ಅರುಣ್ ಕುಮಾರ್ ಪುತ್ತಿಲ-ಬಿ.ಎಲ್.ಸಂತೋಷ್: ಪುತ್ತೂರು ಕ್ಷೇತ್ರದಲ್ಲಿ ಬಂಡಾಯ ಸಾರಿ ಬಿಜೆಪಿ(ಬಿಜೆಪಿ) ಸೋಲಿಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ(ಅರುಣ್ ಕುಮಾರ್ ಪುತ್ತಿಲ) ಬಿಜೆಪಿ ರಾಷ್ಟ್ರೀಯ ಸಂಘದ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್(ಅರುಣ್ ಕುಮಾರ್ ಪುತ್ತಿಲ-ಬಿಎಲ್ ಸಂತೋಷ್) ಅವರನ್ನು ಭೇಟಿ ಮಾಡಲಾಗಿದೆ. ಲೋಕಸಭಾ ಚುನಾವಣೆ ಹತ್ತಿರವಿರುವಾಗಲೇ ಈ ಭೇಟಿ ನಡೆದಿರುವುದು ದಕ್ಷಿಣ ಕನ್ನಡ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. ದಿಲ್ಲಿಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ಎಂದು ಸೂಚಿಸಲಾಗಿದೆ.
ಈ ಸಲದ ವಿಧಾನಸಭೆಯ ಚುನಾವಣೆಯಲ್ಲಿ (ಅಸೆಂಬ್ಲಿ ಚುನಾವಣೆ) ಪುತ್ತೂರು ಕ್ಷೇತ್ರದಿಂದ ಸ್ವತಂತ್ರವಾಗಿ, ಅಲ್ಪ ಮತದಿಂದ ಸೋತರೂ ಇಡೀ ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿ, ತನ್ನದೇ ಒಂದು ಚಾರ್ಮ್ ಕ್ರಿಯೇಟ್ ಪಕ್ಕಾ ಹಿಂದುತ್ವವಾದಿ ಎಂದರೆ ಅದು ಅರುಣ್ ಕುಮಾರ್ ಪುತ್ತಿಲ(ಅರುಣ್ಕುಮಾರ್ ಪುಟ್ಟಿಲ)ರು. ಇದಾದ ಬಳಿಕ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಬಿಜೆಪಿ ಟಕ್ಕರ್ ನೀಡಲು ಮುಂದಾಗಿದ್ದಾರೆ ಎಂಬ ಮಾತು ಕರಾವಳಿ ಭಾಗದಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ. ಜೊತೆಗೆ ಕರಾವಳಿ ಭಾಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಭವಿಷ್ಯದಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟು ಕೂಡ ಇದೆ ಎಂದು ಹೇಳಿದ್ದಾರೆ. ಆದರೆ ಈ ನಡುವೆ ಅಚ್ಚರಿ ಎಂಬಂತೆ ಅರುಣ್ ಕುಮಾರ್ ಪುತ್ತಿಲರು ಏಕಾಏಕಿ ದೆಹಲಿಗೆ ತೆರಳಿ ಬಿಜೆಪಿ ಸಂಘಟನಾ ಚತುರ ಬಿ ಎಲ್ ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಹಾಗಾದರೆ ಅವರ ನಡುವೆ ನಡೆದ ಮಾತುಕತೆಗಳೇನು ?
