Home » Kanhaiya Kumar: ಕನ್ನಯ್ಯ ಕುಮಾರ್ ನನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಘಟಕದ (NSUI) ಎಐಸಿಸಿ ಉಸ್ತುವಾರಿಯಾಗಿ ನೇಮಿಸಿದ ಕಾಂಗ್ರೆಸ್ ಪಕ್ಷ

Kanhaiya Kumar: ಕನ್ನಯ್ಯ ಕುಮಾರ್ ನನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಘಟಕದ (NSUI) ಎಐಸಿಸಿ ಉಸ್ತುವಾರಿಯಾಗಿ ನೇಮಿಸಿದ ಕಾಂಗ್ರೆಸ್ ಪಕ್ಷ

by ಹೊಸಕನ್ನಡ
0 comments

Kanhaiya Kumar: ನವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಕುಮಾರ್ ರನ್ನು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಘಟಕದ (NSUI) ಎಐಸಿಸಿ ಉಸ್ತುವಾರಿಯಾಗಿ ಕಾಂಗ್ರೆಸ್ ಪಕ್ಷ ನೇಮಿಸಿ ಆದೇಶ ಹೊರಡಿಸಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಈ ಆದೇಶವನ್ನು ಹೊರಡಿಸಲಾಗಿದೆ.

ಕನ್ಹಯ್ಯಾ ಕುಮಾರ್ ಅವರನ್ನು ತಕ್ಷಣದಿಂದಲ ಜಾರಿಗೆ ಬರುವಂತೆ NSUI ಉಸ್ತುವಾರಿಯಾಗಿ ತಕ್ಷಣದಿಂದಲೇ ಅನ್ವಯವಾಗುವಂತೆ ನೇಮಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಘೋಷಣೆಯ ಬೆನ್ನ ಹಿಂದೆ ಇದ್ದಾರೆ.

ಹಾಲಿ NSUI ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಜಾಗಕ್ಕೆ ಕನ್ನಯ್ಯ ಕುಮಾರ್(Kanhaiya Kumar) ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿಭಾಗದ ಒಕ್ಕೂಟದ ಅಧ್ಯಕ್ಷರಾಗಿದ್ದ ಕನ್ನಯ್ಯ ಕುಮಾರ್ ಅವರು ಭಾರತ ಜೋಡೋ ಯಾತ್ರೆಯ ಉದ್ದಕ್ಕೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಸಾತ್ ನೀಡಿದ್ದರು. ರಾಹುಲ್ ಗಾಂಧಿ ಜತೆ ಸೇರಿ ಪಾದಯಾತ್ರೆಯಲ್ಲಿ ಕನ್ಹಯ್ಯಾ ಕುಮಾರ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೆಜ್ಜೆ ಹಾಕಿದ್ದರು ಕನ್ನಯ್ಯಾ ಕುಮಾರ್. ಇದೀಗ ಆ ಬೆಂಬಲಕ್ಕೆ ಒಳ್ಳೆಯ ಸ್ಥಾನವನ್ನೇ ಕೊಟ್ಟಿದ್ದಾರೆ ರಾಹುಲ್ ಗಾಂಧಿ.

ಇದನ್ನೂ ಓದಿ: Free bus travel: ಶಕ್ತಿ ಯೋಜನೆ ಎಫೆಕ್ಟ್ : ಬುರ್ಖಾ ಧರಿಸಿ ಬಸ್ಸಲ್ಲಿ ಫ್ರೀಯಾಗಿ ಪ್ರಯಾಣಿಸಿದ ವ್ಯಕ್ತಿ – ಸಿಕ್ಕಿಬಿದ್ದದ್ದೇ ವಿಚಿತ್ರ !!

You may also like

Leave a Comment