Yatindra Siddaramaiah audio viral: ಕೆಲವು ದಿನಗಳ ಹಿಂದಷ್ಟೇ ಯತೀಂದ್ರ ಹಾಗೂ ಸಿಎಂ ಸಿದ್ದರಾಮಯ್ಯ(Yatindra-CM Siddaramaiah) ನವರ ಫೋನಿನ ಆಡಿಯೋ ಒಂದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಅಪ್ಪ- ಮಗ ಯಾವುದರ ಬಗ್ಗೆ ಮಾತನಾಡುತ್ಥಿದ್ದಾರೆಂದು ಜನ ತಲೆಗೆ ಹುಳ ಬಿಟ್ಟಕೊಂಡಿದ್ದರು. ಆದರೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಅಪ್ಪ-ಮಗನ ಆಡಿಯೋ (Yatindra Siddaramaiah audio viral)ಅಸಲಿ ವಿಚಾರ ಬಯಲಾಗುವ ಹಂತ ತಲುಪಿದೆ.
ಇಂದು ಬೆಳಗ್ಗೆಯಷ್ಟೇ ಪೋಲೀಸ್ ಇಲಾಖೆಯಲ್ಲಿ 71 ಜನ ಪೋಲೀಸರ ವರ್ಗಾವಣೆ ಮಾಡಲಾಗಿದೆ. ಇದರ ಮೂಲಕ ಅಪ್ಪ-ಮಗನ ಆಡೀಯೋ ಹಿಂದಿನ ರಹಸ್ಯ ಬಯಲಾಗಿದೆ. ಅದೇನೆಂದರೆ ಅಂದು ವೈರಲ್ ಆದ ಆಡಿಯೋದಲ್ಲಿ ವಿವೇಕಾನಂದ(Vivekananda) ಎಂಬ ವ್ಯಕ್ತಿಯ ಹೆಸರನ್ನು ಹೇಳಿದ್ದು, ಯಾರು ಎಂಬ ಪ್ರಶ್ನೆ ಎಲ್ಲಾರನ್ನು ಕಾಡ ತೊಡಗಿತ್ತು. ಇದಕ್ಕೆ ಸಮಜಾಯಿಷಿ ನೀಡಿದ ಸಿದ್ದರಾಮಯ್ಯನವರು ವಿವೇಕಾನಂದ ಬಿಇಓ ಎಂದು ಹೇಳಿದ್ದರು. ಆದರೆ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯಲ್ಲಿ ಬಯಲಾಗಿದ್ದೇ ಬೇರೆಯಾಗಿದೆ.
ಹೌದು, ಪೊಲೀಸ್ ಇಲಾಖೆ ವರ್ಗಾವಣೆ ಪಟ್ಟಿಯಲ್ಲಿ ಸತ್ಯ ಬಯಲಾಗಿದ್ದು, 71 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದನ ಹೆಸರು ಇದೆ. ಅಂದಹಾಗೆ ಮೈಸೂರಿನ ವಿವಿಪುರಂ ಠಾಣೆಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ. ರಾಜ್ಯ ಗುಪ್ತವಾರ್ತೆಯಿಂದ ವಿವಿಪುರಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅದೇ ಪಟ್ಟಿಯಲ್ಲಿದೆ ಮೈಸೂರು ಜಿಲ್ಲೆಯ 4 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ. ಅಂದು ಯತೀಂದ್ರ ಬಾಯಲ್ಲಿ ಬಂದಿದ್ದು ನಾಲ್ಕೈದು ಲಿಸ್ಟ್ ಎಂಬ ಮಾತು ಕೇಳಿಬರುತ್ತಿದೆ.
ಇದಿಷ್ಟೇ ಅಲ್ಲದೆ ವರ್ಗಾವಣೆ ಆದೇಶದಲ್ಲಿ ದಿನಾಂಕ ತಿದ್ದುಪಡಿಯೂ ಆಗಿದೆ. ಹೀಗಾಗಿ ಈ ಎಲ್ಲಾ ಅನುಮಾನ ಹೆಚ್ಚಿದ್ದು, ಪ್ರತಿಯೊಂದು ಗುಮಾನಿಗೂ ಇಂಬುನೀಡುವಂತಿದೆ.
ಇದನ್ನೂ ಓದಿ: Basavana gouda yatnal: ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ – ಶಾಕಿಂಗ್ ಹೇಳಿಕೆ ನೀಡಿದ ಯತ್ನಾಳ್
