Home » Vidhana soudha: ಸದನಕ್ಕೆ ಬಂದು, ಶಾಸಕರ ಸೀಟಲ್ಲಿ ಕುಳಿತ ಅನಾಮಿಕ ವ್ಯಕ್ತಿ ! ಗಲಿಬಿಲಿಗೊಂಡ ಶಾಸಕರು, ಡಿಕೆಶಿಗೆ ಶೇಕ್ ಹ್ಯಾಂಡ್ ಕೊಟ್ರೂ ಗೊತ್ತಾಗ್ಲಿಲ್ಲ !

Vidhana soudha: ಸದನಕ್ಕೆ ಬಂದು, ಶಾಸಕರ ಸೀಟಲ್ಲಿ ಕುಳಿತ ಅನಾಮಿಕ ವ್ಯಕ್ತಿ ! ಗಲಿಬಿಲಿಗೊಂಡ ಶಾಸಕರು, ಡಿಕೆಶಿಗೆ ಶೇಕ್ ಹ್ಯಾಂಡ್ ಕೊಟ್ರೂ ಗೊತ್ತಾಗ್ಲಿಲ್ಲ !

by ಹೊಸಕನ್ನಡ
0 comments

Vidhana soudha: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಬಹುನಿರೀಕ್ಷಿತ ಬಜೆಟ್ (Karnataka Budget 2023) ಮಂಡನೆಯ ವೇಳೆ ಸದನದಲ್ಲಿ ಭದ್ರತಾ ಲೋಪ ಎದುರಾಗಿದ್ದು, ಅನಾಮಿಕ ವ್ಯಕ್ತಿಯೊಬ್ಬ ಸೀದಾ ಸದನದೊಳಕ್ಕೆ ಬಂದು ಶಾಸಕರ ಸೀಟಲ್ಲಿ(MLA Seat) ಕುಳಿತು, ಮೊಳಕಾಲ್ಮೂರು ಶಾಸಕ ಎಂದೆಲ್ಲಾ ಹೇಳಿಕೊಂಡ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ವಿಧಾನಸೌಧದಲ್ಲಿರುವ(Vidhana sowdha) ಸದನದೊಳಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಬಿಟ್ಟು ಬೇರಾರಿಗೂ ಪ್ರವೇಶವಿಲ್ಲ. ಆದರೆ ಇಂದು ಸಿಎಂ ಅವರು ಬಜೆಟ್ ಮಂಡಿಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಶಾಸಕರ ಸೀಟ್‍ನಲ್ಲಿ ಕುಳಿತುಕೊಂಡಿದ್ದರು. ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದ ಸಂದರ್ಭದಲ್ಲಿ ದೇವದುರ್ಗ(Devdurga MLA) ಶಾಸಕಿ ಕರೆಮ್ಮ ಅವರಿಗೆ ಮೀಸಲಾಗಿರುವ ಆಸನದಲ್ಲಿ ವ್ಯಕ್ತಿ ಸುಮಾರು 15 ನಿಮಿಷಗಳ ಕಾಲ ಕುಳಿತಿದ್ದರು. ಕರೆಮ್ಮ ಬಂದ ಬಳಿಕ ವ್ಯಕ್ತಿ ಎದ್ದು ಹೋಗಿದ್ದಾನೆ.

ಇದನ್ನು ಗಮನಿಸಿದ ಗುರುಮಿಠಕಲ್(Gurumitkal) ಶಾಸಕ ಶರಣ ಗೌಡ ಕಂದಕೂರು ಅವರು ಪಕ್ಕದಲ್ಲಿದ್ದ ಜಿಟಿ ದೇವೇಗೌಡ ಅವರ ಬಳಿ ಅವರಾರು ಎಂದು ಕೇಳಿದ್ದಾರೆ. ಅವರು ಯಾರೋ ಗೊತ್ತಿಲ್ಲ ಅಂದಿದ್ದಾರೆ. ಆಗ ಶರಣ ಗೌಡರು ನೇರವಾಗಿ ಆ ವ್ಯಕ್ತಿಯನ್ನು ಕೇಳಿದಾಗ ತಾನು ಮೊಳಕಾಲ್ಮೂರು ಎಂಎಲ್‍ಎ ಅಂದಿದ್ದಾರೆ. ಅಲ್ಲದೆ ಸುಮಾರು 15 ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ದಾನೆ. ಆತ 15 ನಿಮಿಷ ಕುಳಿತುಕೊಂಡಿದ್ದಲ್ಲದೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಬಳಿ ತೆರಳಿ ಹ್ಯಾಂಡ್ ಶೇಕ್ ಕೂಡ ಮಾಡಿದ್ದಾರೆ. ಆದರೆ ಡಿಸಿಎಂ ಅವರು ಬಜೆಟ್ ಬ್ಯುಸಿಯಲ್ಲಿ ಇದ್ದ ಕಾರಣ ವ್ಯಕ್ತಿ ಕಡೆ ಹೆಚ್ಚಿನ ಗಮನ ಕೊಡಲಾಗಲಿಲ್ಲ.

