Home » Sonia Gandhi dance video: ರೈತ ಮಹಿಳೆಯರ ವಿಚಿತ್ರ ಆಸೆ ಪೂರೈಸಿದ ಸೋನಿಯಾ ಗಾಂಧಿ-Viral Video !

Sonia Gandhi dance video: ರೈತ ಮಹಿಳೆಯರ ವಿಚಿತ್ರ ಆಸೆ ಪೂರೈಸಿದ ಸೋನಿಯಾ ಗಾಂಧಿ-Viral Video !

0 comments
Sonia Gandhi dance video

Sonia Gandhi dance video: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇತ್ತೀಚೆಗಷ್ಟೇ ಹರಿಯಾಣದ(Hariyana ) ಸೋನಿಪತ್ ಜಿಲ್ಲೆಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಸಂವಾದ ನಡೆಸಿ, ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ರೈತರೊಂದಿಗೆ ಸಮಯ ಕಳೆದರು. ಈ ವೇಳೆ ರೈತ ಮಹಿಳೆಯರು ತಮ್ಮ ಆಸೆಯೊಂದನ್ನು ರಾಹುಲ್‌ ಮುಂದೆ ಬಿಚ್ಚಿಟ್ಟಿದ್ದರು. ಮಹಿಳೆಯರ ಆ ಆಸೆಯನ್ನು ಸ್ವತಃ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಈಡೇರಿಸಿದ್ದಾರೆ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು(Rahul Gandhi ) ಭಾನುವಾರ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಹರಿಯಾಣದ ಸೋನೆಪತ್‌ನ ಕೆಲವು ಮಹಿಳೆಯರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹರಿಯಾಣಿ ಹಾಡುಗಳಿಗೆ ನೃತ್ಯ ಮಾಡುತ್ತಿರುವ ಈ ವಿಡಿಯೋ (Sonia Gandhi dance video) ಈಗ ಸೋಶಿಯಲ್ ಮೀಡಿಯಾದಲ್ಲಿ (Social media) ಭಾರೀ ವೈರಲ್‌ ಆಗಿದೆ.

ಕೆಲ ದಿನಗಳ ಹಿಂದೆ ಹರಿಯಾಣದ ಸೋನಿಪತ್‌ನ ಮದೀನಾ ಗ್ರಾಮದಲ್ಲಿ ರಾಹುಲ್ ಗಾಂಧಿ ಮಹಿಳೆಯರೊಂದಿಗೆ (Farmer women) ಮಾತುಕತೆ ನಡೆಸಿದ್ದರು. ಈ ವೇಳೆ ಮಹಿಳೆಯರ ಸಮಸ್ಯೆಗಳನ್ನು ಮತ್ತು ಅವರ ಮಕ್ಕಳ ಶಿಕ್ಷಣದ ಬಗ್ಗೆ ರಾಹುಲ್ ವಿಚಾರಿಸಿದರು. ಆ ಸಂದರ್ಭದಲ್ಲಿ ಮಹಿಳೆಯರು ತಾವು ದೆಹಲಿ ಸುತ್ತಬೇಕು, ರಾಹುಲ್‌ ಅವರ ಮನೆಯನ್ನು ನೋಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಸರ್ಕಾರ ಈಗಾಗಲೇ ತಮ್ಮ ಮನೆಯನ್ನು ವಾಪಸ್‌ ಪಡೆದಿದೆ, ಆದರೂ ತೊಂದರೆ ಇಲ್ಲ ನಾನು ನಿಮಗೆ ದೆಹಲಿಯನ್ನು (Delhi) ತೋರಿಸುತ್ತೇನೆ ಬನ್ನಿ ಎಂದಿದ್ದರು. ಆ ಬಳಿಕ ರಾಹುಲ್‌ ಗಾಂಧಿ ಮಹಿಳೆಯರನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡಿಸುವಂತೆ ಫೋನ್‌ನಲ್ಲಿಯೇ ಪ್ರಿಯಾಂಕಾ ಗಾಂಧಿ (Priyanka Gandhi) ಅವರೊಂದಿಗೆ ಮಾತನಾಡಿದ್ದರು.

ಆ ಬಳಿಕ ರಾಹುಲ್‌ ಗಾಂಧಿ, ಸೋನೆಪತ್‌ಗೆ ವಿಶೇಷ ವಾಹನವನ್ನು ಕಳುಹಿಸಿ ಈ ಮಹಿಳೆಯರನ್ನು ದೆಹಲಿಗೆ ಕರೆತಂದಿದ್ದರು. ಅವರನ್ನು ಇಂಡಿಯಾ ಗೇಟ್‌ (India Gate) ಸುತ್ತಲೂ ಕರೆದುಕೊಂಡು ಹೋಗಲಾಯಿತು. ಇದಾದ ನಂತರ ಎಲ್ಲಾ ಮಹಿಳೆಯರು ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ಭೇಟಿಯಾದರು.

ವಿಡಿಯೋದ ಆರಂಭಿಕ ಭಾಗದಲ್ಲಿ ರಾಹುಲ್‌ ಗಾಂಧಿ ಮತ್ತು ಸೋನೆಪತ್‌ನ ಇಬ್ಬರು ರೈತರ ಜೊತೆಗಿನ ಸಂಭಾಷಣೆಯನ್ನು ಒಳಗೊಂಡಿದೆ. ದೆಹಲಿಯಲ್ಲಿರುವ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಆಗಮಿಸಿದ ಈ ಮಹಿಳೆಯರನ್ನು ಪ್ರಶ್ನಿಸಿದ ರಾಹುಲ್‌ ಗಾಂಧಿ, “ದೆಹಲಿ ಹೇಗಿದೆ? ನೀವೆಲ್ಲೂ ಸುತ್ತಾಡೋಕೆ ಹೋಗಿಲ್ಲವೇ?” ಎಂದು ಹೇಳಿದರು. ಅದಾದ ಬಳಿಕ ಸೋನಿಯಾ, ಪ್ರಿಯಾಂಕಾ ಹಾಗೂ ರಾಹುಲ್‌ ಅವರೊಂದಿಗೆ ಔತಣ ಕೂಟದಲ್ಲೂ ಭಾಗಿಯಾಗಿದ್ದರು. ಮಹಿಳೆಯರಿಗೆ ದೆಹಲಿ ತೋರಿಸಿದ್ದಲ್ಲದೇ, ಅವರೊಟ್ಟಿಗೆ ಊಟ ಮಾಡಿ, ಹರಿಯಾಣಿ ಹಾಡಿಗೆ ಡಾನ್ಸ್‌ ಕೂಡ ಮಾಡಿದ್ದಾರೆ.

 

ಇದನ್ನು ಓದಿ: ಕಡಬ : ಒಂದೂವರೆ ವರ್ಷಗಳ ಬಳಿಕ ಮನೆ ಕಳ್ಳತನದ ಆರೋಪಿಗಳ ಬಂಧನ 

You may also like

Leave a Comment