Home » Nalin Kumar-Arun Kumar puttila: ಅರುಣ್ ಕುಮಾರ್ ಪುತ್ತಿಲರ ಬಗ್ಗೆ ಕೊನೆಗೂ ಮೌನ ಮುರಿದ ನಳೀನ್ ಕುಮಾರ್ ಕಟೀಲ್ !! ಭಾರೀ ಕುತೂಹಲ ಕೆರಳಿಸಿದ ರಾಜ್ಯಾಧ್ಯಕ್ಷರ ಹೇಳಿಕೆ !!

Nalin Kumar-Arun Kumar puttila: ಅರುಣ್ ಕುಮಾರ್ ಪುತ್ತಿಲರ ಬಗ್ಗೆ ಕೊನೆಗೂ ಮೌನ ಮುರಿದ ನಳೀನ್ ಕುಮಾರ್ ಕಟೀಲ್ !! ಭಾರೀ ಕುತೂಹಲ ಕೆರಳಿಸಿದ ರಾಜ್ಯಾಧ್ಯಕ್ಷರ ಹೇಳಿಕೆ !!

by ಹೊಸಕನ್ನಡ
0 comments
Nalin Kumar-Arun Kumar puttila

Nalin Kumar-Arun Kumar puttila: ರಾಷ್ಟ್ರೀಯ ನಾಯಕರ ಜತೆ ಅರುಣ್ ಕುಮಾರ್ ಪುತ್ತಿಲರ(Arun Kumar puttila)ಕುರಿತು ಕೆಲವು ಚರ್ಚೆಗಳಾಗಿವೆ. ಈ ಬಗ್ಗೆ ಸ್ಪಷ್ಟವಾಗಿದೆ. ಏನೆಲ್ಲಾ ಚರ್ಚೆಗಳಾಗಿವೆ, ಮುಂದಿನ ನಿರ್ಧಾರ ಏನು ಎಂಬುದರ ಕುರಿತು ರಾಷ್ಟ್ರೀಯ ನಾಯಕರೇ ತೀರ್ಪು ನೀಡುತ್ತಾರೆ ಎಂದು ದ.ಕ ಜಿಲ್ಲೆಯ ಹಾಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nlin Kumar kateel)ಅವರು ಹೇಳಿದ್ದಾರೆ.

ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ, ಅಲ್ಪಾವದಿಯಲ್ಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ, ಚುನಾವಣೆಯಲ್ಲಿ ಸೋತರೂ ಗೆದ್ದು ಬೀಗಿದ, ಮುಂದೆ ಬಿಜೆಪಿಗೇ ಟಕ್ಕರ್ ಕೊಡುತ್ತಾರೆ ಎನ್ನಲಾದ, ‘ಪರಿವಾರ’ದ ನಾಯಕ, ಪಕ್ಕಾ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಇದೀಗ ಕರಾವಳಿ ಭಾಗದ ಜನಪ್ರಿಯ ನಾಯಕರ ಪೈಕಿ ಮೊದಲ ಸ್ಥಾನದಲ್ಲಿರುವವರು. ಮುಂದೊಂದು ದಿನ ಬಿಜೆಪಿಗೆ(BJP) ಕಂಟಕವಾಗಬಹುದು ಎಂದು ಬಿಂಬಿಸಲಾದ ಈ ನಾಯಕ ಇತ್ತೀಚೆಗೆ ದೆಹಲಿಯ(Delhi)ಬಿಜೆಪಿ ಪಡಸಾಲೆಯಲ್ಲೇ ಕಂಡುಬಂದುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ, ದ.ಕ ಕ್ಷೇತ್ರದಲ್ಲಿ ನಳೀನ್ ಕುಮಾರ್ ಕಟೀಲ್ ಸ್ಥಾನ ಇವರೇ ತುಂಬುತ್ತಾರಾ? ಅಥವಾ ಕರಾವಳಿ ಭಾಗದಲ್ಲಿ ಬಿಜೆಪಿಯ ಪ್ರಬಲ ನಾಯಕನ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ? ಎಂದೆಲ್ಲಾ ಮಾತುಗಳು ಕೇಳಿ ಬಂದಿದ್ದವು. ಇಷ್ಟೆಲ್ಲಾ ಆದರೂ ನಳೀನ್ ಕುಮಾರ್ ಮಾತ್ರ ಪುತ್ತಿಲರ ಬಗ್ಗೆಯಾಗಲಿ, ದೆಹಲಿ ಭೇಟಿ ಬಗ್ಗೆಯಾಗಲಿ ಒಂದೂ ಚಕಾರವೆತ್ತಿರಲಿಲ್ಲ. ಆದರೀಗ ಕೊನೆಗೂ ನಳೀನ್ ಅವರು ಪುತ್ತಿಲರ ಬಗ್ಗೆ ಮಾತನಾಡಿದ್ದಾರೆ.

