Home » Free current Scheme: ಉಚಿತ ವಿದ್ಯುತ್ ಅರ್ಜಿ ಪಡೆಯಲು ಸರ್ಕಾರದಿಂದ ಡೆಡ್ ಲೈನ್ ಘೋಷಣೆ

Free current Scheme: ಉಚಿತ ವಿದ್ಯುತ್ ಅರ್ಜಿ ಪಡೆಯಲು ಸರ್ಕಾರದಿಂದ ಡೆಡ್ ಲೈನ್ ಘೋಷಣೆ

by ಹೊಸಕನ್ನಡ
0 comments
Free current Scheme

Free current Scheme; ಕಾಂಗ್ರೆಸ್ ಸರ್ಕಾರವು(Congress Government)ಗೃಹಜ್ಯೋತಿ ಯೋಜನೆಯಡಿ ಕೊಡಮಾಡುವ 200 ಯುನಿಟ್ ಉಚಿತ ವಿದ್ಯುತ್(Free current scheme) ಯೋಜನೆ ಅರ್ಜಿ ಸಲ್ಲಿಸಲು ಕೊನೆಗೂ ಸರ್ಕಾರವು ಜುಲೈ 25 ಡೆಡ್ ಲೈನ್ ನೀಡಿದೆ.

ಹೌದು, ಜುಲೈ(July) 1 ರಿಂದ ರಾಜ್ಯದಲ್ಲಿ 200 ಗೃಹ ಉಚಿತ ವಿದ್ಯುತ್‌ ಯೋಜನೆ ಜಾರಿಯಾಗಿದೆ. ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಉಚಿತ ವಿದ್ಯುತ್‌ ಸೌಲಭ್ಯ ಬೇಕು ಎಂದರೆ ಜುಲೈ 25ರೊಳಗಾಗಿ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ (Gruhajyothi Scheme) ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್‌ ಪಡೆಯಬಹುದು. ಯಾರು ಅರ್ಜಿ ಸಲ್ಲಿಕೆ ಮಾಡಿರುವುದಿಲ್ಲವೋ, ಅಥವಾ 25ರ ನಂತರ ಸಲ್ಲಿಕೆ ಮಾಡುತ್ತಾರೋ ಅಂತವರಿಗೆ ಆಗಸ್ಟ್‌ನಲ್ಲಿ ಪೂರ್ಣ ಬಿಲ್‌ ನೀಡಲಾಗುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್‌(K J George) ಸ್ಪಷ್ಟನೆ ನೀಡಿದ್ದಾರೆ.

ಇಂಧನ ಇಲಾಖೆಯ ಈ ನಿಯಮವನ್ನು ಗಮನವಿಟ್ಟು ಓದಿ: ನೀವು ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಜುಲೈ 25 ನಂತರ ಸಲ್ಲಿಸಿದರೆ ಅದು ಆಗಸ್ಟ್ ತಿಂಗಳಿಂದ ಎಂದು ಕೌಂಟ್ ಆಗುತ್ತದೆ. ಅದೇ ರೀತಿ, ನೀವು ಆಗಸ್ಟ್(August) 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ, ನೀವು ಆ ತಿಂಗಳಿಗೆ ನಿಮ್ಮ ಮಾಸಿಕ ಬಳಕೆಯು ಸರಾಸರಿ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದಲ್ಲಿ ವಿದ್ಯುತ್ ಉಚಿತವಾಗಿ ಪಡೆಯಬಹುದು.

ಅಂದಹಾಗೆ ಪ್ರತೀ ಮನೆಯ ಮೀಟರ್ ರೀಡಿಂಗ್(Meeter reading), ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ನಡೆಯುತ್ತದೆ. ಆದರೆ ಗೃಹಜ್ಯೋತಿಗೆ ಅರ್ಜಿ ಹಾಕಲು ಯಾವುದೇ ಕೊನೆಯ ದಿನಾಂಕ ಇಲ್ಲ. ಯಾವಾಗ ಬೇಕಾದರೂ ಅರ್ಜಿ ಹಾಕಬಹುದು. ನೀವು ಅರ್ಜಿ ಸಲ್ಲಿಸುವ ದಿನಾಂಕವನ್ನು ನೋಡಿ ಬಿಲ್ ನೀಡಲಾಗುವುದು. ನೀವು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಅಭಿಲಾಷೆ.

ಇದನ್ನೂ ಓದಿ: Gruha jyothi Scheme: ನೀವಿನ್ನೂ ‘ಗೃಹಜ್ಯೋತಿ’ಗೆ ಅರ್ಜಿ ಹಾಕಿಲ್ಲವೇ..? ಹಾಗಿದ್ರೆ ಸರ್ಕಾರದಿಂದ ಬಂತು ಹೊಸ ರೂಲ್ಸ್ !!

You may also like

Leave a Comment