Karnataka Assembly opposition leader: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ(Congress Government) ರಚನೆಯಾದ ಬಳಿಕ ಇದೀಗ ಎಲಡನೇ ಬಾರಿಗೆ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಆದರೆ ಪ್ರಮುಖ ವಿರೋಧ ಪಕ್ಷದ(Opposition leader) ಸ್ಥಾನದಲ್ಲಿರುವ ಬಿಜೆಪಿ(BJP) ಇನ್ನೂ ಕೂಡ ತಮ್ಮ ಪ್ರತಿಪಕ್ಷ ನಾಯಕನನ್ನು ಆಯ್ಕೆಮಾಡಿಲ್ಲ. ಪಕ್ಷದಲ್ಲಿ ಸೂಕ್ತ, ಸಮರ್ಥ ನಾಯಕನ ಆಯ್ಕೆಗೆ ಇನ್ನೂ ಹುಡುಕಾಟ ನಡೆಯುತ್ತಿದೆ. ಆದರೆ ಈ ನಡುವೆ ಅಚ್ಚರಿ ಎಂಬಂತೆ ಪ್ರತಿಪಕ್ಷ ನಾಯಕನಾಗೆ ಎಚ್ ಡಿ ಕುಮಾರಸ್ವಾಮಿ ಅವರು ಆಯ್ಕೆಯಾಗಲಿದ್ದಾರಾ? ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.
ಹೌದು, ವಿಧಾನ ಮಂಡಲ ಅಧಿವೇಶನ ಶುರುವಾಗಿ 5 ದಿನಕ್ಕೆ ಕಾಲಿಟ್ಟಿದೆ. ಆದ್ರೆ ವಿಪಕ್ಷ ಬಿಜೆಪಿಯಲ್ಲಿ(BJP) ವಿಪಕ್ಷ ನಾಯಕ (opposition leader) ಯಾರೂ ಎನ್ನುವ ಸಸ್ಪೆನ್ಸ್ ಮುಂದುವರೆದಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನ(Karnataka Assembly opposition leader) ಪ್ರತಿಪಕ್ಷ ನಾಯಕನಿಲ್ಲದೆ ಆರಂಭವಾಗಿದೆ. ಅಧಿವೇಶನ ಶುರುವಾಗಿ 3ನೇ ದಿನಕ್ಕೆ ಕಾಲಿಟ್ಟರೂ ಬಿಜೆಪಿಯಿಂದ ವಿಪಕ್ಷ ನಾಯಕನ ಹೆಸರು ಮಾತ್ರ ಇನ್ನೂ ಘೋಷಣೆ ಆಗಿಲ್ಲ. 30 ವರ್ಷದ ಇತಿಹಾಸದಲ್ಲೇ ಇದೇ ಮೊದಲು ವಿಪಕ್ಷ ನಾಯಕನ ಸೀಟ್ ಖಾಲಿ ಉಳಿಸಿ ಕಲಾಪ ನಡೆಯುತ್ತಿದೆ. ಆದರೆ ಈ ನಡುವೆ ಮಾಜಿ ಸಿಎಂ, ಎಚ್ ಡಿ ಕುಮಾರಸ್ವಾಮಿ(H D Kumaraswamy) ಅವರು ವಿಪಕ್ಷ ನಾಯಕನಾಗಿ ಆಯ್ಕೆಯಾಗುತ್ತಾರಾ? ಎಂಬ ಸಂಶಯ ಎಲ್ಲರನ್ನೂ ಬಲವಾಗಿ ಕಾಡಲು ಶುರುಮಾಡಿದೆ.
ಹೌದು, ರಾಜ್ಯ ರಾಜಕಾರಣದಲ್ಲಿ ಹೀಗೊಂದು ಚರ್ಚೆ ಶುರುವಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ. ಅಧಿಕೃತ ವಿರೋಧ ಪಕ್ಷದ ಸ್ಥಾನದಲ್ಲಿರುವ ಭಾರತೀಯ ಜನತಾ ಪಾರ್ಟಿ 2 ತಿಂಗಳಾದರೂ ಇನ್ನೂ ಕೂಡ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಂಡಿಲ್ಲ. ಆದರೆ ಅಧಿಕೃತ ವಿರೋಧ ಪಕ್ಷ ಅಲ್ಲದಿದ್ದರೂ ಕೂಡ ಜೆಡಿಎಸ್(JDS) ನಾಯಕ ಕುಮಾರಸ್ವಾಮಿ ಮಾತ್ರ ಹೆಜ್ಜೆ ಹೆಜ್ಜೆಗೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದು, ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ನಾಯಕರು ಕೂಡ ಬೆಂಬಲ ನೀಡುತ್ತಾ, ಉಘೇ ಉಘೇ ಎನ್ನುತ್ತಿರುವುದು ಈ ಎಲ್ಲಾ ಅನುಮಾನಗಳಿಗೆ ಎಡೆಮಾಡಿದೆ.
