Lakshmi hebbalkar: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ram JanmaBhoomi) ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ (Ram Mandir) ಉದ್ಘಾಟನೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಕ್ಷತಾ ಅಭಿಯಾನದ ಅಂಗವಾಗಿ ವಿಶ್ವ ಹಿಂದು ಪರಿಷತ್ (Vishwa Hindu Parishad) ಪ್ರಮುಖರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರ ಮನೆಗೆ ತೆರಳಿ, ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದರು ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಡುತ್ತಿದೆ. ಆದರೆ ಈ ಬಗ್ಗೆ ಹಿಂದು ಪರಿಷತ್ ಸ್ಪಷ್ಟೀಕರಣ ನೀಡಿದ್ದು ಸಚಿವೆಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಹೇಳಿದೆ.
ಹೌದು, ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಹಂಚಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಕ್ಷತಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು ಇಂದು ನಮ್ಮ ಮನೆಗೆ ಆಗಮಿಸಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ನೀಡಿದ್ದಾರೆ ತಿಳಿಸಿದ್ದರು. ಆದರೆ ಇದೀಗ ಆದರೆ, ಈ ಆಮಂತ್ರಣ ರಾಮ ಮಂದಿರ ಉದ್ಘಾಟನೆಗಲ್ಲ, ರಾಮ ಮಂದಿರ ಭೇಟಿಗಷ್ಟೇ ಎಂದು ವಿಹೆಚ್ಪಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಮ ಮಂದಿರಕ್ಕೆ 2 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಹೀಗಾಗಿ ಅವರಿಗೆ ಆಹ್ವಾನ ನೀಡಿದ್ದೇವೆ. ಸಾಮಾನ್ಯರಿಂದ ಹಿಡಿದು ಎಲ್ಲರಿಗೂ ಪಕ್ಷಾತೀತವಾಗಿ ಆಹ್ವಾನ ನೀಡುತ್ತಿದ್ದೇವೆ. ಅದೇ ರೀತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೀಡಿದ್ದೇವೆ. ರಾಮ ಮಂದಿರಕ್ಕೆ ಹೋಗಿ ಬನ್ನಿ ಎಂದು ಆಮಂತ್ರಣ ಕೊಟ್ಟಿದ್ದೇವೆ ಎಂದು ಅವರು ಹೇಳಿದೆ.
ತಪ್ಪು ಮಾಹಿತಿ ನೀಡಿದ ಸಚಿವೆ:
ತಮಗೆ ರಾಮ ಮಂದಿರ ಉದ್ಘಾಟನೆಗೆ ವಿಶ್ವ ಹಿಂದೂ ಪರಿಷತ್ ಮುಖಂಡರು ಬಂದು ಆಹ್ವಾನ ನೀಡಿದ್ದಾರೆ ಎಂದು ಸಿಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಪ್ಪು ಮಾಹಿತಿ ನೀಡಿದ್ದಾರೆ. ವಿಹಿಂಪ ಮುಖಂಡರು ರಾಜ್ಯದ ಪ್ರತಿ ಮನೆಗೂ ರಾಮ ಮಂದಿರ ಉದ್ಘಾಟನೆಗೂ ಮುನ್ನ ‘ಮಂತ್ರಾಕ್ಷತೆ’ ಹಂಚಿಕೆ ಮಾಡಲು ಮುಂದಾಗಿದೆ. ಹೀಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಗೂ ತೆರಳಿದ ವಿಹಿಂಪ ಮುಖಂಡರು ಅಕ್ಷತೆಯನ್ನು ನೀಡಿದ್ದನ್ನು ತಪ್ಪಾಗಿ ಭಾವಿಸಿದ ಸಚಿವೆ ತಮಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ ಎಂದು ಕನ್ಫ್ಯೂಸ್ ಮಾಡಿಕೊಂಡಿದ್ದಾರೆ.
