Maha mythree meeting: ವಿಪಕ್ಷ ನಾಯಕರ (Opposition Parties) ಸಭೆಯು ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ (Bengaluru) ನಡೆಯಲಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ (Sharad Pawar) ಹೇಳಿದ್ದಾರೆ.
ಹೌದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಮಣಿಸಲು ತಯಾರಿ ನಡೆಸುತ್ತಿರುವ ವಿಪಕ್ಷಗಳು ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ (Maha mythree meeting) ಸಭೆ ಸೇರಲಿವೆ. ಈ ಕುರಿತಾಗಿ ಕಾಂಗ್ರೆಸ್ ಪ್ರಕಟಣೆ ಹೊರಡಿಸಿದೆ.
ಕಳೆದ ವಾರ ಬಿಹಾರದ ಪಾಟ್ನಾದಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಸುಮಾರು 16 ಪಕ್ಷಗಳು ಸಭೆ ಸೇರಿ, ಮಹಾ ಮೈತ್ರಿಗೆ ಮುನ್ನುಡಿ ಎಂಬಂತೆ ಮೋದಿ ವಿರುದ್ಧ ಸಮರ ಸಾರಿದ್ಧವು. ಅಲ್ಲದೆ ಮುಂದಿನ ಸಭೆ ಹಿಮಾಚಲ ಪ್ರದೇಶದಲ್ಲಿ ಎಂಬುದಾಗಿ ಗೋಷಿಸಿದ್ದವು. ಆದರೆ ಈ ಬೆನ್ನಲ್ಲೇ ಒಂದೆರಡು ದಿನಗಳಲ್ಲಿ ಈ ವಿಪಕ್ಷಗಳು ಕಚ್ಚಾಡಿಕೊಂಡು ದೂರಾದವು ಎಂಬ ವಿಚಾರ ಹಬ್ಬಿತ್ತು. ಆದರೀಗ ಈ ಗೊಂದಲಗಳಿಗೆ ತೆರೆ ಎಳೆಯುವಂತೆ ವಿಪಕ್ಷಗಳು ಬೆಂಗಳೂರಿನಲ್ಲಿ ಮತ್ತೆ ಸಭೆ ಸೇರುತ್ತಿದ್ದಾರೆ.
ಅಂದಹಾಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮೊದಲ ಸಭೆಯಲ್ಲಿ ವಿವಿಧ ಪಕ್ಷಗಳ 32 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಮಾಯಾವತಿ (ಬಿಎಸ್‌ಪಿ), ನವೀನ್ ಪಟ್ನಾಯಕ್ (ಬಿಜೆಡಿ), ಕೆ ಚಂದ್ರಶೇಖರ್ ರಾವ್ (ಬಿಆರ್‌ಎಸ್) ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ) ಅವರನ್ನು ಆಹ್ವಾನಿಸಿದ್ದರೂ ಸಭೆಗೆ ಗೈರಾಗಿದ್ದರು. ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಪೂರ್ವನಿರ್ಧರಿತ ಕುಟುಂಬ ಕಾರ್ಯಕ್ರಮದಿಂದಾಗಿ ಸಭೆಗೆ ಹಾಜರಾಗಲಿಲ್ಲ.
ಇನ್ನು ಪಾಟ್ನಾ ಸಭೆಯಲ್ಲಿ ಕಾಂಗ್ರೆಸ್ (Congress) ಸೇರಿದಂತೆ 17 ಪಕ್ಷಗಳು 2024 ರ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಲು ನಿರ್ಧರಿಸಿವೆ. ಎರಡನೇ ಸಭೆಯನ್ನು ಕಾಂಗ್ರೆಸ್ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಿವೆ.
