Home » PM Kisan: ಪಿಎಂ ಕಿಸಾನ್ 15ನೇ ಕಂತಿನ ಹಣ ಇವರಿಗಿಲ್ಲ ! ಕಾರಣವೇನು ತಿಳಿಯಿರಿ ?

PM Kisan: ಪಿಎಂ ಕಿಸಾನ್ 15ನೇ ಕಂತಿನ ಹಣ ಇವರಿಗಿಲ್ಲ ! ಕಾರಣವೇನು ತಿಳಿಯಿರಿ ?

1 comment
PM Kisan Yojana

PM Kisan Yojana: ಪ್ರಧಾನಮಂತ್ರಿ ಕಿಸಾನ್ ಯೋಜನೆಯು ದೇಶದ ಎಲ್ಲಾ ರೈತ ಕುಟುಂಬಗಳಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಖರ್ಚಿಗಾಗಿ ಸರ್ಕಾರ ನೀಡುವ ಆರ್ಥಿಕ ಬೆಂಬಲವಾಗಿದೆ. ಯೋಜನೆಯ ಭಾಗವಾಗಿ, ಫಲಾನುಭವಿಗಳಿಗೆ ಹಣಕಾಸನ್ನು ಸರ್ಕಾರ ನೇರವವಾಗಿ ಖಾತೆಗೆ ಜಮೆ ಮಾಡುತ್ತದೆ. ಮುಖ್ಯವಾಗಿ ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana) ಲಾಭವನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.

ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತ ಕುಟುಂಬಗಳು ವಾರ್ಷಿಕವಾಗಿ ಆರು ಸಾವಿರ ರೂಪಾಯಿ ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. 2000 ರೂಪಾಯಿಯ ಮೂರು ಕಂತಿನಂತೆ ಈ ಮೊತ್ತ ಲಭ್ಯವಾಗುತ್ತದೆ. ಈ ಯೋಜನೆಯಡಿ ಈಗಾಗಲೇ 14 ಕಂತುಗಳನ್ನು ವಿತರಿಸಲಾಗಿದೆ. ಆದರೆ ಲಕ್ಷಾಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಮೊತ್ತಕ್ಕಾಗಿ ಕಾಯುತ್ತಿದ್ದಾರೆ. ಈ ಮೊತ್ತವನ್ನು ಸರ್ಕಾರವು ನವೆಂಬರ್ ಮತ್ತು ಡಿಸೆಂಬರ್ 2023 ರ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಈ ಬಾರಿ ಬಹುತೇಕ ರೈತರಿಗೆ ಪಿಎಂ ಕಿಸಾನ್ ಕಂತು ಲಭ್ಯ ಆಗುವುದಿಲ್ಲ. ಇದಕ್ಕೆ ಕಾರಣ ಏನೆಂದು ತಿಳಿದು ಈಗಲೇ ಸರಿಪಡಿಸಿಕೊಳ್ಳುವುದು ಸೂಕ್ತ. ಹೌದು, ಅರ್ಹ ರೈತರು ಈ ಆರ್ಥಿಕ ಸಹಾಯವನ್ನು ಕಳೆದುಕೊಳ್ಳಬಾರದು ಎಂದಾದರೆ ಕೆಲವು ಕಾರ್ಯಗಳನ್ನು ಮಾಡಬೇಕಾಗುತ್ತದೆ.

ಭೂ ದಾಖಲೆಗಳ ಪರಿಶೀಲನೆ:
ಪ್ರತಿ ಕಂತಿನ ಬಿಡುಗಡೆಯ ಮೊದಲು, ಫಲಾನುಭವಿಗಳ ಪಟ್ಟಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ. ಭೂ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಕೆಲವು ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ. ಈ ಪ್ರಕ್ರಿಯೆಯು ಮುಂಬರುವ ಕಂತಿನಲ್ಲಿ ನಡೆದ ಬಳಿಕ, ಫಲಾನುಭವಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಬಹುದು.

ಇಕೆವೈಸಿ ಅವಶ್ಯಕತೆ:
ತಮ್ಮ ಇಕೆವೈಸಿ (ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಅನ್ನು ಪೂರ್ಣಗೊಳಿಸದ ರೈತರು ಸಹ ಪಟ್ಟಿಯಿಂದ ಹೊರಕ್ಕೆ ಉಳಿಯುತ್ತಾರೆ. ನೀವು ಮುಂದಿನ ಕಂತಿನ ಮೊತ್ತವನ್ನು ಪಡೆಯಬೇಕಾದರೆ ಕೂಡಲೇ ಇಕೆವೈಸಿ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

ಅರ್ಜಿ ನಮೂನೆಯನ್ನು ಪರಿಶೀಲಿಸಿ :

ನೀವು ಎಲ್ಲ ಅರ್ಹತಾ ಮಾನದಂಡಗಳನ್ನು ಹೊಂದಿದ್ದರೂ ಕೂಡಾ ನಿಮ್ಮ ಅರ್ಜಿ ನಮೂನೆಯಲ್ಲಿನ ದೋಷಗಳು ನಿಮಗೆ ಪಿಎಂ ಕಿಸಾನ್ ಮೊತ್ತ ಲಭ್ಯವಾಗದಂತೆ ಮಾಡುತ್ತದೆ. ಉದಾಹರಣೆಗೆ ಲಿಂಗ, ಹೆಸರು, ವಿಳಾಸ ಅಥವಾ ಖಾತೆ ಸಂಖ್ಯೆಗಳಲ್ಲಿನ ತಪ್ಪುಗಳು ಕಂತು ಪ್ರಕ್ರಿಯೆಯನ್ನು ಅಡ್ಡಿಪಡಿಸಬಹುದು. ನಿಮ್ಮ ವಿವರಗಳು ಸರಿ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಇ-ಕೆವೈಸಿ ಶೀಘ್ರ ಮಾಡಿ:
ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಇನ್ನು ವಿಳಂಬ ಮಾಡಬೇಡಿ. ಇ-ಕೆವೈಸಿಯನ್ನು ಶೀಘ್ರವೇ ಮಾಡಿ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪಿಎಂ ಕಿಸಾನ್ ಯೋಜನೆ ವೆಬ್‌ಸೈಟ್ ಅಥವಾ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯಲು ಅರ್ಜಿ ಹೀಗೆ ಸಲ್ಲಿಸಿ:
ಹಂತ 1: ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ.
ಹಂತ 2: ಹೋಮ್‌ಪೇಜ್‌ನಲ್ಲಿ Farmer’s Corner ಗೆ ಹೋಗಿ ‘New Farmer Registration’ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ .
ಹಂತ 4: click here to continue ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5: YES ಮೇಲೆ ಕ್ಲಿಕ್ ಮಾಡಿ. ನಂತರ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ. ಹಂತ 6: ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್‌ ಔಟ್‌ ಅನ್ನು ತೆಗೆಯಿರಿ.

 

ಇದನ್ನು ಓದಿ: Kolar: ಹೆದ್ದಾರಿಯಲ್ಲೇ 15 ಅಡಿಯ ಮುಸ್ಲಿಂ ಕತ್ತಿಯ ಬ್ಯಾನರ್‌, ಹಸಿರು ಬಟ್ಟೆ !! ಅಷ್ಟಕ್ಕೂ ಅಲ್ಲಿ ಉರ್ದು ಭಾಷೆಯಲ್ಲಿ ಏನು ಬರೆದಿದೆ ಗೊತ್ತೇ ?!

You may also like

Leave a Comment