ಹೌದು, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕರಾವಳಿ ಭಾಗದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಪ್ರಧಾನ ಪಾತ್ರವಹಿಸಿ ಹಾಗೂ ಪುತ್ತೂರಿನಲ್ಲಿ ಹಾಲಿ ಶಾಸಕರಿಗೆ ಟಕೆಟ್ ನಿರಾಕರಿಸಿ ಹೊಸ ಅಭ್ಯರ್ಥಿಯ ಹುಡುಕಾಟದ ಮುಂಚೂಣಿಯಲ್ಲಿದ್ದವರು ಬಿ ಎಲ್ ಸಂತೋಷ್. ಆಗ ಅರುಣ್ ಕುಮಾರ್ ಪುತ್ತಿಲ ಕೂಡಾ ಬಿಜೆಪಿಯ ಓರ್ವ ಪ್ರಬಲ ಅಭ್ಯರ್ಥಿ ಆಗಿದ್ದರು. ಆದರೆ ಪುತ್ತಿಲರಿಗೆ ಟಿಕೆಟ್ ತಪ್ಪಿಸಿ, ಆಶಾ ತಿಮ್ಮಪ್ಪ ಗೌಡ ಎಂಬ ಮಹಿಳೆಗೆ ಟಿಕೆಟ್ ನೀಡಿ, ಯಾರನ್ನು ಬೇಕಾದರೂ ಗೆಲ್ಲಿಸಬಲ್ಲೆವು ಎಂದು ದಾಷ್ಟ್ಯ ಮೆರೆದಿದ್ದರು ಈ ಬಿಎಲ್ ಸಂತೋಷ್ ! ನಂತ್ರ ಆದ ಪರಿಣಾಮ ಎಲ್ಲರಿಗೂ ಗೊತ್ತೇ ಇದೆ.
ಆದರೀಗ ಈ ಇಬ್ಬರೂ ನಾಯಕರು ಭೇಟಿಯಾಗಿದ್ದಾರೆ. ಅಂದಹಾಗೆ ಇಬ್ಬರು ನಾಯಕರುಗಳ ನಡುವೆ ಮುಂದಿನ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆಗಳು ನಡೆದಿದೆ ಎನ್ನಲಾಗುತ್ತಿದೆ. ಅರುಣ್ ಕುಮಾರ್ ಪುತ್ತಿಲರವರು ತಾವು ಮುಂದಿನ ಚುನಾವಣೆಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತಮ್ಮ ಪುತ್ತೂರಿನ ಸ್ಥಳಿಯ ನಾಯಕರುಗಳ ಬಗ್ಗೆ ಹಾಗೂ ಬಿಜೆಪಿ ಆದಂತಹ ನಳಿನ್ ಕುಮಾರ್ ಕಟೀಲ್ ರವರ ಬಗ್ಗೆ ಕೂಡ ಹಲವಾರು ದೂರುಗಳನ್ನು ನೀಡಿ ಮಾತನಾಡಿದ್ದಾರೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಅಂದಹಾಗೆ ಜೂನ್ ತಿಂಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಸೇರಿ ಐವರ ಜೊತೆ ಬಿಎಲ್ ಸಂತೋಷ್ ಸಭೆ ನಡೆಸಿ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ದಿಲ್ಲಿಯ ಬಿಎಲ್ ಸಂತೋಷ್ ನಿವಾಸದಲ್ಲಿ ಸಭೆ ನಡೆದಿದ್ದು, ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಆಚಾರ್ಯ ಹಿಂದಾರು, ಪುತ್ತೂರಿನ ಖ್ಯಾತ ವೈದ್ಯ ಹಾಗೂ ಪುತ್ತಿಲ ಪರಿವಾರದ ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ಗಣೇಶ್ ಹಾಗೂ ಚುನಾವಣೆಯಲ್ಲಿ ಪುತ್ತಿಲ ಪರ ಬ್ಯಾಟ್ ಬೀಸಿದ್ದ ರಾಜರಾಮ್ ಬಿಎಲ್ ಸಭೆಯಲ್ಲಿ ಭಾಗವಹಿಸಿದ್ದರು.
ಪುತ್ತಿಲ ಪರಿವಾರದ ಜೊತೆ ಬಿ.ಎಲ್ ಸಂತೋಷ್, ಎರಡು ಗಂಟೆಗೂ ಅಧಿಕ ಕಾಲ ಸಭೆಯ ನಡೆಸಿದ್ದಾರೆ. ಸಭೆಯಲ್ಲಿ ಸಂತೋಷ್, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ವಸ್ತು ಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ಪುತ್ತೂರಿನಲ್ಲಿ ಚುನಾವಣಾ ಪೂರ್ವದಲ್ಲಿ ಬಿಜೆಪಿಯಲ್ಲಾದ ಬೆಳವಣಿಗೆಯ ಬಗ್ಗೆಯೂ ಅರುಣ್ ಕುಮಾರ್ ಪುತ್ತಿಲ ಅವರಲ್ಲಿ ಸಂತೋಷ್ ಪಡೆದುಕೊಂಡಿದ್ದಾರೆ.
