Home » Janardhan Reddy: ಬೆಳಿಗ್ಗೆ ಉತ್ಸಾಹದಿಂದ ರೆಡ್ಡಿ ಬಣ ಸೇರಿಕೊಂಡವರು, ಸಂಜೆಯ ಹೊತ್ತಿಗೆ ಶಾಲು ಕಳಚಿ ಗುಡ್ ಬೈ: ಜನಾರ್ದನ ರೆಡ್ಡಿಗೆ ಮುಖಭಂಗ !

Janardhan Reddy: ಬೆಳಿಗ್ಗೆ ಉತ್ಸಾಹದಿಂದ ರೆಡ್ಡಿ ಬಣ ಸೇರಿಕೊಂಡವರು, ಸಂಜೆಯ ಹೊತ್ತಿಗೆ ಶಾಲು ಕಳಚಿ ಗುಡ್ ಬೈ: ಜನಾರ್ದನ ರೆಡ್ಡಿಗೆ ಮುಖಭಂಗ !

0 comments
Janardhan Reddy

Janardhan Reddy: ಮಾಜಿ ಸಚಿವ, ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ (ಕೆಆರ್‌ಪಿಪಿ) (Kalyana Rajya Pragathi Paksha) ಸ್ಥಾಪಿಸಿದ್ದು, ಈ ಮೂಲಕ ಮಾಜಿ ಗಣಿ ಉದ್ಯಮಿ ಮತ್ತು ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ (Janardhan Reddy) ಅವರು ಗಂಗಾವತಿ (Gangavati) ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ.

‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ದ (Kalyana Rajya Pragathi Paksha) ಮುಖ್ಯಸ್ಥ ಜನಾರ್ದನ ರೆಡ್ಡಿ ಕೊಪ್ಪಳ (Koppal) ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಗಂಗಾವತಿ ನಗರಸಭೆ ಸದಸ್ಯರ ಮನೆಗೆ ಭೇಟಿ ನೀಡಿ ಕೆಆರ್​​ಪಿಪಿ ಶಾಲು ಹಾಕಿ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಸದಸ್ಯರು ಸಂಜೆ ವೇಳೆಗೆ ರೆಡ್ಡಿಗೆ ಉಲ್ಟಾ ಹೊಡೆದಿದ್ದಾರೆ. ತಾವು ಕೆಆರ್​ಪಿಪಿ ಸೇರ್ಪಡೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಶಾಸಕ ಜನಾರ್ದನ ರೆಡ್ಡಿಗೆ ಮುಖಭಂಗವಾಗಿದೆ.

ನಗರಸಭೆ ಸದಸ್ಯೆ ಸುಚೇತ ಸಿರಿಗೇಠರಿ ಮನೆಗೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ KRPP ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಜನಾರ್ದನ ರೆಡ್ಡಿ ಭೇಟಿ ಬಳಿಕ ಮಾಜಿ ಶಾಸಕ ಪರಣ್ಣ ಮುನವಳ್ಳಿ (Paranna Munavalli) ಬಿಜೆಪಿ ಶಾಲು ಹಾಕಿ ಘರ್ ವಾಪ್ಸಿ ಮಾಡಿ ಸುಚೇತ ಸಿರಿಗೇರಿ ಅವರನ್ನು ಕರೆ ತಂದಿದ್ದಾರೆ. ಇದೀಗ ಶಾಸಕ ಜನಾರ್ದನ ರೆಡ್ಡಿ ಒತ್ತಡ ಹಾಕಿ ಶಾಲು ಹಾಕ್ತಿದ್ದಾರೆ ಎಂದು ನಗರಸಭೆ ಸದಸ್ಯರು ಆರೋಪಿಸುತ್ತಿದ್ದಾರೆ.
ಬೆಳಿಗ್ಗೆ ಉತ್ಸಾಹದಿಂದ ರೆಡ್ಡಿ ಬಣ ಸೇರಿಕೊಂಡವರು, ಸಂಜೆಯ ಹೊತ್ತಿಗೆ ಶಾಲು ಕಳಚಿ ಗುಡ್ ಬೈ ಹೇಳಿದ್ದು ಜನಾರ್ಧನ ರೆಡ್ಡಿಗೆ ಮುಖಭಂಗವಾಗಿದೆ.

You may also like

Leave a Comment