Home » Congress: ತುರ್ತಾಗಿ ಬೇಕಾಗಿದ್ದಾರೆ: ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ, ಆಸಕ್ತಿಮಯ ಜಾಹೀರಾತು ಕೊಟ್ಟ ಕಾಂಗ್ರೆಸ್ !

Congress: ತುರ್ತಾಗಿ ಬೇಕಾಗಿದ್ದಾರೆ: ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ, ಆಸಕ್ತಿಮಯ ಜಾಹೀರಾತು ಕೊಟ್ಟ ಕಾಂಗ್ರೆಸ್ !

0 comments
Congress

Congress: ಕರ್ನಾಟಕದಲ್ಲಿ ಅಭೂತಪೂರ್ವಾಗಿ ಚುನಾವಣೆಯಲ್ಲಿ ಸೆಣಸಿ ಗೆದ್ದ ಕಾಂಗ್ರೆಸ್ (Congress) ಪಕ್ಷವು ಇಂದು ಬೆಳಿಗ್ಗೆ ಬಿಜೆಪಿಯನ್ನು ಮತ್ತೆ ತಡವಿಕೊಂಡಿದೆ. ಇದೀಗ ತಾನೇ ಟ್ವೀಟ್ ಮಾಡಿದ ಕಾಂಗ್ರೆಸ್
‘ ವಿರೋಧ ಪಕ್ಷದ ನಾಯಕರೊಬ್ಬರು ತುರ್ತಾಗಿ ಬೇಕಾಗಿದ್ದಾರೆ ‘ ಎಂದು ಜಾಹೀರಾತು ನೀಡಿದೆ.

ಬಿಜೆಪಿ ಪಕ್ಷವು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವಲ್ಲಿ ವಿಳಂಬ ಮತ್ತು ಅಸಮರ್ಥತೆಯನ್ನು ಸರಿಯಾಗಿ ಬಳಸಿಕೊಂಡ ಕರ್ನಾಟಕ ಕಾಂಗ್ರೆಸ್ ಪಕ್ಷವು ಈ ಮೂಲಕ ಬಿಜೆಪಿಯನ್ನು ಮತ್ತಷ್ಟು ಲೇಔಟ್ ಗೆ ಒಳಪಡಿಸಿದೆ. ತುರ್ತಾಗಿ ಬೇಕಾಗಿದ್ದಾರೆ: ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ಬರೆದ ಖಾಲಿ ಕುರ್ಚಿಯ ಫೋಟೋ ಲಗತ್ತಿಸಿ ಕಾಂಗ್ರೆಸ್ ಈ ಬೆಳಿಗ್ಗೆ ಬಿಜೆಪಿಯನ್ನು ಕೀಟಲೆ ಮಾಡಿದೆ. ಜೊತೆಗೆ ವಿರೋಧ ಪಕ್ಷದ ನಾಯಕನ ಹುದ್ದೆಗೆ ಬೇಕಾದ ಅರ್ಹತೆಯನ್ನು ಕೂಡ ಪಟ್ಟಿ ಮಾಡಿದೆ.

🔹ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ.
🔹ಸಿಡಿಗೆ ತಡೆಯಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
🔹RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.

🔹ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು.
🔹ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ ಎನ್ನುವ ವಿಶಿಷ್ಟ ಜಾಹೀರಾತು ನೀಡಿ ಡೆ ಕಾಂಗ್ರೆಸ್. ಓದುಗರಲ್ಲಿ ಅರ್ಹತೆ ಇದ್ದವರು ಅಪ್ಲೈ ಮಾಡಬಹುದು. ಐದು ವರ್ಷ ಸರಕಾರದ ಕೈತುಂಬಾ ಸಂಬಳ ಗೂಟದ ಕಾರು, ಪೇಟದ ಡೈವರು ಖಚಿತ. ಕ್ಯಾಬಿನೆಟ್ ಸಚಿವ ದರ್ಜೆಯ ಸ್ಥಾನಮಾನಗಳು ಉಚಿತ !!!

 

https://twitter.com/INCKarnataka/status/1674965923546173446?s=20

 

ಇದನ್ನು ಓದಿ: Bajarang Dal: ತರಕಾರಿ, ಮೀನು ಮಾರ್ತಾ ಮುಸ್ಲಿಂ ಬಂದ್ರೆ ಗುಂಡು ಹಾರಿಸ್ಬೇಕಾಗತ್ತೆ…..! 

You may also like

Leave a Comment