ಅಲ್ಲದೇ ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್, ಬಿಜೆಪಿ ಪಕ್ಷದೊಳಗೆ ಸೇರದ ಬಗ್ಗೆ ಕಾರಣವನ್ನೂ ಕೇಳಿದ್ದಾರೆ. ಬಿಜೆಪಿಯ ಸದಸ್ಯತ್ವ ಪಡೆದು ಬಿಜೆಪಿಯಲ್ಲಿ ಸಕ್ರೀಯ ರಾಗಿ ಸೇವೆ ಸಲ್ಲಿಸಿ, ಹಳೆಯದನ್ನು ಮರೆತು ಪಕ್ಷ ಕಟ್ಟಲು ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಸಹಕಾರ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ಬಿಜೆಪಿ ಭಧ್ರಕೋಟೆ ಮತ್ತು ಸಂಘದ ನೆಲೆಯಲ್ಲೂ ಶಕ್ತಿ ಕೇಂದ್ರ ಆಗಿರುವ ಕಾರಣದಿಂದ ಪುತ್ತೂರಿನಲ್ಲಿ ಕಾರ್ಯಕರ್ತರನ್ನು ಒಂದುಗೂಡಿಸುವ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಮಾತನಾಡಿದ್ದಾರೆ. ಪುತ್ತೂರಿನ ಬಿಜೆಪಿಯ ಅಯಕಟ್ಟಿನಲ್ಲಿರುವ ಮುಖಂಡರುಗಳಿಗೆ ಕಾರ್ಯಕರ್ತರ ಹಿಡಿತವಾಗಲಿ, ಅವರ ಜೊತೆ ಅನ್ಯೋನ್ಯ ಸಂಬಂಧವಾಗಲಿ ಇಲ್ಲದಿರುವುದು ಈ ಚುನಾವಣಾ ಸಂದರ್ಭ ಪಕ್ಷದ ಉನ್ನತ ನಾಯಕರ ಗಮನಕ್ಕೆ ಬಂದಿದೆ.
ಇನ್ನೊಂದು ಕಡೆ ಪುತ್ತೂರಿನ ಬಿಜೆಪಿಯ ಶಕ್ತಿ ಕೇಂದ್ರದ ವಿವಿಧ ಸ್ಥಳೀಯ ನಾಯಕರುಗಳಿಗೆ ಅರುಣ್ ಪುತ್ತಿಲ ಅಂದರೆ ಆಗೋದಿಲ್ಲ. ಪಕ್ಷದಲ್ಲಿ ಹತ್ತಾರು ವರ್ಷ ದುಡಿದ ಆ ನಾಯಕರಿಗೆ ಕಳೆದ ಸಲ ಬಿಜೆಪಿ ಮತ್ತು ಆರೆಸಸ್ ನಾಯಕರು ಅವಮಾನ ಮಾಡಿದ್ದರು. ‘ ಎಲ್ಲಿಂದಲೋ ಬಂದವರು ‘, ಎಲ್ಲಿಂದಲೋ ಒಂದು ಅಭ್ಯರ್ಥಿ ತಂದು ಪುತ್ತೂರಿನಲ್ಲಿ ಕೂರಿಸಿದರು. ಹಾಲಿ ಶಾಸಕರ ಬಗ್ಗೆ ಒಲವಿದ್ದ ಈ ಸ್ಥಳೀಯ ನಾಯಕರಿಗೆ ಕವಡೆ ಕಿಮ್ಮತ್ತು ಕೊಟ್ಟಿಲ್ಲ ಬಿ ಎಲ್ ಸಂತೋಷ್ ! ಅವೆಲ್ಲದರ ಪರಿಣಾಮ ಪಕ್ಷದ ಸ್ಥಳೀಯ ನಾಯಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿ ಮತದಾರರು ಸಾರಾಸಗಟಾಗಿ ಅರುಣ್ ಪುತ್ತಿಲ ಎಂಬ ಬಂಡಾಯ ಅಭ್ಯರ್ಥಿ ಮತ ಹಾಕಿದ್ದರು. ಕೆಲವೇ ಕೆಲವು ಓಟುಗಳ ಅಂತರದಲ್ಲಿ ಅರುಣ್ ದ್ವಿತೀಯ ಸ್ಥಾನಕ್ಕೆ ಬಂದು ನಿಂತಿದ್ದರು.