ಅಲ್ಲದೆ ಕೆಲ ಸಮಯದ ಹಿಂದೆ ರಾಜ್ಯ ರಾಜಕೀಯದಲ್ಲಿ ಈಗಾಗಲೇ ಮೈತ್ರಿ ಮಾತುಗಳು ಕೇಳಿಬಂದಿದ್ದವು. ಬಿಜೆಪಿ-ಜೆಡಿಎಸ್ ಎರಡೂ ಮೈತ್ರಿ ಮಾಡಿಕೊಂಡು ಲೋಕಸಭೆಯಲ್ಲಿ ಸ್ಪರ್ಧಿಸಲು ಮುಂದಾಗಿವೆ ಎಂಬ ಗುಸು ಗುಸು ಎಲ್ಲೆಡೆ ಹರಿದಾಡಿತ್ತು. ಈ ಒಂದು ಅಂಶವಲ್ಲದೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ಜೊತೆ ಜೊತೆಗೆ ಹೋರಾಟ ರೂಪಿಸಲಾಗುವುದು ಎಂದು ಸ್ವತಃ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ(B S Yadiyurappa) ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರನ್ನೇ ಅಧಿಕೃತವಾಗಿ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತಾ..? ಅನ್ನೋ ಚರ್ಚೆ ಶುರುವಾಗಿದೆ.
ಇನ್ನು ಸದನದ ಹುಲಿ-ಟಗರು ಎಂದು ಖ್ಯಾತಿ ಪಡೆದವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ(CM Siddaramaiah). ಇವರಿಬ್ಬರೂ ಸದನದಲ್ಲಿ ಗುಡುಗಿದರು ಅಂದರೆ ಇಡೀ ಸದನವೇ ನಿಶಬ್ಧವಾಗುತ್ತಿತು. ಆದರೀಗ ಯಡಿಯೂರಪ್ಪರನ್ನು ಸ್ವಪಕ್ಷೀಯರೇ ಸ್ತಬ್ಧ ಮಾಡಿ ಕೂರಿಸಿದ್ದಾರೆ. ಚುನಾವಣೆ ನಿಲ್ಲದೆ ಅವರು ಅಧಿವೇಶನದಿಂದ ದೂರ ಉಳಿದಿದ್ದಾರೆ. ಇನ್ನು ಸಿದ್ದರಾಮಯ್ಯನವರನ್ನು ಮಾತಿನಲ್ಲಿ ಮಣಿಸುವ ನಾಯಕ ಬೇರಾರು ಇಲ್ಲ. ಬಿಜೆಪಿ ಶಾಸಕರಲ್ಲಂತೂ ಅಂತಹ ಸಮರ್ಥರು ಸದ್ಯಕ್ಕಿಲ್ಲ ಎನ್ನಬಹುದು. ಸಿದ್ದರಾಮಯ್ಯ ವೇಗವನ್ನು ಕಡಿವಾಣ ಹಾಕಬಲ್ಲ ಶಾಸಕ ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿ ಮಾತ್ರ. ಪೂರಕ ದಾಖಲೆಗಳನ್ನು ಸಂಗ್ರಹ ಮಾಡಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಬಲ್ಲರು. ಇದರಿಂದ ಮುಂದೆ ಅವರ ಪಕ್ಷವೇ ಅಧಿಕೃ ವಿಪಕ್ಷ ಆಗಬಹುದು. ಆಗ ಕುಮಾರಸ್ವಾಮಿ ವಿಪಕ್ಷ ನಾಯಕರಾಗುತ್ತಾರೆ. ಹೀಗಾಗಿ ಇದೇ ಕಾರಣಕ್ಕಾಗಿ ಬಿಜೆಪಿ ತನ್ನ ಪಕ್ಷದಿಂದ ವಿಪಕ್ಷ ನಾಯಕನ್ನು ಆಯ್ಕೆ ಮಾಡುತ್ತಿಲ್ಲ ಎನ್ನುಲಾಗುತ್ತಿದೆ.
