NDA-Maha Mythree: ಬೆಂಗಳೂರಿನಲ್ಲಿ (Bangalore)ವಿಪಕ್ಷಗಳ ಮೈತ್ರಿಯ 2ನೇ ಸಭೆ ನಡೆಯುತ್ತಿದೆ. ಘಟಾನುಘಟಿ ನಾಯಕರು ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ಸೇರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಮಣಿಸಲು 28 ಪಕ್ಷದ ಪ್ರಮುಖ 80 ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಈ ಸಭೆಗೆ ಬಿಜೆಪಿ(BJP) ಬಿಗ್ ಶಾಕ್ ಎದುರಾಗಿದೆ.
ಹೌದು, ಬೆಂಗಳೂರಿನ ತಾಜ್ ವೆಸ್ಟಂಡ್ ತಾರಾ(Taj westend tara) ಹೋಟೆಲಿನಲ್ಲಿ ವಿಪಕ್ಷಗಳ ಮೈತ್ರಿ ಸಭೆ ನಡೆಯುತ್ತಿದ್ದು, ಘಟಾನುಘಟಿ ನಾಯಕರು ಬಂದು ಸೇರಿದ್ದಾರೆ. ಅಲ್ಲದೆ ಮೈತ್ರಿಗೆ ಮತ್ತಷ್ಟು ಪಕ್ಷಗಳನ್ನು ಸೇರಿಸಿಕೊಳ್ಳಲು ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ವಿಪಕ್ಷ ಮೈತ್ರಿಗೆ ಬಿಜೆಪಿ ನಡುಕ ತರಿಸಿದೆ. ಯಾಕೆಂದರೆ ಈ ಸಭೆಗೆ ತಿರುಗೇಟು ನೀಡಲು ಬಿಜೆಪಿ ಎನ್‌ಡಿಎ(NDA) ಮಿತ್ರ ಪಕ್ಷಗಳ ಸಭೆಯನ್ನು(NDA-Maha Mythree) ಇಂದು ದೆಹಲಿಯಲ್ಲಿ ಆಯೋಜಿಸಲಾಗಿದ್ದು, ಎನ್‌ಡಿಎ ಸಭೆಗೆ ಬರೋಬ್ಬರಿ 38 ಪಕ್ಷಗಳು ಬೆಂಬಲ ಸೂಚಿಸಿದೆ. ಇಂದು ನವದೆಹಲಿಯಲ್ಲಿ ಅಶೋಕ ಹೊಟೆಲ್‌ನಲ್ಲಿ ಎನ್‌ಡಿಎ ಸಭೆ ನಡೆಯಲಿದೆ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ತಿಳಿಸಿದ್ದಾರೆ.
ಅಂದಹಾಗೆ 2024ರ ಲೋಕಸಭೆ ಚುನಾವಣೆ(Parliament election)ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಭೆ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದರ ಬೆನ್ನಲ್ಲೇ ರಣತಂತ್ರ ರೂಪಿಸಲು ಮುಂದಾಗಿರುವ ಬಿಜೆಪಿ, ಇಂದು ಎನ್‌ಡಿಎ ಮೈತ್ರಿಕೂಟದ ಸಭೆ ನಡೆಸಲು ಮಿತ್ರ ಪಕ್ಷಗಳಿಗೆ ಆಹ್ವಾನ ನೀಡಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನಡ್ಡಾ, ಎನ್‌ಡಿಎ ಪಕ್ಷಗಳ ವ್ಯಾಪ್ತಿಯು ಇತ್ತೀಚಿನ ವರ್ಷಗಳಲ್ಲಿ ವಿಸ್ತಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳು ಮತ್ತು ಯೋಜನೆಯಿಂದ ಎನ್‌ಡಿಎ ಮತದಾರರು ಸಂತೃಪ್ತರಾಗಿದ್ದಾರೆ ಎಂದು ಹೇಳಿದ್ದರು.
ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda), ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ(Amith sha) ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಕೈಜೋಡಿಸಿರು ಎಕನಾಥ್ ಶಿಂಧೆ(Ekanath shinde) ನೇೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳ ಮುಖಂಡರು ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಹಾರದ ಆರ್ ಎಲ್ ಜೆಪಿ(RLJP) ಮುಖಂಡ ರಾಮವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಜೊತೆ ಬಿಜೆಪಿ ಮಾತುಕತೆ ನಡೆಸಿದೆ. ಹಿಂದೂಸ್ನಾನ್ ಅವಾಮಿ ಮೋರ್ಚಾದ ದಲಿತ ನಾಯಕ ಬಿಹಾರ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ವಿಕಾಸ್ ಶೀಲ್ ಪಕ್ಷದ ಮುಕೇಶ್ ಸಾಹ್ನಿ, ಉಪೇಂದ್ರ ಸಿಂಗ್ ಖುಶ್ವಾಗೆ ಈಗಾಗಲೇ ಎನ್‌ಡಿಎ ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ.
ಅಲ್ಲದೆ ಉತ್ತರ ಪ್ರದೇಶದ ಒಬಿಸಿ ನಾಯಕ ಓಂ ಪ್ರಕಾಶ್ ರಾಜ್ ಭರ್ ಈಗಾಗಲೇ ಎನ್ ಡಿ ಎ ಮರುಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲೇ ಕರ್ನಾಟಕದ ಜೆಡಿಎಸ್ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾ ಅನ್ನೋ ಪ್ರಶ್ನೆ ಹೆಚ್ಚಾಗಿದೆ. ಇತ್ತ ಕಾಂಗ್ರೆಸ್ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಜೆಡಿಎಸ್‌ಗೆ,(JDS) ವಿಪಕ್ಷಗಳ ಮೈತ್ರಿಕೂಟಕ್ಕೆ ಅಹ್ವಾನ ನೀಡಿಲ್ಲ. ಇದರ ಬೆನ್ನಲ್ಲೇ ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಆಹ್ವಾನ ಬಂದರೆ ನೋಡುವುದಾಗಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
