Parliment attacks : ಬುಧವಾರ ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ ಕುರಿತು ತನಿಖೆ ಬಿರುಸಾಗಿ ನಡೆಯುತ್ತಿದೆ. ಈಗಾಗಲೇ 6 ಮಂದಿ ಆರೋಪಿಗಳ ಬಂಧನವಾಗಿದೆ. ಈ ನಡುವೆಯೇ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕುವ ಸೂಚನೆಗಳು ದೊರೆತಿವೆ.
ಹೌದು, ಈ ಒಂದು ಮಹಾ ಭದ್ರತಾ ಲೋಪದ ಕುರಿತು ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದೆ. ಈ ನಡುವೆ ಆರೋಪಿಗಳ ಮೊಬೈಲ್ ಫೋನ್ಗಳು ರಾಜಸ್ಥಾನದಲ್ಲಿ ಪತ್ತೆಯಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹೀಗಾಗಿ ತನಿಖೆ ಇನ್ನೂ ಚುರುಕಾಗಿದೆ.
ಅಂದಹಾಗೆ ತನಿಖೆ ವೇಳೆ ಪೊಲೀಸರು, ಆರೋಪಿಗಳಿಗೆ ಸಂಬಂಧಿಸಿದ ಸುಟ್ಟ ಸ್ಥಿತಿಯಲ್ಲಿದ್ದ ಮೊಬೈಲ್ ಫೋನ್ಗಳ ಬಿಡಿ ಭಾಗಗಳು, ಬಟ್ಟೆಗಳು ಮತ್ತು ಶೂಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲ ಫೋನ್ಗಳು ಕೂಡ ಪ್ರಕರಣದ ಮಾಸ್ಟರ್ ಮೈಂಡ್ ಲಲಿತ್ ಝಾ ಬಳಿ ಇತ್ತು ಎಂದು ತಿಳಿದುಬಂದಿದೆ. ಎಲ್ಲ ಫೋನ್ಗಳನ್ನು ಮುರಿದು ಹಾಕಿದ ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ. ಎಲ್ಲವೂ ರಾಜಸ್ಥಾನದಲ್ಲಿ ಪತ್ತೆಯಾಗಿವೆ.
ಸರ್ಕಾರಕ್ಕೆ ತಮ್ಮ ಸಂದೇಶ ರವಾನಿಸಲು, ಆಡಳಿತದ ಮೇಲೆ ಪ್ರಭಾವ ಬೀರುವ ಕೆಲವು ಮಾರ್ಗಗಳ ಬಗ್ಗೆ ಐವರು ಆರೋಪಿಗಳು ಫೋನ್ ಗಳಲ್ಲಿ ಚರ್ಚೆ ನಡೆಸಿದ್ದರು ಎಂದು ಹೇಳಲಾಗಿತ್ತು. ಸದ್ಯ ಇದರಿಂದ ತನಿಖೆ ಇನ್ನೂ ಚುರುಕಾಗಿದೆ.
