Home » Indira Canteen: ಅಗ್ಗದ ದರ, ಭರ್ಜರಿ ಊಟಕ್ಕೆ ಬಜೆಟ್ ನಲ್ಲಿ ಭರ್ತಿ 100 ಕೋಟಿ ರೂಪಾಯಿ !

Indira Canteen: ಅಗ್ಗದ ದರ, ಭರ್ಜರಿ ಊಟಕ್ಕೆ ಬಜೆಟ್ ನಲ್ಲಿ ಭರ್ತಿ 100 ಕೋಟಿ ರೂಪಾಯಿ !

0 comments

Indira Canteen: ಸಿದ್ದರಾಮಯ್ಯ (Siddaramaiah) ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ (Indira canteen) ಭಾರೀ ಸದ್ಧು ಮಾಡುತ್ತಿದೆ. ಸಿಎಂ (CM) ಖುರ್ಚಿ ಏರಿದ ಬಳಿಕ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ನೀಡಿದ್ದಾರೆ. ಸದ್ಯ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್’ಗೆ (Indira Canteen) ಈ ಬಾರಿಯ ಬಜೆಟ್‌ನಲ್ಲಿ 100 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆದ ವೇಳೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದರು. ಅದರ ಭಾಗವಾಗಿಯೇ, ಬಡವರು ಹಾಗೂ ಶ್ರಮಿಕರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ತಲೆ ಎತ್ತಿತು. ಇದೀಗ ಬಜೆಟ್ ನಲ್ಲಿ ಇಂದಿರಾ ಕ್ಯಾಂಟೀನ್ ಗೆ (Indira Canteen) 100 ಕೋಟಿ ಮೀಸಲಿಡಲಾಗಿದೆ. ಮೊದಲು ಇಂದಿರಾ ಕ್ಯಾಂಟೀನ್ ಹೊಸ ಮೆನುವನ್ನು ಪರಿಚಯಿಸಲಾಗುವುದು. ಇದನ್ನು ಬಿಬಿಎಂಪಿ ಹಾಗೂ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.

ಎರಡನೇ ಹಂತದಲ್ಲಿ ಎಲ್ಲ ಹೊಸ ಪಟ್ಟಣಗಳಲ್ಲಿ ಹಾಗೂ ಬಿಬಿಎಂಪಿ ಹೊಸ ವಾರ್ಡ್ ಗಳಲ್ಲಿ ವಿಸ್ತರಣೆ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ದುರಸ್ತಿ, ನವೀಕರಣ ಹಾಗೂ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ನೂರು ಕೋಟಿ ರೂಪಾಯಿ ಒದಗಿಸಲಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆದ ವೇಳೆ ಆರಂಭವಾದ ಕ್ಯಾಂಟಿನ್ ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ಅನುದಾನವಿಲ್ಲದೆ ಕ್ಯಾಂಟೀನ್ ಗಳು ಸೊರಗಿ ಹೋಗಿದ್ದವು. ಈ ಬಗ್ಗೆಯೂ ಬಜೆಟ್ ದಾಖಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸ್ಥಗಿತಗೊಳಿಸಿ, ಜನವಿರೋಧಿ ನೀತಿಯನ್ನು ಅನುಸರಿಸಿತು ಎಂದು ಹೇಳಲಾಗಿದೆ.

ಆದರೀಗ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆದ ಬೆನ್ನಲ್ಲೇ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಗಳು ಮತ್ತೆ ಸದ್ದು ಮಾಡುತ್ತಿದೆ.
ಏನೇ ಆಗಲಿ ಸಿದ್ದರಾಮಯ್ಯ ಆರಂಭಿಸಿದ, ನಿತ್ಯ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ, ಶ್ರಮಿಕರಿಗೆ ಕಡಿಮೆ ಹಣದಲ್ಲಿ ಊಟ ದೊರೆಯುವಂತೆ ಮಾಡಿದ್ದ ಇಂದಿರಾ ಕ್ಯಾಂಟೀನ್ ಎಷ್ಟೋ ಸಾವಿರಾರು ಬಡ ಬಗ್ಗರಿಗೆ ಅನ್ನಪೂರ್ಣೆಯಾಗಿದೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ ಜನರಿಗೆ ಕಡಿಮೆ ಬೆಲೆಗೆ ಊಟ ನೀಡಿ ಹೊಟ್ಟೆ ತುಂಬಿಸುತ್ತಿದೆ.

You may also like

Leave a Comment