6
KS Eshwarappa : ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರು ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ ಸ್ಥಳದಲ್ಲಿ ಮತ್ತೆ ದೇಗುಲ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಎಲ್ಲೆಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಿದ್ದಾರೋ ಅಲ್ಲೆಲ್ಲ ಮುಂದೊಂದು ದಿನ ದೇವಾಲಯ ನಿರ್ಮಾಣ ಮಾಡುತ್ತೇವೆ. ದೇಗುಲ ನಿರ್ಮಾಣ ಆಗಲು
5 ವರ್ಷ ಆಗಬಹುದು ಅಥವಾ 50 ವರ್ಷವಾಗಬಹುದು. ಆದರೆ
ದೇಗುಲ (temple) ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಈ ವೇಳೆ ಕಾಂಗ್ರೆಸ್ (congress) ಬಗ್ಗೆ ಕಿಡಿಕಾರಿದ ಅವರು ಕಾಂಗ್ರೆಸ್‌ನವರಿಗೆ ಮುಸ್ಲಿಮರನ್ನು ಖುಷಿ ಪಡಿಸುವುದೇ ಕೆಲಸ. ಮುಸ್ಲಿಮರು ಇಲ್ಲದಿದ್ದರೆ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತಿತ್ತು. ಈಗ ಆರ್ಟಿಕಲ್ 370 ಹಿಂಪಡೆದದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ (ram mandir) ನಿರ್ಮಾಣ ಆಗಿರುವುದು. ಇವೆಲ್ಲವನ್ನೂ ಕಾಂಗ್ರೆಸ್‌ಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದರು .
