BJP: ಲೋಕಸಭಾ ಚುನಾವಣೆ(Parliament election)ಹತ್ತಾರವಾಗುತ್ತಿರುವಂತೆ ಆಗಾಗ ಅಚ್ಚರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಇದೀಗ ಮತ್ತೊಂದು ಶಾಕ್ ನ್ಯೂಸ್ ಕೊಟ್ಟಿದ್ದು, ಇನ್ನೈದು ತಿಂಗಳಲ್ಲಿ ಪಶ್ಚಿಮ ಬಂಗಾಳದ(West bengal) ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಅಚ್ಚರಿಯ ಭವಿಷ್ಯ ನುಡಿದಿದೆ.
ಹೌದು, ಬಿಜೆಪಿ( BJP) ಸಂಸದ ಶಾಂತನು ಠಾಕೂರ್(Shantanu takur) ತಮ್ಮ ಲೋಕಸಭಾ ಕ್ಷೇತ್ರ ಬೊಂಗಾವ್‌ನಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಟಿಎಂಸಿ(TMC) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇವಲ 5 ತಿಂಗಳಲ್ಲಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (TMC) ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ.
ಪಕ್ಷದ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ದುರಾಡಳಿತದಿಂದಲೇ ಖ್ಯಾತಿ ಗಳಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್(Panchayat) ಚುನಾವಣೆಯಲ್ಲಿ ಟಿಎಂಸಿ ಅಕ್ರಮ ನಡೆಸದೇ ಇದ್ದಿದ್ದರೆ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಉತ್ತಮ ಪ್ರದರ್ಶನ ನೀಡುತ್ತಿತ್ತು. ಆದರೆ ಇದು ಟಿಎಂಸಿ ಸರ್ಕಾರದ ಮೇಲ್ವಿಚಾರಣೆಯಲ್ಲಿ ಕೊನೆಯ ಚುನಾವಣೆಯಾಗಲಿದೆ. ಬಿಜೆಪಿಯ ಬಂಗಾಳದ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮಾತನಾಡಿ, ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ಟಿಎಂಸಿಗೆ ಟಾಂಗ್ ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ ‘ಟಿಎಂಸಿಯ ದುರಾಡಳಿತದ ವಿರುದ್ಧ ಜನರು ದಂಗೆ ಎದ್ದರೂ ಏಳಬಹುದು. ಟಿಎಂಸಿ ಶಾಸಕರು ಮಮತಾಗೆ ಬೆಂಬಲ ನೀಡದೆ ನಿರಾಕರಿಸಿ, ಪಕ್ಷವು ಬಣಗಳಾಗಿ ಹೋಗಬಹುದು. ಪಶ್ಚಿಮ ಬಂಗಾಳದ ಮುಗ್ದ ಜನರ ರಕ್ಷಣೆ ಕೇಂದ್ರ ಸರ್ಕಾರದಿಂದ(Central Government)ಮಾತ್ರ ಸಾಧ್ಯ’ ಎಂದು ಹೇಳಿದರು.
ಇದನ್ನೂ ಓದಿ: Chandrayana -3: ವಿಮಾನದಿಂದ ಸೆಯೆಯಾದ ಚಂದ್ರಯಾನ !! ಉಡಾವಣೆಯ ಬ್ಯೂಟಿಫುಲ್ ವಿಡಿಯೋ ವೈರಲ್ !!
