Home » Kisan Ashirwad scheme: ರೈತರೇ ಬೇಗ ಈ ದಾಖಲೆಗಳನ್ನು ರೆಡಿ ಮಾಡಿ, ಈ ಯೋಜನೆಯಡಿ ನಿಮಗೆ ಸಿಗಲಿದೆ 25,000 ಹಣ !!

Kisan Ashirwad scheme: ರೈತರೇ ಬೇಗ ಈ ದಾಖಲೆಗಳನ್ನು ರೆಡಿ ಮಾಡಿ, ಈ ಯೋಜನೆಯಡಿ ನಿಮಗೆ ಸಿಗಲಿದೆ 25,000 ಹಣ !!

1 comment
Kisan Ashirwad scheme

Kisan Ashirwad scheme: ,ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನಂತರ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ‘ಕಿಸಾನ್ ಆಶೀರ್ವಾದ್ ಯೋಜನೆ'(Kisan Ashirvad Scheme)ತುಂಬಾ ದೊಡ್ಡ ಯೋಜನೆ. ಇದರಡಿಯಲ್ಲಿ ರೈತರಿಗೆ ಭರ್ಜರಿ ಧನಸಹಾಯ ದೊರೆಯಲಿದೆ.

ಇದನ್ನೂ ಓದಿ: Aadhar Card Address Change Rules: ಆಧಾರ್‌ನಲ್ಲಿ ವಿಳಾಸ ಬದಲಾವಣೆ ಮಾಡೋ ರೀತಿ ಹೇಗೆ? ಶುಲ್ಕ ಎಷ್ಟು, ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ

ಹೌದು, ರೈತರನ್ನು ಆರ್ಥಿಕವಾಗಿ ಸದೃಢವಾಗಿ ಮಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದ ಮೂಲಕ ಕಿಸಾನ್ ಆಶೀರ್ವಾದ್ ಯೋಜನೆ (Kisan Ashirwad Scheme) ಪರಿಚಯಿಸಲಾಗಿದೆ. ವಿಶೇಷ ಅಂದ್ರೆ ಜಾರ್ಖಂಡ್ ಒಂದರಲ್ಲೇ 35 ಲಕ್ಷಕ್ಕೂ ಅಧಿಕ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಮುಂದಿನ ದಿನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ಸ್ಥಾನ ಪಡೆಯಲಿದೆ.

ಈ ಯೋಜನೆಯಡಿ ಸಿಗುವ ಸಹಾಯಧನವೆಷ್ಟು?

ಈ ಒಂದು ಯೋಜನೆಯೂ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾತ್ರವೇ ಈ ಯೋಜನೆಯ ಲಾಭ ದೊರೆಯುವಂತೆ ಮಾಡಲಾಗುವುದು. 5ಎಕರೆ ಮತ್ತು ಅದಕ್ಕಿಂತ ಕಡಿಮೆ ವ್ಯಾಪ್ತಿಯ ಭೂ ಪ್ರದೇಶ ಹೊಂದಿರುವವರಿಗೆ ಮೊದಲ ಆದ್ಯತೆ. ಹೀಗಾಗಿ 5 ಎಕರೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕ 25,000 ರೂ.ಗಳನ್ನು ನೀಡಲಾಗುವುದು ಮತ್ತು ಈ ಮೊತ್ತವನ್ನು ರೈತರ ಬ್ಯಾಂಕ್‌ಗೆ ಠೇವಣಿ ಮಾಡಲಾಗುತ್ತದೆ.

 

ಕಿಸಾನ್ ಆಶೀರ್ವಾದ್ ಯೋಜನೆಯ ಪಡೆಯಲು ಅಗತ್ಯವಿರುವ ದಾಖಲೆಗಳು:-

ಅರ್ಜಿದಾರರ ಆಧಾರ್ ಕಾರ್ಡ್

ಗುರುತಿನ ಚೀಟಿ

ಪಡಿತರ ಚೀಟಿ

ಕಿಸಾನ್ ಕಾರ್ಡ್

ಬ್ಯಾಂಕ್ ಪಾಸ್ ಪುಸ್ತಕ (ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು)

ಪಾಸ್ಪೋರ್ಟ್ ಗಾತ್ರದ ಫೋಟೋ

ಮೊಬೈಲ್ ನಂಬರ್

You may also like

Leave a Comment