ಹೌದು, ಕಳೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ(Assembly election)ಭಾರೀ ಪೈಪೋಟಿ ನೀಡಿ ಸೋಲನ್ನಪ್ಪಿದ ಹಾಗೂ ಲೋಕಸಭಾ ಚುನಾವಣೆಯ(Parliament election)ಆಕಾಂಕ್ಷಿ ಎಂದು ಹೇಳಲಾಗುತ್ತಿರುವ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿಗೆ ಮರಳಿ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮೊದಲ ಪ್ರತಿಕ್ರಿಯೆ ನೀಡಿದ್ದು, ‘ಪುತ್ತೂರು(Puttur) ಅಥವಾ ಎಲ್ಲೂ ಬಿಜೆಪಿಯಲ್ಲಿ ಗೊಂದಲಗಳು ಆಗಿಲ್ಲ. ಪಕ್ಷೇತರ ಅಭ್ಯರ್ಥಿಗಳು ನಿಂತ ಕಾರಣ ಚುನಾವಣೆಯಲ್ಲಿ ವ್ಯತ್ಯಾಸಗಳಾಗಿವೆ. ಯಾರು ಯಾರು ಪಕ್ಷಕ್ಕೆ ಬರಬೇಕೋ ಪಕ್ಷದಲ್ಲಿ ಇರಬೇಕೋ ನಾವು ಅದನ್ನ ಸರಿ ಮಾಡ್ತೇವೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡ್ತೇವೆ. ನಾವು ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿಗಳನ್ನು ಹಾಕ್ತೇವೆ. ಜಾಪ್ರಭುತ್ವದಲ್ಲಿ ಯಾರೂ ಸ್ಪರ್ಧೆ ಮಾಡಬಹುದು. ಅರುಣ್ ಪುತ್ತಿಲ ಅವರ ಬಗ್ಗೆ ವೈಯಕ್ತಿಕವಾಗಿ ಚರ್ಚೆ ಮಾಡಲ್ಲ. ಎಲ್ಲವನ್ನೂ ರಾಷ್ಟ್ರೀಯ ನಾಯಕರೇ ತೀರ್ಮಾನ ಮಾಡುತ್ತಾರೆ’ ಎಂದಿದ್ದಾರೆ.

ಅಲ್ಲದೆ ‘ ಮುಂದೆ ಯಾವುದೇ ಗೊಂದಲಗಳಿಗೆ ಅವಕಾಶವಿರುವುದಿಲ್ಲ. ಪ್ರತಿಯೊಂದನ್ನೂ ಸರಿಪಡಿಸುತ್ತೇವೆ. ಈಗಾಗಲೇ ರಾಷ್ಟ್ರೀಯ ನಾಯಕರ ಜೊತೆ ಅರುಣ್‌ ಕುಮಾರ್‌ ಪುತ್ತಿಲ ಅವರ ಬಗ್ಗೆ ಚರ್ಚೆಗಳು ಆಗಿವೆ. ಆ ಚರ್ಚೆಯ ಉತ್ತರಗಳನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡ್ತಾರೆ. ಎಲ್ಲ ನೋಡಿಕೊಂಡು ರಾಷ್ಟ್ರೀಯ ನಾಯಕರು, ರಾಜ್ಯದಲ್ಲಿ ವಿಪಕ್ಷ ನಾಯಕರನ್ನೂ ಆಯ್ಕೆ ಮಾಡ್ತಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆ ಆಗಿರುವ 66 ಜನರೂ ಕೂಡ ಸರ್ಕಾರದ ವಿರೋಧ ಪಕ್ಷದ ನಾಯಕನಾಗಲು ಸಮರ್ಥರಿದ್ದಾರೆ ಎಂದರು.

