Home » BJP: ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್ ಆಗಿ ಪುತ್ತೂರು ಮೂಲದ ಅಕ್ಷಯ್ ದಂಬೆಕಾನ!!

BJP: ರಾಜ್ಯ ಬಿಜೆಪಿ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್ ಆಗಿ ಪುತ್ತೂರು ಮೂಲದ ಅಕ್ಷಯ್ ದಂಬೆಕಾನ!!

by ಹೊಸಕನ್ನಡ
1 comment
BJP

ರಾಜ್ಯ ಬಿಜೆಪಿ ಸದ್ಯ ಹಲವಾರು ಯುವ ನಾಯಕರುಗಳಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಉನ್ನತ ಜವಾಬ್ದಾರಿ ನೀಡುವತ್ತ ಹೆಚ್ಚಿನ ಒಲವು ತೋರಿದ್ದು, ಅಂತೆಯೇ ಕಳೆದ ಹನ್ನೆರಡು ವರ್ಷಗಳಿಂದ ಪಕ್ಷದಲ್ಲಿ ಜವಾಬ್ದಾರಿಯುತ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: CM Siddaramaiah: ಇಂದು ಮಂಗಳೂರಿನ ಈ ಕಂಬಳದಲ್ಲಿ ಭಾಗವಹಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ !!

ಬಿಜೆಪಿ ಯುವಮೋರ್ಚಾ ಮೂಲಕ ಮಂಡಲ, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಜವಾಬ್ದಾರಿಯುತ ಸ್ಥಾನ ಅಲಂಕರಿಸಿ, ಕರ್ತವ್ಯ ನಿರ್ವಹಿಸಿ ಬಳಿಕ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಥಾನ ಪಡೆದಿದ್ದ ಅಕ್ಷಯ್ ಆ ಬಳಿಕ ಪಕ್ಷದ ಮಾಧ್ಯಮ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.

ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಲ ಕ್ಷೇತ್ರಗಳ ರಾಯಭಾರಿಯಾಗಿಯೂ ಗುರುತಿಸಿಕೊಂಡಿದ್ದರು. ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿ ಪಕ್ಷದ ಉನ್ನತಿಗೆ ಶ್ರಮಿಸಿದ್ದರು.

ಸದ್ಯ ಅಕ್ಷಯ್ ಕಾರ್ಯಕ್ಕೆ ರಾಜ್ಯ ಬಿಜೆಪಿ ಉನ್ನತ ಸ್ತಾನವನ್ನೇ ನೀಡಿದ್ದು, ನಿಷ್ಠಾವಂತ ಕಾರ್ಯಕರ್ತನಿಗೆ ಒಲಿದ ಉನ್ನತ ಹುದ್ದೆಯ ಬಗ್ಗೆ ಸಾಮಾನ್ಯ ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ಹೆಚ್ಚಾದಂತಿದೆ.

You may also like

Leave a Comment