Home » Karnataka budget 2023: ರೈತರಿಗೆ ಭಾರೀ ಬಂಪರ್ ಬಜೆಟ್: ಬಡ್ಡಿ ರಹಿತ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, 15 ಲಕ್ಷದ ತನಕ ಸಾಲ !

Karnataka budget 2023: ರೈತರಿಗೆ ಭಾರೀ ಬಂಪರ್ ಬಜೆಟ್: ಬಡ್ಡಿ ರಹಿತ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ, 15 ಲಕ್ಷದ ತನಕ ಸಾಲ !

by ಹೊಸಕನ್ನಡ
0 comments
Karnataka budget 2023

Karnataka Budget 2023: ಸಿಎಂ ಸಿದ್ದರಾಮಯ್ಯನವರು (CM Siddaramaiah) ಕರ್ನಾಟಕದಲ್ಲಿ14 ನೇ ಬಾರಿ ಬಜೆಟ್‌ (Budget) ಮಂಡಿಸುತ್ತಿದ್ದಾರೆ. ಗ್ಯಾರಂಟಿ ಭಾರಗಳನ್ನು ಸರಿ ತೂಗಿಸಲು ಭಾರೀ ತೆರಿಗೆ ಹಾಕಿದ್ದಾರೆ ಅನ್ನೋ ಮಾತುಗಳು ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಬಜೆಟ್‌ ಮಂಡನೆಗೂ ಮುನ್ನ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಹೇಳುತ್ತಾ ಬಜೆಟ್ ಭಾಷಣ ಆರಂಭಿಸಿದ ಸಿದ್ದರಾಮಯ್ಯನವರು ಸುಧೀರ್ಘವಾಗಿ ಕಳೆದ ಒಂದು ಗಂಟೆಗೂ ಅಧಿಕ ಸಮಯದಿಂದ ಬಜೆಟ್ ಭಾಷಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಬಿಗ್ ಗುಡ್ ನ್ಯೂಸ್ ನೀಡಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ.

Karnataka Budget 2023: ಬಜೆಟ್ ಒಟ್ಟು ವೆಚ್ಚ:
2023-24 ಸಾಲಿನಲ್ಲಿ ಬಜೆಟ್ ಒಟ್ಟು ವೆಚ್ಚ 3,27,747 ಕೋಟಿ ಎಂದು ಉಲ್ಲೇಖಿಸಲಾಗಿದೆ. ರಾಜ್ಯದ ಅನ್ನದಾತರಿಗೆ (Farmers) ಬಿಗ್‌ ರಿಲೀಫ್‌ ಕೊಟ್ಟಿದ್ದಾರೆ.
ಬಡ್ಡಿ ರಹಿತ ಸಾಲದ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.

3 ಲಕ್ಷ ದಿಂದ 5 ಲಕ್ಷದವರೆಗೆ ಈ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳ ಮಿತಿಯನ್ನು 10 ಲಕ್ಷ ದಿಂದ 15 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

 

ಇದನ್ನು ಓದಿ: Telecom News: ಒಂದಕ್ಕಿಂತ ಹೆಚ್ಚು ಸಿಮ್ ಬಳಕೆ ಮಾಡುತ್ತಿದ್ದೀರಾ ! ಕೇಂದ್ರದಿಂದ ಕಾದಿದೆ ಬಿಗ್ ಶಾಕ್, ತಕ್ಷಣದಿಂದ ಜಾರಿ ?! 

You may also like

Leave a Comment