ಅಲ್ಲಿ ಅಂದು ಸಿಕ್ಕ ಜಯವನ್ನು ಲೋಕಸಭಾ ಚುನಾವಣೆಯ ವರೆಗೆ ತೆಗೆದುಕೊಂಡು ಹೋಗುವುದು ಅರುಣ್ ಪುತ್ತಿಲ ಬಣದ ಉದ್ದೇಶ. ಲೋಕಸಭೆಯಲ್ಲಿ ಸ್ಪರ್ಧಿಸಲು ಈಗಾಗಲೇ ಪುತ್ತಿಲ ಪರಿವಾರ ಸ್ಥಾಪಿಸಿಕೊಂಡು ಪ್ರಯತ್ನಗಳು ನಡೆದಿವೆ. ಈಗ, ಅರುಣ್ ಪುತ್ತಿಲ್ಲ ಮತ್ತು ಬಿ ಎಲ್ ಸಂತೋಷ್ ಇತರ ನಾಯಕರುಗಳೊಂದಿಗೆ ದೆಹಲಿಯ ಬಿಜೆಪಿ ಪಡಸಾಲೆಯಲ್ಲಿ ಕಾಣಿಸಿಕೊಂಡು ಹಲವು ರಾಜಕೀಯ ಇಕ್ವೇಶನ್ ಗಳಿಗೆ ವಸ್ತುವಾಗಿದ್ದಾರೆ. ಅರುಣ್ ಪುತ್ತಿಲ ಮುಂದಿನ ದಕ್ಷಿಣ ಕನ್ನಡದ ಬಿಜೆಪಿ ಲೋಕಸಭಾ ಅಭ್ಯರ್ಥಿಯೇ?, ಆ ನಿಟ್ಟಿನಲ್ಲಿ ಚರ್ಚೆ ನಡೆದಿದೆಯೇ?; ಒಂದು ವೇಳೆ ಅದು ನಿಜ ಆದ್ರೆ ,ನಳಿನ್ ಕುಮಾರ್ ಕಟೀಲ್ ಕರಾವಳಿಯಿಂದ ಎಕ್ಸಿಟ್ ಆದ ಹಾಗೆಯೇ ! ಅಥವಾ ಅರುಣ್ ಕುಮಾರ್ ಪುತ್ತಿಲರನ್ನು ಬಿಜೆಪಿಯು ಕರಾವಳಿ ಭಾಗದಲ್ಲಿ ಪ್ರಬಲ ಸಂಘಟಕರಾಗಿ ಬಳಸಿಕೊಳ್ಳಲಿದೆಯೇ ? ಮುಂದಿನ ವಿಧಾನಸಭಾ ಟಿಕೆಟ್ ನೀಡುವ ಭರವಸೆ ನೀಡಲಾಗಿದೆಯೇ ? ಅಥವಾ ಮುಂದಿನ 8 ತಿಂಗಳುಗಳಲ್ಲಿ ನಡೆಯುವ ಲೋಕ ಚುನಾವಣೆಯಲ್ಲಿ ಸ್ಪರ್ಧೆಗೆ ಒಡ್ಡಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ. ಒಂದಂತೂ ನಿಜ, ಪುತ್ತಿಲ ಪರಿವಾರವನ್ನು ತಕ್ಷಣಕ್ಕೆ ಸಮಾಧಾನಿಸುವ ಕೆಲಸ ಆಗಲಿದೆ, ಅದೂ ಬರುವ ವಾರದ ಒಳಗೆ ಮಹತ್ವದ ನಿರ್ಧಾರ ಪ್ರಕಟ ಆಗಲಿದೆ.
