Helpline for Indira canteen: ಸಿದ್ದರಾಮಯ್ಯ(siddaramaiah) ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯ ದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್(indira canteen) ಭಾರೀ ಸದ್ದು ಮಾಡುತ್ತಿದೆ. ಸಿದ್ದುವಿನ ಕನಸಿನ ಕೂಸಾಗಿರುವ ಇಂದಿರಾ ಕ್ಯಾಂಟೀನ್, ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರ ಹೊಟ್ಟೆ ತುಂಬಿಸುತ್ತಿದೆ. ರಾಜ್ಯದ ಜನತೆಗೆ ಸೇವೆ ನೀಡಲು ಹೊಸ ಸಹಾಯವಾಣಿ ರೂಪಿಸಲಾಗಿದ್ದು ಎಲ್ಲಾ ಇಂದಿರಾ ಕ್ಯಾಂಟೀನ್ಗೂ ಸಹಾಯವಾಣಿ( Helpline for Indira canteen) ಅಳವಡಿಕೆಗೆ ತೀರ್ಮಾನಿಸಲಾಗಿದೆ.
ಇತ್ತೀಚೆಗೆ ಇಂದಿರಾ ಕ್ಯಾಂಟೀನ್(Indira canteen) ಗೆ ಡಿಸಿಎಂ ಡಿಕೆ ಶಿವಕುಮಾರ್(DCM DK Shivakumar) ಭೇಟಿ ನೀಡಿದ್ದ ವೇಳೆ ಹೆಚ್ಚಿನ ಹಣ ಪಡೆಯುತ್ತಿರುವುದು ಹಾಗೂ ಆಹಾರ ಗುಣಮಟ್ಟದ ಬಗ್ಗೆ ದೂರು ಬಂದಿತ್ತು. ಇದೀಗ ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯನ್ನು ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಸ್ವಚ್ಚತೆ ಬಗ್ಗೆ ನಿಗಾ ಇಡಲು ತಮ್ಮದೇ ಅಧಿಕಾರಿ ನೇಮಿಸಲು ಕ್ರಮ ಕೈಗೊಂಡಿದೆ. ಇದರ ಜೊತೆಗೆ ಹೊಸ ಸಹಾಯವಾಣಿಯನ್ನು ಆರಂಭ ಮಾಡಲು ಬಿಬಿಎಂಪಿ ಪಾಲಿಕೆ ಚಿಂತನೆ ನಡೆಸಿದೆ. ಕ್ಯಾಂಟೀನ್ ಬಗ್ಗೆ ಯಾವುದೇ ದೂರುಗಳನ್ನು ನೀಡಲು ‘1533’ ಸಹಾಯವಾಣಿಯ ಮೂಲಕ ಜನರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಅಲ್ಲದೆ ನಗರದ ಸ್ವಚ್ಛತೆಗಾಗಿ, ಬಿಬಿಎಂಪಿಯು ರಸ್ತೆ ಬದಿ ಕಸ ಹಾಕುವುದನ್ನು ತಡೆಯಲು ಹೊಸ ಯೋಜನೆಯನ್ನು ರೂಪಿಸಿದೆ. ಕಸ ಸುರಿಯುವವರ ಮೇಲೆ ನಿಗಾ ವಹಿಸಲು ಪಾಲಿಕೆ ಮಾರ್ಷಲ್ಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ತಂಡ ರಚನೆ ಮಾಡಿದೆ. ಅಲ್ಲದೇ ಕಸ ವಿಲೇವಾರಿ ಮಾಡೋ ಬಿಬಿಎಂಪಿ ಕಾಂಪ್ಯಾಕ್ಟರ್ಗಳ ಮೇಲೂ ನಿಗಾ ವಹಿಸಲು ಸೂಚಿಸಿದೆ.
ಇದನ್ನು ಓದಿ: List of Richest States in India: ಭಾರತದ ಶ್ರೀಮಂತ ರಾಜ್ಯಗಳ ಪಟ್ಟಿ ಬಿಡುಗಡೆ ! ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ ?
