Home » Dr. Dinesh Gundurao: ಬರೀ ಮೈತ್ರಿ ಅಲ್ಲ…! ಬಿಜೆಪಿಯೊಳಗೆ ಜೆಡಿಎಸ್ ವಿಲೀನ ?! ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ

Dr. Dinesh Gundurao: ಬರೀ ಮೈತ್ರಿ ಅಲ್ಲ…! ಬಿಜೆಪಿಯೊಳಗೆ ಜೆಡಿಎಸ್ ವಿಲೀನ ?! ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ

by ಹೊಸಕನ್ನಡ
0 comments
Dr. Dinesh Gundurao

Dr. Dinesh Gundurao: 2024ರ ಲೋಕಸಭಾ ಚುನಾವಣೆಯಲ್ಲಿ(Parliament election) ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿ ಒಂದು ಹಂತಕ್ಕೆ ಬಂದಿದೆ. ಆದರೀಗ ಈ ಕುರಿತು ವ್ಯಂಗ್ಯವಾಡಿರುವ ಸಚಿವ ಡಾ. ದಿನೇಶ್ ಗುಂಡೂರಾವ್ ಅವರು ಮೈತ್ರಿ ಮಾಡುವುದಲ್ಲ, ಬಿಜೆಪಿಯಲ್ಲೇ ವಿಲೀನ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ಹೌದು, ಲೋಕಸಭ ಚುನಾವಣೆಗೂ (Loksabha Election 2024) ಮುನ್ನ ರಾಜ್ಯದಲ್ಲಿ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಮೈತ್ರಿ ಮಾಡಿಕೊಳ್ಳುವ ಚರ್ಚೆಗಳು ಆರಂಭಗೊಂಡಿವೆ. ನಿನ್ನೆ ದಿನ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಎರಡೂ ಪಕ್ಷಗಳ ವರಿಷ್ಠರು ಮಾತುಕತೆ ನಡೆಸಿದ್ದಾರೆಂದು ಮೈತ್ರಿ ಕುರಿತು ಅಪ್ಡೇಟ್ ನೀಡಿದ್ದರು. ಈ ಬೆನ್ನಲ್ಲೇ ಇದೀಗ ಮೈತ್ರಿಯ ಬಗ್ಗೆ (Dr. Dinesh Gundurao)  ಸಚಿವ ದಿನೇಶ್ ಗುಂಡೂರಾವ್ (Minister Dinesh Gundurao) ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿದ್ದು. ಜೆಡಿಎಸ್​ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ, ಅವರು ಬಿಜೆಪಿ ಜೊತೆ ಮೈತ್ರಿ ಅಲ್ಲ, ಪೂರ್ಣ ವಿಲೀನ ಮಾಡಲಿ ಎಂದು ಕುಟುಕಿದ್ದಾರೆ.

ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಅವರು, ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್‌ಗೆ(JDS) ಯಾವ ಸಿದ್ಧಾಂತವಿದೆ? ಜೆಡಿಎಸ್‌ಗೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ಅದೊಂದು ಅವಕಾಶವಾದಿ ಪಕ್ಷ. ಜೆಡಿಎಸ್‌ನವರು ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ. ಜೆಡಿಎಸ್‌ ಮುಂದಿರುವ ಜಾತ್ಯತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006ರಲ್ಲಿ ಬಿಜೆಪಿ(BJP) ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯತೀತ ತತ್ವಕ್ಕೆ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್‌ ಅವನತಿ ಶುರುವಾಗಿದ್ದು, 2004ರಲ್ಲಿ 59 ಸ್ಥಾನ ಗೆದ್ದದ್ದ ಜೆಡಿಎಸ್‌ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಆ ನಕಲಿ ಜಾತ್ಯತೀತ ಸಿದ್ಧಾಂತವೇ ಕಾರಣ’ ಎಂದು ಹೇಳಿದ್ದಾರೆ.

ನಕಲಿ‌ ಶ್ಯಾಮನ ಅವತಾರ ಕೊನೆಯಾಗಲಿ‌:
ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು(Opposition leader). ಈ ಮೂಲಕವಾದರೂ ಕುಮಾರಸ್ವಾಮಿಯವರ ಸುಳ್ಳು ಜಾತ್ಯಾತೀತತೆಯ ನಕಲಿ‌ ಶ್ಯಾಮನ ಅವತಾರ ಕೊನೆಯಾಗಲಿ‌ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಇದನ್ನು ಓದಿ: H.K Patil: ಅಕ್ಕಿಯ ಬದಲಿಗೆ ಚಿಕನ್ ಸಿಗುತ್ತಾ ? ಹೆಚ್ . ಕೆ ಪಾಟೀಲ್ ಕೊಟ್ರು ಬಿಗ್ ಬಿಗ್ ಅಪ್ಡೇಟ್ !

You may also like

Leave a Comment