Home » M. B. Patil: ಬಿಜೆಪಿಯ ಇಸ್ಪೀಟ್ ಕಾರ್ಡ್ ಮನೆ ಕುಸಿಯುತ್ತಿದೆ ; ಓಡಿ ಬಂದು ಕಾಂಗ್ರೆಸ್ ಸೇರಿಕೊಳ್ಳಿ – ಬೊಮ್ಮಾಯಿಗೆ ಎಂಬಿ ಪಾಟೀಲ್ ಸಲಹೆ !

M. B. Patil: ಬಿಜೆಪಿಯ ಇಸ್ಪೀಟ್ ಕಾರ್ಡ್ ಮನೆ ಕುಸಿಯುತ್ತಿದೆ ; ಓಡಿ ಬಂದು ಕಾಂಗ್ರೆಸ್ ಸೇರಿಕೊಳ್ಳಿ – ಬೊಮ್ಮಾಯಿಗೆ ಎಂಬಿ ಪಾಟೀಲ್ ಸಲಹೆ !

0 comments
M. B. Patil

M. B. Patil: ಕೈಗಾರಿಕಾ ಸಚಿವ ಎಂಬಿ ಪಾಟೀಲ್ (M. B. Patil) ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕಾಂಗ್ರೆಸ್ ಗೆ ಪರೋಕ್ಷವಾಗಿ ಆಹ್ವಾನಿಸಿ ಲೇವಡಿ ಮಾಡಿದ್ದಾರೆ. ಹೌದು, ಬಿಜೆಪಿಯ ಇಸ್ಪೀಟ್ ಕಾರ್ಡ್ ಮನೆ ಕುಸಿಯುತ್ತಿದೆ. ಬೇಗನೆ ಓಡಿ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳುವ ಮೂಲಕ ಪಾಟೀಲ್ ಟಾಂಗ್ ನೀಡಿದ್ದಾರೆ.

ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಕೊನೆಗೂ ಅನಗತ್ಯ ಮಾಡಲು ನಿರ್ಧರಿಸಲಾಗಿದೆ ಎಂದು ತೋರುತ್ತದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಬಿಎಸ್ ಯಡಿಯೂರಪ್ಪ (b s yadiyurappa) ಅವರಿಗೆ‌ ಹೇಗಾಯಿತೋ ಹಾಗೆಯೇ ಬಿಜೆಪಿ ಪಕ್ಷದಲ್ಲಿ ಬೊಮ್ಮಾಯಿ ಅವರಿಗೂ ಆಗಲಿದೆ ಎಂದರು.

ಬಸವರಾಜ ಬೊಮ್ಮಾಯಿ ಅವರು ಜಾತ್ಯತೀತ ಸಿದ್ಧಾಂತಕ್ಕೆ ಹೊಂದಿಕೊಂಡರೆ, ಕಾಂಗ್ರೆಸ್ ಹೈಕಮಾಂಡ್ ಅವರನ್ನು ಪರಿಗಣಿಸಬಹುದು. ನೀವು ಕಾಂಗ್ರೆಸ್ ಸೇರೋದಾದ್ರೆ ಅವರಿಗೆ ನಾನು ಒತ್ತಾಯಿಸುತ್ತೇನೆ ಎಂದು ಪಾಟೀಲ್ ಟೀಕಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಬಿಎಸ್ ಯಡಿಯೂರಪ್ಪ ಅವರು ಲಿಂಗಾಯತ ನಾಯಕರು. ಈ ಸಾಲಿಗೆ ಬಸವರಾಜ ಬೊಮ್ಮಾಯಿ ಸೇರಿದ್ದಾರೆ. ಇದರಲ್ಲಿ ಶೆಟ್ಟರ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಹಾಗಾಗಿ ಬೊಮ್ಮಾಯಿ ಕಾಂಗ್ರೆಸ್ ಸೇರಬಹುದು ಎಂದು ಟೀಕಿಸುವ ಮೂಲಕ ಸಚಿವ ಎಂ.ಬಿ ಪಾಟೀಲ್ ವಿಪಕ್ಷದವರ ಕಾಲೆಳೆದಿದ್ದಾರೆ.

 

ಇದನ್ನು ಓದಿ: Job Interview Tips: ಜಾಬ್ ಇಂಟರ್ ವ್ಯೂ ಕ್ವೆಶ್ಚನ್ ಪೇಪರ್ ಲೀಕ್ ಆಗಿದೆ ಗುರೂ, ಇದೊಂದು ಪ್ರಶ್ನೆ ಪ್ರತಿ ಬಾರಿ ಗ್ಯಾರಂಟಿಯಾಗಿ ಕೇಳ್ತಾರೆ ! 

You may also like

Leave a Comment