Tripura: ತ್ರಿಪುರಾ (Tripura) ಅಸೆಂಬ್ಲಿ ಅಧಿವೇಶನದದ ವೇಳೆ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಬೆನ್ನಲ್ಲೆ ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದರಿಂದ ವಿಧಾನಸಭೆ ಅಶುದ್ಧವಾಗಿದೆ ಎಂದು ಕಾಂಗ್ರೆಸ್ ಶಾಸಕರು ಸದನದ ಶುದ್ಧೀಕರಣಕ್ಕೆ ಗಂಗಾಜಲವನ್ನು ಸಿಂಪಡಿಸಿದ್ದಾರೆ. ತ್ರಿಪುರಾ ವಿಧಾನಸಭೆಯ ಬಜೆಟ್ ಅಧಿವೇಶನ ಶುರುವಾಗುವ ಮೊದಲು ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ ರಾಜ್ಯ ವಿಧಾನಸಭೆಯೊಳಗೆ ಗಂಗಾಜಲ ಸಿಂಪಡಿಸಿದ್ದಾರೆ.
ಜೊತೆಗೆ ಸದನದಲ್ಲಿ ಪ್ರತಿಭಟನೆ ನಡೆಸಿ, ಗದ್ದಲ ಮಾಡಿದ ಕಾರಣಕ್ಕಾಗಿ ಐವರು ವಿರೋಧ ಪಕ್ಷದ ಶಾಸಕರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ತ್ರಿಪುರಾ ವಿಧಾನಸಭೆಯ ಸ್ಪೀಕರ್ ಬಿಸ್ವಬಂಧು ಸೇನ್ ಅವರು ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್, ತಿಪ್ರಾ ಶಾಸಕರಾದ ಬಿರ್ಷಕೇತು ದೆಬ್ಬರ್ಮಾ, ರಂಜಿತ್ ದೆಬ್ಬರ್ಮಾ, ನಂದಿತಾ ರಿಯಾಂಗ್ ಮತ್ತು ಸಿಪಿಐ-ಎಂ ಶಾಸಕಿ ನಯನ್ ಸರ್ಕಾರ್ ಅವರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.
ಇದನ್ನು ಓದಿ: Amazon Prime: ಓರ್ವ ನಟಿಯಿಂದ ದೈತ್ಯ ಅಮೆಜಾನ್ ಗೆ ಭಾರೀ ಹೊಡೆತ ? ಅಂತದ್ದೇನಾಗಿತ್ತು ಅವಳಿಂದ ?
