Home » Vinay guruji: ಅಣ್ಣಾ ಮಲೈ ರಾಜಕೀಯ ಜೀವನದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ವಿನಯ್ ಗುರೂಜಿ!!

Vinay guruji: ಅಣ್ಣಾ ಮಲೈ ರಾಜಕೀಯ ಜೀವನದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ವಿನಯ್ ಗುರೂಜಿ!!

0 comments
Vinay guruji

Vinay guruji: ಕಾರಣಾಂತರಗಳಿಂದ ಸೈಲೆಂಟ್ ಆಗಿದ್ದ ವಿನಯ್ ಗುರೂಜಿಯವರು(Vinay Guruji) ಇದೀಗ ಮತ್ತೆ ಮುನ್ನಲೆಗೆ ಬಂದು, ಮಾಜಿ ಪೋಲೀಸ್ ವರಿಷ್ಠಾಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾ ಮಲೈ ರಾಜಕೀಯ ಜೀವನದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಹೌದು, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾ ಮಲೈ(Anna malai) ಅವರು ಒಂದು ದಿನ ತಮಿಳು ನಾಡಿನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದನ್ನು ನಾನೂ ನೋಡುತ್ತೇನೆ. ನೀವು ನೋಡುತ್ತೀರಿ. ಇದನ್ನು ಭವಿಷ್ಯ ಎನ್ನುವುದಕ್ಕಿಂತ ಸಮ್ಯ ಜ್ಞಾನ ಎಂದು ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ.

ಅಲ್ಲದೆ ಅಣ್ಣಾಮಲೈ ಎಸ್‌ಪಿ(SP) ಆಗಿದ್ದಾಗ ಬಂದಾಗಲೇ 2 ಸೇಬು ಕೊಟ್ಟು ಹೇಳಿದ್ದೆ. ಖಾಕಿಯಿಂದ ಖಾದಿ ಉಡ್ತಾರೆ ಎಂದು ಹೇಳಿದ್ದೆ. ಹಾಗೇ ಆಗಿದೆ ನೋಡಿ. ಮೊನ್ನೆಯಷ್ಟೆ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ (Ayodhya Ram Mandir) ಮುಗಿದಿದೆ. ಸದ್ಯದಲ್ಲೇ ಮೋದಿಯ (Narendra Modi) ಪಟ್ಟಾಭಿಷೇಕವನ್ನೂ ಎಲ್ಲರೂ ನೋಡ್ತೀವಿ ಎಂದು ವಿನಯ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಇದೇವೇಳೆಯಲ್ಲಿ ಸಂಸದ ಡಿ ಕೆ ಸುರೇಶ್ ಅವರ ರಾಷ್ಟ್ರ ವಿಭಜನೆ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.

You may also like

Leave a Comment