಲ್ ಗೇಮ್: ಪ್ರತಾಪ್ ಸಿಂಹ ಆರೋಪ!

Pratap Simha: ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಜೊತೆ ಡಬಲ್ ಗೇಮ್: ಪ್ರತಾಪ್ ಸಿಂಹ ಆರೋಪ!

0 comments
Pratap Simha

Pratap Simha: ಪ್ರತಾಪ್ ಸಿಂಹ ಅವರು ಸ್ವಪಕ್ಷೀಯರ ಬಗ್ಗೆ ಭರವಸೆ ಇಲ್ಲದೆ, ಬಿಜೆಪಿ ಪಕ್ಷದ ಕೆಲವು ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆ. ಹೌದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಒಳಗೊಳಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಯಾರೂ ಟೀಕೆ ಮಾಡದಂತೆ ಶಾಮೀಲಾಗಿದ್ದಾರೆ. ಅವರ ವರ್ತನೆ ಅದೇ ರೀತಿ ಇದೆ. ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ (Pratap Simha) ಆರೋಪಿಸಿದ್ದಾರೆ.

ಬಿಜೆಪಿ ಯ ಕೆಲವು ನಾಯಕರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ, ಕಾಂಗ್ರೆಸ್ ತಾಳಕ್ಕೆ ಬಿಜೆಪಿ ಹೆಜ್ಜೆ ಹಾಕುತ್ತಿದ್ದು, ಸಿದ್ದರಾಮಯ್ಯನರ ಜೊತೆ ಕೆಲವು ಬಿಜೆಪಿಯ ನಾಯಕರು ಕೈ ಜೋಡಿಸಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಇಂಥ ಅಡ್ವಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿಲ್ಲ. ಆದರೆ, ಬಿಜೆಪಿಯ ಹಿರಿಯ ನಾಯಕರು ಇಂತಹ ಅಡ್ಡಸ್ಟ್ ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್, ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣಿಸಿಕೊಂಡಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಕೂಡಲೇ ಅರ್ಕಾವತಿ ಹಗರಣ, ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಮುಂತಾದ ಪ್ರಕರಣಗಳನ್ನು ತೋರಿಸಿ, ಕಾಂಗ್ರೆಸ್ ನಾಯಕರನ್ನು ಎದುರಿಸುತ್ತಾರೆ.

ಒಟ್ಟಿನಲ್ಲಿ ಎರಡೂ ಪಕ್ಷದ ಹಿರಿಯ ನಾಯಕರು ಪರಸ್ಪರ ಹೊಂದಾಣಿಕೆ ರಾಜಕೀಯವನ್ನು ಮಾಡುತ್ತಿದ್ದಾರೆಂಬ
ಅನುಮಾನಗಳು ಮೂಡುತ್ತಿವೆ ಎಂದು ಅವರು ಹೇಳಿದ್ದಾರೆ. ಇದೀಗ ಪ್ರತಾಪ್ ಸಿಂಹ ಮಾಡಿದ ಆರೋಪ ನಾಯಕರನ್ನು ಗೊಂದಲಗೊಳಿಸಿದೆ.

ಇದನ್ನೂ ಓದಿ: Conjoined Twins Baby Born: ವೈದ್ಯಲೋಕಕ್ಕೆ ಅಚ್ಚರಿ! 4 ಕೈ, 4 ಕಾಲು, 2 ಹೃದಯ, 1 ತಲೆಯಿರುವ ಮಗು ಜನನ !

You may also like

Leave a Comment