Home » UT ಖಾದರ್ ಸಾಹೇಬ್ರ ಮಾತು ಅರ್ಥ ಆಗ್ತಿಲ್ಲ: ಸ್ಪೀಕರ್ ಟು ಕನ್ನಡ ಆಪ್ ಮಾಡಿಕೊಡಿ ಅಂದ ಯತ್ನಾಳ್ – ಸದನದಲ್ಲಿ ಸ್ವಾರಸ್ಯಮಯ ಘಟನೆ

UT ಖಾದರ್ ಸಾಹೇಬ್ರ ಮಾತು ಅರ್ಥ ಆಗ್ತಿಲ್ಲ: ಸ್ಪೀಕರ್ ಟು ಕನ್ನಡ ಆಪ್ ಮಾಡಿಕೊಡಿ ಅಂದ ಯತ್ನಾಳ್ – ಸದನದಲ್ಲಿ ಸ್ವಾರಸ್ಯಮಯ ಘಟನೆ

by ಹೊಸಕನ್ನಡ
0 comments
UT khadar -Yatnal

UT khadar -Yatnal: ವಿಧಾನಮಂಡಲದ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡುವ ಕನ್ನಡ ಭಾಷೆಯ ಬಗ್ಗೆ ನಿನ್ನೆ ವಿಧಾನಸಭೆಯ ಅಧಿವೇಶನದಲ್ಲಿ ಸ್ವಾರಸ್ಯಕರ ಮಾತುಕತೆ ನಡೆದಿತ್ತು. ಯು ಟಿ ಖಾದರ್ ಅವರ ಮಾತೃಭಾಷೆ ಬ್ಯಾರಿ ಭಾಷೆ. ಶಾಲೆಯಲ್ಲಿ ಓದಿದ್ದು ಕನ್ನಡ. ದಕ್ಷಿಣ ಕನ್ನಡದಲ್ಲಿ ಸಹಜವಾಗಿ ತುಳು ಭಾಷೆಯ ಪ್ರಾಬಲ್ಯ. ಇದೆಲ್ಲಾದರ ಮಧ್ಯೆ ಬೆಳೆದ ಸ್ಪೀಕರ್ ಯುಟಿ ಖಾದರ್ ಅವರ ಭಾಷೆಯಲ್ಲಿ ಒಂದು ತೆರನಾದದ ವಿಶೇಷ ಮೋಡಿ – ಸ್ಲಾಂಗ್ ಕಾಣುತ್ತಿದೆ. ಆದ್ದರಿಂದ ಕೆಲವು ಉತ್ತರ ಕನ್ನಡ ಅಥವಾ ಬೆಂಗಳೂರು ಕಡೆಯ ವ್ಯಕ್ತಿಗಳಿಗೆ ಅವರ ಮಾತು ಅರ್ಥವಾಗಲು ಸಭೆಯ ತೆಗೆದುಕೊಳ್ಳುವುದು ಸಹಜ. ಇದೇ ವಿಷಯವು ಇವತ್ತು ವಿಧಾನಸೌಧದಲ್ಲಿ ಸ್ವಾರಸ್ಯಕರ ಮಾತುಕತೆಗೆ ನಾಂದಿಯಾಗಿತ್ತು.

“ಸ್ಪೀಕರ್ ಸಾಹೇಬರೇ, ನಮಗೆ ನಿಮ್ಮ ಭಾಷೆ ಅರ್ಥವಾಗುವುದಿಲ್ಲ, ನಮಗೆ ಮೈಸೂರು ಕರ್ನಾಟಕದ ಭಾಷೆಯ ಅರ್ಥವಾಗುತ್ತೆ. ಹೈದರಾಬಾದ್ ಕರ್ನಾಟಕದ ಭಾಷೆಗೂ ತಿಳಿಯುತ್ತೆ. ಆದ್ರೆ ನಮಗೆ ನಿಮ್ಮ ಭಾಷೆ ಅರ್ಥಮಾಡಿಕೊಳ್ಳೋದು ಕಷ್ಟ ಆಗುತ್ತೆ. ಅದಕ್ಕೆ ಒಂದು ಆಪ್ ಮಾಡಿ ಕೊಡಿ. ಸಂಸತ್ತಿನಲ್ಲಿ ಹಿಂದಿಯಿಂದ ಕನ್ನಡಕ್ಕೆ, ಕನ್ನಡದಿಂದ ಹಿಂದಿಗೆ ತರ್ಜುಮೆ ಮಾಡ್ತಾರಲ್ಲ ಆ ರೀತಿಯದ್ದು. ನಮಗೆ ‘ ಸ್ಪೀಕರ್ ‘ ನಿಂದ ಕನ್ನಡಕ್ಕೆ ತರ್ಜುಮೆ ಮಾಡೋ ಆಪ್ ಕೊಡಿಸಿ ” ಎಂದು ತಮಾಷೆ ಮಾಡಿ ಮಾತು ಮುಗಿಸಿದರು ವಿಜಾಪುರ ಶಾಸಕ ಬಸನಗೌಡ ಪಾಟೀಲ್(UT khadar -Yatnal) ಯತ್ನಾಳ್.

ಇದನ್ನೂ ಓದಿ: ಕನ್ನಯ್ಯ ಕುಮಾರ್ ನನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಘಟಕದ (NSUI) ಎಐಸಿಸಿ ಉಸ್ತುವಾರಿಯಾಗಿ ನೇಮಿಸಿದ ಕಾಂಗ್ರೆಸ್ ಪಕ್ಷ

You may also like

Leave a Comment