Home » Shivmogga: ಶಿವಮೊಗ್ಗದಿಂದ ತಂದೆಯೇ ಕಣಕ್ಕಿಳಿಯುವುದು, ನನ್ನ ಸ್ಪರ್ಧೆ ಮುಂದಿನ ಸಲ: ಈಶ್ವರಪ್ಪ ಮಗ ಕಾಂತೇಶ್‌ ಸ್ಪಷ್ಟನೆ

Shivmogga: ಶಿವಮೊಗ್ಗದಿಂದ ತಂದೆಯೇ ಕಣಕ್ಕಿಳಿಯುವುದು, ನನ್ನ ಸ್ಪರ್ಧೆ ಮುಂದಿನ ಸಲ: ಈಶ್ವರಪ್ಪ ಮಗ ಕಾಂತೇಶ್‌ ಸ್ಪಷ್ಟನೆ

by ಹೊಸಕನ್ನಡ
5 comments
KE Kantesh

KE Kantesh :ಚುನಾವಣೆ ಹತ್ತಿರವಾದರೂ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಈ ನಡುವೆಯೇ ಟಿಕೆಟ್ ಆಕಾಂಕ್ಷಿಗಳ ಒಳಜಗಳ ಜೋರಾಗಿದೆ. ಆರೋಪ-ಪ್ರತ್ಯಾರೋಪಗಳು, ಕಾಲೆಳೆಯುವುದು ಸಾಮಾನ್ಯವಾಗಿದೆ. ಅಂತೆಯೇ ಶಿವಮೊಗ್ಗ ನಗರ(Shivmogga Town) ದಲ್ಲೂ ಟಿಕೆಟ್ ವಿಚಾರ ಗದಿಗೆದರಿದ್ದು, 76 ವರ್ಷ ಆಗಿರುವ ಈಶ್ವರಪ್ಪ(Eshwarappa) ಗೆ ಬಿಜೆಪಿ ಟಿಕೆಟ್ ನೀಡುತ್ತದೆಯೋ ಇಲ್ಲ ಅವರ ಮಗನಿಗೆ ಟಿಕೆಟ್ ಸಿಗುತ್ತದೆಯೋ ಎಂಬ ಪ್ರಶ್ನೆ ಮೂಡಿದೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ ಪುತ್ರ ಕಾಂತೇಶ್(KE Kantesh) ಈ ಬಾರಿ ತಂದೆ ಕೆ.ಎಸ್‌.ಈಶ್ವರಪ್ಪ ಅವರೇ ಸ್ಪರ್ಧೆ ಮಾಡುತ್ತಾರೆ. ನಾನು ಸ್ಪರ್ಧಿಸಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಹೌದು, ಶಿವಮೊಗ್ಗ ನಗರ ಕ್ಷೇತ್ರದಿಂದ ಈ ಬಾರಿ ತಂದೆ ಕೆ.ಎಸ್‌.ಈಶ್ವರಪ್ಪ ಅವರೇ ಸ್ಪರ್ಧೆ ಮಾಡುತ್ತಾರೆ. ನಾನು ಸ್ಪರ್ಧಿಸಲ್ಲ ಎಂದು ಪುತ್ರ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್‌ ಹೇಳಿದ್ದಾರೆ. ಯಾರೆಷ್ಟೇ ವಿರೋಧ ವ್ಯಕ್ತಪಡಿಸಿದರೂ ನನ್ನ ತಂದೆ ಅವರಿಗೇ ಬಿಜೆಪಿ(BJP) ಟಿಕೆಟ್‌ ಸಿಗುತ್ತದೆ. ನಾನು ಮುಂದಿನ ಬಾರಿ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಈ ಕುರಿತು ಏನು ಹೇಳುತ್ತೆ ಎಂದು ಕಾದು ನೋಡಬೇಕಿದೆ.

