Home » Nalin Kumar kateel- MP Renukacharya: ರಾಜ್ಯದಲ್ಲಿ ಬಿಜೆಪಿ ಸೋಲಲು ರಾಜ್ಯಾಧ್ಯಕ್ಷರೇ ಕಾರಣ, ಆ ಸ್ಥಾನದಲ್ಲಿರೋ ಅರ್ಹತೆ ಅವರಿಗಿಲ್ಲ !! ಕಟೀಲ್ ಎಚ್ಚರಿಕೆ ಬೆನ್ನಲ್ಲೇ ರೊಚ್ಚಿಗೆದ್ದ ಹೊನ್ನಳ್ಳಿ ಹುಲಿ !!

Nalin Kumar kateel- MP Renukacharya: ರಾಜ್ಯದಲ್ಲಿ ಬಿಜೆಪಿ ಸೋಲಲು ರಾಜ್ಯಾಧ್ಯಕ್ಷರೇ ಕಾರಣ, ಆ ಸ್ಥಾನದಲ್ಲಿರೋ ಅರ್ಹತೆ ಅವರಿಗಿಲ್ಲ !! ಕಟೀಲ್ ಎಚ್ಚರಿಕೆ ಬೆನ್ನಲ್ಲೇ ರೊಚ್ಚಿಗೆದ್ದ ಹೊನ್ನಳ್ಳಿ ಹುಲಿ !!

by ಹೊಸಕನ್ನಡ
0 comments
Nalin Kumar kateel-MP Renukacharya

Nalin Kumar kateel-MP Renukacharya: ‘ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ(Karnataka Assembly election) ಬಿಜೆಪಿ(BJP) ಸೋತಿದೆ. ಆದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್‌(Nalin Kumar kateel) ಕಟೀಲ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ(MP Renukacharya) ಆಗ್ರಹಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(Assembly election) ಬಿಜೆಪಿ ಹೀನಾಯವಾಗಿ ಸೋಲುಂಡಿದ್ದು, ಸೋಲಿನ ಬಗ್ಗೆ ಪಕ್ಷದ ನಾಯಕರೊಳಗೇ ಅಪಸ್ವರಗಳು ಕೇಳಿ ಬರುತ್ತಿವೆ. ನಾಯಕರೂ ಒಬ್ಬರನ್ನೊಬ್ಬರು ದೂರಿಕೊಂಡು ಬೇಕಾಬಿಟ್ಟಿ ಹೇಳಿಕೆ ನೀಡುತ್ತಾ ನಾಲಗೆ ಹರಿಬಿಡುತ್ತಿದ್ದಾರೆ. ಸಾರ್ವಜನಿಕವಾಗಿಯೇ ಇದೆಲ್ಲದೂ ಆಗುತ್ತಿದ್ದು ಪಕ್ಷಕ್ಕೆ ಭಾರೀ ಮುಜುಗರ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್(Nalin Kumar kateel) ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಲು ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದ್ದರು. ಆದರೀಗ ಈ ಬೆನ್ನಲ್ಲೇ ಬಿಜೆಪಿಯ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ರಾಜ್ಯಾಧ್ಯಕ್ಷರ (Nalin Kumar kateel-MP Renukacharya) ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

ಹೌದು, ಇಂದು ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರೇಣುಕಾಚಾರ್ಯ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಟೀಲ್ ನಾಯಕತ್ವದಲ್ಲೇ ಬಿಜೆಪಿ ಗೆ ರಾಜ್ಯದಲ್ಲಿ ಹೀನಾಯ ಸೋಲಾಗಿದ್ದರಿಂದ ಅಧ್ಯಕ್ಷ ಸ್ಥಾನ ಮುಂದುವರಿಯಲು ಅವರಿಗೆ ನೈತಿಕ ಹಕ್ಕಿಲ್ಲ, ಕೂಡಲೇ ರಾಜಿನಾಮೆ ಸಲ್ಲಿಸಬೇಕು ಎಂದು ರೇಣುಕಾಚಾರ್ಯ ಹೇಳಿದರು.

ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ಯಡಿಯೂರಪ್ಪನವರ(Yadiyurappa) ಪರವಾಗಿ ಮಾತನಾಡಿದರೆ ಅದು ಪಕ್ಷ ವಿರೋಧಿಯಾ? ಯಡಿಯೂರಪ್ಪ ನವರ ವಿರುದ್ಧವಾಗಿ ಮಾತನಾಡಿದರೆ ಅದು ಪಕ್ಷದ ಚಟುವಟಿಕೆಯಾ? ಯಡಿಯೂರಪ್ಪ ಒಬ್ಬ ಹುಟ್ಟು ಹೋರಾಟಗಾರ. ನೂರಾರು ಹೋರಾಟಗಳನ್ನು ಮಾಡಿ ಜೈಲಿಗೆ ಹೋಗಿಬಂದವರು. ಅನೇಕ ಬಾರಿ ದೆಹಲಿಯಲ್ಲಿ ಹೇಳಿಬಂದೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪ್ರಸ್ತುತ ವಿದ್ಯಮಾನಗಳ ಹತ್ತಾರು ಬಾರಿ ಹೇಳಿದ್ದೆನೆ. ಬಸವರಾಜ್ ಬೊಮ್ಮಾಯಿ(Basavaraj bommai)ಕೈಗಳನ್ನು ಕಟ್ಟಿ ಹಾಕಿ ಅಧಿಕಾರ ಮಾಡಿಸಿದ್ದೀರಿ. ರೇಣುಕಾಚಾರ್ಯ ಸೋತರು ಎಂಬ ಹತಾಶೆಯಿಂದ ಮಾತನಾಡುತ್ತಿಲ್ಲ. ನಾನು ಸೋತಿಲ್ಲ, ಜನ 75 ಸಾವಿರ ಮತಗಳನ್ನು ಹಾಕಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಮೋದಿಯವರು ಪ್ರಧಾನಿಯಾಗಬೇಕು. ಮತ್ತೊಮ್ಮೆ ಆತ್ಮವಲೋಕನ ನಡೆದು ಬಿಜೆಪಿ ಹೊಸ ಹುಟ್ಟು ಪಡೆಯಬೇಕು’ ಎಂದು ಹೇಳಿದ್ದಾರೆ.

ಇಷ್ಟೆ ಅಲ್ಲದೆ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವುದು ಕಟೀಲ್ ಗೆ ಆಗಲಿಲ್ಲ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಬೇಡವೆಂದರೂ ಕಟೀಲ್ ಮತ್ತು ಇತರ ನಾಯಕರು ಕಿವಿಗೆ ಹಾಕಿಕೊಳ್ಳಲಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ದಿವಂಗತ ಅನಂತ ಕುಮಾರ್ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಲಾಯಿತು ಎಂದು ರೇಣುಕಾಚಾರ್ಯ ಹೇಳಿದರು.

ಇದನ್ನೂ ಓದಿ: Free electricity Scheme: ಫ್ರೀ ಕರೆಂಟ್ ಪಡೆಯುವವರಿಗೆಲ್ಲ ಹೊಸ ರೂಲ್ಸ್ !! ಇದನ್ನು ಮಾಡ್ಲಿಲ್ಲ ಅಂದ್ರೆ ನಿಮಗೆ ಲಾಸ್!!

You may also like

Leave a Comment