ಕೊನೆಗೆ ತಕ್ಷಣ ಅನುಮಾನಗೊಂಡ ಶಾಸಕರು ಕಾರ್ಯದರ್ಶಿ ಗಮನಕ್ಕೆ ತಂದು ಸ್ಪೀಕರ್‍ಗೆ(Speaker) ನೀಡಿದ್ದಾರೆ. ಅದಾದ ಬಳಿಕ ಸ್ಪೀಕರ್ ರಿಂದ ಮಾರ್ಷಲ್ಸ್ ಮೂಲಕ ವ್ಯಕ್ತಿಯನ್ನು ಹೊರಗೆ ಕಳುಹಿಸಲಾಗಿದೆ. ಕೂಡಲೇ ವಿಧಾನಸೌಧ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯನ್ನು ಕರಿಯಪ್ಪ ಯಾನೇ ತಿಪ್ಪೇರುದ್ರ ಎಂದು ಗುರುತಿಸಲಾಗಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ(Sharanappa) ಅವರು ಕರಿಯಪ್ಪ (Kariyappa) ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ಈ ವ್ಯಕ್ತಿಯನ್ನು ಪೊಲೀಸ್ ಕಮಿಷನರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವ ಶಾಸಕರ ಹೆಸರನ್ನು ಬಳಸಿ ಒಳಹೋಗಿದ್ದ?, ಆಸನದಲ್ಲಿ ಕುಳಿತುಕೊಂಡಿದ್ದು ಯಾಕೆ? ಹಾಗೂ ಯಾವ ದಾಖಲೆಗಳು ತನ್ನ ಬಳಿಯಿದ್ದವು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸದನದೊಳಗೆ ಎಂಟ್ರಿ ಆಗಿದ್ದು ಹೇಗೆ?: ಸುಮಾರು 70 ರಿಂದ 72 ವರ್ಷದ ವ್ಯಕ್ತಿ ನೇರವಾಗಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಎಂಟ್ರಿ ಭಾಗದಲ್ಲಿದ್ದ ಮಾರ್ಷಲ್ಸ್ ಯಾರು ನೀವು ಅಂತಾ ಪ್ರಶ್ನೆ ಮಾಡಿದ್ದಾರೆ. ಆಗ ವ್ಯಕ್ತಿ ನಾನು ಶಾಸಕ ಗೊತ್ತಾಗಲ್ವಾ ಅಂತಾ ಅವಾಜ್ ಹಾಕಿದ್ದು, ಮಾರ್ಷಲ್ಸ್ ಐಡಿ ಕೊಡಿ ಸಾರ್ ಎಂದಿದ್ದಾರೆ. ಐಡಿ ಯಾಕ್ರೀ ನಾನು ಮೊಳಕಾಲ್ಮೂರು ಶಾಸಕ. ಐಡಿ ಕಾರಿನ ಬಳಿ ಇದೆ ಎಂದು ವ್ಯಕ್ತಿ ಗದರಿದ್ದಾರೆ. ಹೀಗಾಗಿ ಮಾರ್ಷಲ್ಸ್ ಒಳಪ್ರವೇಶಿಸಲು ಅವಕಾಶ ಕೊಟ್ಟಿದ್ದಾರೆ.

ಶಾಸಕರಲ್ಲದೇ ಇರುವವರು ಹೀಗೆ ಬಂದು ಕುಳಿತುಕೊಳ್ಳುತ್ತಾರೆ ಎಂದರೆ ನಿಜಕ್ಕೂ ಇದು ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಸದನದ ಒಳಗಡೆ ಯಾರನ್ನೂ ಒಳಗಡೆ ಬಿಡಲ್ಲ. ಅಂಥದ್ದರಲ್ಲಿ ಈ ವ್ಯಕ್ತಿ ಒಳಗೆ ಬರುತ್ತಾರೆ ಅಂದರೆ ನಿಜಕ್ಕೂ ಅಚ್ಚರಿಯೇ ಸರಿ. ಅಲ್ಲದೆ ಇದು ಶಾಸಕರಾಗೆ ತೋರಿದ ಅಗೌರವೂ ಆಗಿದೆ.

You may also like

Leave a Comment