ಅಂದಹಾಗೆ ಲೋಕಸಭಾ ಚುನಾವಣೆ ಹತ್ತಿರವಿರುವಾಗಲೇ ಅರುಣ್ ಕುಮಾರ್ ಪುತ್ತಿಲರು, ದೆಹಲಿಗೆ ತೆರಳಿ ಬಿಜೆಪಿ ಸಂಘಟನಾ ಚತುರ ಬಿ ಎಲ್ ಸಂತೋಷ್(BL Santosh)ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಭೇಟಿ ದಕ್ಷಿಣ ಕನ್ನಡ ರಾಜಕೀಯದಲ್ಲಿ ಕುತೂಹಲ ಕೆರಳಿಸಿತ್ತು. ದಿಲ್ಲಿಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು. ಕರಾವಳಿ ಭಾಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಪುತ್ತಿಲರು ಭವಿಷ್ಯದಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟು ನೀಡುತ್ತಾರೆ ಎಂದು ಹೇಳಲಾಗುತ್ತಿರುವಾಗ ಅಚ್ಚರಿ ಎಂಬಂತೆ ಅರುಣ್ ಕುಮಾರ್ ಪುತ್ತಿಲರು ಏಕಾಏಕಿ ದೆಹಲಿಗೆ ತೆರಳಿ ಬಿಜೆಪಿ ಸಂಘಟನಾ ಚತುರ ಬಿ ಎಲ್ ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಪುತ್ತಿಲ ಪರಿವಾರದ ಜೊತೆ ಬಿ.ಎಲ್ ಸಂತೋಷ್, ಎರಡು ಗಂಟೆಗೂ ಅಧಿಕ ಕಾಲ ಸಭೆಯ ನಡೆಸಿದ್ದಾರೆ. ಸಭೆಯಲ್ಲಿ ಸಂತೋಷ್, ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ವಸ್ತು ಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ಪುತ್ತೂರಿನಲ್ಲಿ ಚುನಾವಣಾ ಪೂರ್ವದಲ್ಲಿ ಬಿಜೆಪಿಯಲ್ಲಾದ ಬೆಳವಣಿಗೆಯ ಬಗ್ಗೆಯೂ ಅರುಣ್ ಕುಮಾರ್ ಪುತ್ತಿಲ ಅವರಲ್ಲಿ ಸಂತೋಷ್ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಅಲ್ಲದೆ ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್, ಬಿಜೆಪಿ ಪಕ್ಷದೊಳಗೆ ಸೇರದ ಬಗ್ಗೆ ಕಾರಣವನ್ನೂ ಕೇಳಿದ್ದಾರೆ. ಬಿಜೆಪಿಯ ಸದಸ್ಯತ್ವ ಪಡೆದು ಬಿಜೆಪಿಯಲ್ಲಿ ಸಕ್ರೀಯ ರಾಗಿ ಸೇವೆ ಸಲ್ಲಿಸಿ, ಹಳೆಯದನ್ನು ಮರೆತು ಪಕ್ಷ ಕಟ್ಟಲು ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಸಹಕಾರ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಈ ಭೇಟಿ ಕುತೂಹಲ ಆಗಿಯೇ ಉಳಿದಿತ್ತು. ಇದೀಗ ನಳೀನ್ ಕುಮಾರ್ ಕಟೀಲ್ ಅವರು ಕೂಡ ಕುತೂಹಲಾತ್ಮಕವಾಗಿಯೇ ಮಾತನಾಡಿರುವುದು ಅಚ್ಚರಿ ಮೂಡಿಸಿದೆ.

You may also like

Leave a Comment