ಅಲ್ಲದೆ ಕಳೆದ ವಿಧಾನ ಪರಿಷತ್‌(Legislative Council) ಚುನಾವಣೆ ವೇಳೆ ನನ್ನ ಹೆಸರು ಕೇಳಿಬಂದಿತ್ತು. ನಂತರ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಹೆಸರು ಪ್ರಸ್ತಾಪ ಆಗಿತ್ತು. ನಾನು ಕೂಡ ತಂದೆ ಈಶ್ವರಪ್ಪ ಅವರಲ್ಲಿ ಸ್ಪರ್ಧಿಸುವ ಕುರಿತು ಪ್ರಸ್ತಾಪಿಸಿದ್ದೆ. ನಾನು ಎಲ್ಲಿಯವರೆಗೆ ಚುನಾಯಿತ ಪ್ರತಿನಿಧಿಯಾಗಿ ರಾಜಕಾರಣದಲ್ಲಿ ಇರುತ್ತೇನೋ ಅಲ್ಲಿಯವರೆಗೂ ಸ್ಪರ್ಧೆ ಬೇಡವೆಂದು ತಂದೆ ಈಶ್ವರಪ್ಪ ಹೇಳಿದ್ದರು. ಅಂದು ತಂದೆ ಹೇಳಿದ ಮಾತಿನಿಂದ ಕಣದಿಂದ ಹಿಂದೆ ಸರಿದಿದ್ದೆ ಎಂದು ತಿಳಿಸಿದರು.

ಈಗ ನನ್ನ ತಂದೆಗೆ 76 ವರ್ಷ ವಯಸ್ಸು. ಬಿಜೆಪಿ ಟಿಕೆಟ್‌ ಕೊಡ್ತಾರೋ, ಇಲ್ಲವೋ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್‌ ಈಶ್ವರಪ್ಪ ಅವರ ಕೈ ಬಿಡುವುದಿಲ್ಲ. ಅವರಿಗೆ ಟಿಕೆಟ್‌ ಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಈಶ್ವರಪ್ಪ ಅವರನ್ನು ಆಶೀರ್ವದಿಸಿ ಎಂದರು.

ಇನ್ನು ಈ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್(Aynur Manjunath) ಕೂಡ ಬಿಜೆಪಿ ಯಿಂದ ಪ್ರಭಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಈ ನಡುವೆ ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಯೋಚಿಸ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುವಾಗ ‘ನಿಮ್ಮ ಮಗ ಇನ್ನೂ ಚಿಕ್ಕವನಿದ್ದಾನೆ. ನಂತರ ಟಿಕೆಟ್ ಕೊಡಿ. ಸದ್ಯಕ್ಕೆ ಕ್ಯೂನಲ್ಲಿ ನಾವು ಇದ್ದೇವೆ ಎಂದು ಆಯನೂರು ಮಂಜುನಾಥ್‌ ನೇರವಾಗಿ ಈಶ್ವರಪ್ಪ ಅವರನ್ನು ಗುರಿಯಾಗಿ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಆಗದಿದ್ದರೆ ನನ್ನ ಮಗನಿಗೆ ಟಿಕೆಟ್‌ ಕೊಡಿ ಎಂದು ಈಶ್ವರಪ್ಪ ಕೇಳಿದ್ದಾರೆ. ಆದರೆ ಪಕ್ಷದಲ್ಲಿ ನಾವು ಸಾಕಷ್ಟುಮಂದಿ ಪಕ್ಷಕ್ಕೆ ಸೇವೆ ಸಲ್ಲಿಸಿರುವವರು ಇದ್ದೇವೆ. ಮಗನಿಗೆ ಆಮೇಲೆ ಕೊಡಲಿ, ಸಧ್ಯ ನಮಗೆ ನೀಡಲಿ ಎಂದು ಹೇಳಿದರು.

ಇದನ್ನೂ ಓದಿ: Roopesh Shetty : ಬಿಗ್ ಬಾಸ್ ನಂತರ ಹೊಸ ಉದ್ಯೋಗ ಗಿಟ್ಟಿಸಿಕೊಂಡ ಕುಡ್ಲದ ಜವನೆ , ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ!!!

You may also like

Leave a Comment