HDK Pendrive proof: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ(HD Kumaraswamy), ವರ್ಗಾವಣೆ ಧಂದೆ ವಿಚಾರವಾಗಿ ಪೆನ್ ಡ್ರೈವ್‌ನಲ್ಲಿರುವ ಬಾಂಬ್ ನ್ನ ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ಸರ್ಕಾರಕ್ಕೆ ಶಾಕ್ ನೀಡಿದ್ದು, ಇಂದು(ಸೋಮವಾರ) ಸದನದಲ್ಲಿ ಪೆನ್‌ಡ್ರೈವ್ ಬಾಂಬ್ (Pendrive bomb) ಸಿಡಿಸುತ್ತಾರಾ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಕಳೆದ ಬುಧವಾರ ವಿಧಾನಸೌಧಕ್ಕೆ ಪೆನ್‌ಡ್ರೈವ್‌ನೊಂದಿಗೆ ಆಗಮಿಸಿದ್ದರು. ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ ಮತ್ತು ನನ್ನಲ್ಲಿ ಪೆನ್ ಡ್ರೈವ್‌ನಲ್ಲಿ ಆಡಿಯೋ ಪ್ರೂಫ್( HDK Pendrive proof) ಇದೆ ಎಂದು ಹೇಳಿಕೊಂಡಿದ್ದರು. ಆದರೆ ಪೆನ್ ಡ್ರೈವ್ ಬಿಡುಗಡೆ ಮಾಡಿರಲಿಲ್ಲ.
ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಪೆನ್ ಡ್ರೈವ್ ಆಡಿಯೋ ವನ್ನು ವಿಧಾನ ಸಭೆಯಲ್ಲಿ ಬಿಡುಗಡೆ ಮಾಡುವ ಹೆಚ್ಚಿನ ಸಾಧ್ಯತೆ ಇದೆ. ಕುಮಾರಸ್ವಾಮಿ ಅವರು ತನ್ನ ಬಳಿ ಆಡಿಯೋ ಬಾಂಬ್ ಇದೆ ಎಂದು ಹೇಳಿದ್ದು, ಈ ಹೇಳಿಕೆಗೆ ಹಲವು ಸಚಿವರು ದಾಖಲೆಯನ್ನ ಬಿಡುಗಡೆ ಮಾಡಿ ಮಾತನಾಡಲಿ ಎಂದು ಸವಾಲು ಹಾಕಿದ್ರು. ಹೀಗಾಗಿ ಈ ಪೆನ್‌ಡ್ರೈವ್ ವಿಚಾರವು ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ.
ಪೆನ್‌ಡ್ರೈವ್‌ನಲ್ಲಿ ಯಾವ ದಾಖಲೆ ಇದೆ ಎಂದು ಜೆಡಿಎಸ್ ಶಾಸಕರಿಗೂ ತಿಳಿದಿಲ್ಲ. ಕುಮಾರಸ್ವಾಮಿ ಹೇಳಿಕೆ ಪ್ರಕಾರ, ಇದರಲ್ಲಿ ಮುಖ್ಯವಾಗಿ 4 ಇಲಾಖೆಗಳ ಮೂವರು ಪ್ರಭಾವಿಗಳ ಸಂಭಾಷಣೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಪೆನ್‌ಡ್ರೈವ್‌ನ ಪ್ರಮುಖ ಅಧಿಕಾರಿಗಳ ವಿಚಾರದಲ್ಲಿ ಸಂಭಾಷಣೆ ನಡೆಸುತ್ತಿರುವ ಆಡಿಯೋಗಳನ್ನೇ ಮುಂದಿಟ್ಟುಕೊಂಡು ಕುಮಾರಸ್ವಾಮಿ ಪೆಡ್ರೈವ್ ಎಂಬ ರಾಮಬಾಣ ಹೂಡಲಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ರಾಜ್ಯದಲ್ಲಿ ಜಿಎಸ್‌ಟಿ ಜೊತೆ ವೈಎಸ್‌ಟಿ ಟ್ಯಾಕ್ಸ್ ಸಹ ಇದೆ ಎಂದು ಆರೋಪ ಮಾಡಿದ್ದರು.ಅಲ್ಲದೆ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಹಣವನ್ನು ನಿಗದಿ ಮಾಡಿದ್ದು, ಇಂಧನ ಇಲಾಖೆಯಲ್ಲಿ ಬರೊಬ್ಬರಿ 10 ಕೋಟಿಗೆ ಅಧಿಕಾರಿಗಳ ವರ್ಗಾವಣೆಗೆಯಾಗಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸದನದಲ್ಲಿ ಬಿಜೆಪಿ (BJP) ಸಹಕಾರದೊಂದಿಗೆ ಸಿದ್ದರಾಮಯ್ಯರನ್ನು (CM Siddaramaiah) ಟಾರ್ಗೆಟ್ ಮಾಡಿದೆ ಎನ್ನಲಾಗ್ತಿದೆ. ಕುಮಾರಣ್ಣನ ನಂಬಿಕಸ್ಥ ಅಧಿಕಾರಿಗಳು ಪೆನ್‌ಡ್ರೈವ್ ಬಾಂಬ್ ಗೆ ಅಸಲಿ ಕಾರಣ ಎಂಬ ಚರ್ಚೆ ಶುರುವಾಗಿದೆ. ಸದ್ಯ ಆಡಳಿತಡಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಯಾವೆಲ್ಲಾ ಸಂಕಷ್ಟಗಳು ಮುಂದೆ ಬರಲಿದೆ ಎಂದು ಕಾದುನೋಡಬೇಕಿದೆ.
ಇದನ್ನು ಓದಿ: ದ.ಕ. : ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ,ನಾಮಪತ್ರ ಸಲ್ಲಿಕೆ
