India’s Richest MLA: ಶ್ರೀಮಂತ ನಟ ಯಾರು? ಯಾವ ನಟನಿಗೆ ಹೆಚ್ಚು ಸಂಭಾವನೆ? ಈ ರೀತಿಯ ಸುದ್ದಿ ಓದಿರುತ್ತಿರಾ!. ಇದೀಗ ಶಾಸಕರ ಸರದಿ. ಭಾರತದ ಅತ್ಯಂತ ಶ್ರೀಮಂತ ಶಾಸಕರು ಯಾರು ಗೊತ್ತಾ ? ಭಾರತದ ಅತ್ಯಂತ ಶ್ರೀಮಂತ ಶಾಸಕರ (India’s Richest MLA) ಪಟ್ಟಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪಟ್ಟಿ ಬಿಡುಗಡೆ ಮಾಡಿದೆ. ಈ ಕೆಟಗರಿಯಲ್ಲಿ ಡಿಕೆ ಶಿವಕುಮಾರ್ (dk shivakumar) ಭಾರತದ ನ.1 ಕುಬೇರ. ಇನ್ನುಳಿದ ಟಾಪ್ 10 ಶ್ರೀಮಂತ ಶಾಸಕರ ಪಟ್ಟಿ ಇಲ್ಲಿದೆ.
ಎಡಿಆರ್ ವರದಿ ಪ್ರಕಾರ, ಟಾಪ್ 3ರಲ್ಲಿ ರಾಜ್ಯದ ಶಾಸಕರೇ ಇದ್ದಾರೆ. ಟಾಪ್ 1ರಲ್ಲಿ ಡಿ.ಕೆ. ಶಿವಕುಮಾರ್, ಗೌರಿ ಬಿದನೂರು ಶಾಸಕ ಎಚ್. ಕೆ. ಪುಟ್ಟಸ್ವಾಮಿ ಗೌಡ ಟಾಪ್ 2ರಲ್ಲಿ ಇದ್ದಾರೆ. ಮೂರನೇ ಸ್ಥಾನ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ ಅವರ ಪಾಲು ಸೇರಿದೆ. ಉಳಿದ ವಿವರ ಈ ಕೆಳಗಿನಂತಿದೆ.
ಭಾರತದ ಟಾಪ್-10 ಶ್ರೀಮಂತ ಶಾಸಕರು :
ಡಿ.ಕೆ.ಶಿವಕುಮಾರ್ (ಕಾಂಗ್ರೆಸ್) – ಕನಕಪುರ, ಕರ್ನಾಟಕ 2023 –
ಒಟ್ಟು ಆಸ್ತಿ: 1413 ಕೋಟಿ ರೂ.
ಕೆ.ಎಚ್.ಪುಟ್ಟಸ್ವಾಮಿ ಗೌಡ (ಐಎನ್ಡಿ) – ಗೌರಿಬಿದನೂರು, ಕರ್ನಾಟಕ 2023 – ಒಟ್ಟು ಆಸ್ತಿ: 1267 ಕೋಟಿ ರೂ.
ಪ್ರಿಯಕೃಷ್ಣ (ಕಾಂಗ್ರೆಸ್) – ಗೋವಿಂದರಾಜನಗರ, ಕರ್ನಾಟಕ 2023 – ಒಟ್ಟು ಆಸ್ತಿ: 1156 ಕೋಟಿ ರೂ.
ಚಂದ್ರಬಾಬು ನಾಯ್ಡು (ಟಿಡಿಪಿ) – ಕುಪ್ಪಂ, ಆಂಧ್ರಪ್ರದೇಶ 2019 –
ಒಟ್ಟು ಆಸ್ತಿ: 668 ಕೋಟಿ ರೂ.
ಜಯಂತಿಭಾಯಿ ಸೋಮಭಾಯ್ ಪಟೇಲ್ (ಬಿಜೆಪಿ) -ಮಾನಸ,
ಗುಜರಾತ್ 2022 – ಒಟ್ಟು ಆಸ್ತಿ: 661 ಕೋಟಿ ರೂ.
ಸುರೇಶ್ ಬಿ.ಎಸ್ (ಕಾಂಗ್ರೆಸ್) – ಹೆಬ್ಬಾಳ, ಕರ್ನಾಟಕ 2023 –
ಒಟ್ಟು ಆಸ್ತಿ: 648 ಕೋಟಿ ರೂ.
ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್ಸಿಪಿ) – ಪುಲಿವೆಂಡ್ಲಾ ಆಂಧ್ರಪ್ರದೇಶ 2019 – ಒಟ್ಟು ಆಸ್ತಿ: 510 ಕೋಟಿ ರೂ.
ಪರಾಗ್ ಶಾ (ಬಿಜೆಪಿ) – ಘಾಟ್ಕೋಪರ್ ಪೂರ್ವ, ಮಹಾರಾಷ್ಟ್ರ 2019 – ಒಟ್ಟು ಆಸ್ತಿ : 500 ಕೋಟಿ ರೂ.
ಟಿ.ಎಸ್.ಬಾಬಾ (ಐಎನ್ಸಿ) – ಅಂಬಿಕಾಪುರ, ಛತ್ತೀಸಢ 2018 –
ಒಟ್ಟು ಆಸ್ತಿ: 500 ಕೋಟಿ ರೂ.
ಮಂಗಳಪ್ರಭಾತ್ ಲೋಧಾ (ಬಿಜೆಪಿ) – ಮಲಬಾರ್ ಹಿಲ್,
ಮಹಾರಾಷ್ಟ್ರ 2019 – ಒಟ್ಟು ಆಸ್ತಿ: 441 ಕೋಟಿ ರೂ.
ಭಾರತದ ಒಟ್ಟಾರೆ ಶಾಸಕರ ಆಸ್ತಿ ಮೌಲ್ಯಗಳನ್ನು ಲೆಕ್ಕ ಹಾಕಿದರೆ ಸರಾಸರಿಯಾಗಿ ಪ್ರತಿಯೊಬ್ಬ ಶಾಸಕನು 64.3 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದ ಯಾವುದೇ ಒಂದು ರಾಜ್ಯದಲ್ಲಿ ಹೀಗೆ ಶೇಕರಾವಾರು ಲೆಕ್ಕಾಚಾರದಲ್ಲಿ ಅತಿ ಹೆಚ್ಚು ಶತಕೋಟಿ ಒಡೆಯರು ಇರುವುದು ಕರ್ನಾಟಕದಲ್ಲೇ ಎಂದು ತಿಳಿದುಬಂದಿದೆ
ಇದನ್ನು ಓದಿ: Marriage: 14 ಅದ್ಭುತ ವರರ ಪಟ್ಟಿಯಲ್ಲಿ ಯಾರನ್ನ ಆಯ್ಕೆ ಮಾಡಲಿ ? ಗೊಂದಲಕ್ಕೆ ಬಿದ್ದ ಹುಡುಗಿಗೆ ಬೇಕಿದೆ ನಿಮ್ಮ ಸಹಾಯ !
