Home » Direct contact of CM: ಈಗ ಯಾರೇ ಬೇಕಿದ್ರೂ ಸಿಎಂ ಸಿದ್ದರಾಮಯ್ಯನವರನ್ನು ನೇರ ಸಂಪರ್ಕಿಸಬಹುದು, ಹೇಗೆ ಅಂತೀರಾ ?!

Direct contact of CM: ಈಗ ಯಾರೇ ಬೇಕಿದ್ರೂ ಸಿಎಂ ಸಿದ್ದರಾಮಯ್ಯನವರನ್ನು ನೇರ ಸಂಪರ್ಕಿಸಬಹುದು, ಹೇಗೆ ಅಂತೀರಾ ?!

0 comments

Direct contact of CM: ಜನಸಾಮಾನ್ಯರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ಹೊಸ ಆಲೋಚನೆಯನ್ನು ಮಾಡಿದೆ. ಮಾಧ್ಯಮ ಮತ್ತು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ಹೊಸ ಟ್ವಿಟರ್ ಖಾತೆಯನ್ನು ತೆರೆದಿದ್ದಾರೆ.

https://twitter.com/osd_cmkarnataka (Office of the OSD to CM Karnataka) ಹೆಸರಿನ ಟ್ವಿಟರ್ ಖಾತೆಗೆ ಸಾರ್ವಜನಿಕರು ಮತ್ತು ಮಾಧ್ಯಮದವರು ತಮ್ಮ ಸಾರ್ವಜನಿಕ ಕುಂದು ಕೊರತೆಗಳ ಕುರಿತಾದ ಸಮಸ್ಯೆಗಳನ್ನು ಟ್ಯಾಗ್ ಮಾಡಬಹುದು. ಎಲ್ಲವನ್ನೂ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಗಳ ಸಿಬ್ಬಂದಿಯ ಗಮನಕ್ಕೆ (Direct contact of CM) ತರುವ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗುತ್ತಿದೆ.

ಕಛೇರಿಯ ಸೇವೆಗಳನ್ನು ಸದುಪಯೋಗ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ, ಸಾರ್ವಜನಿಕ ಕುಂದುಕೊರತೆಗಳನ್ನು ಮಾತ್ರ ಮುಖ್ಯಮಂತ್ರಿಗಳ ಕಚೇರಿಯ ಈ ಖಾತೆಗೆ ಟ್ಯಾಗ್ ಮಾಡಬಹುದಾಗಿದೆ.

 

ಇದನ್ನು ಓದಿ: Gina Stewart: ವಿಶ್ವದ ಹಾಟೆಸ್ಟ್ ಅಜ್ಜಿ ಗಿನಾ ಸ್ಟಿವರ್ಟ್‌ ವಯಸ್ಸು ಎಷ್ಟು ಗೊತ್ತಾ ? ಈಕೆಯ ಲುಕ್ ನೋಡಿದ್ರೆ ಯುವಕರು ಫುಲ್ ಫ್ಲಾಟ್

You may also like

Leave a Comment