Home » ಯಾರು ಮಹಿಳೆಯರಿಗೆ ಅಪಮಾನ ಮಾಡುತ್ತಾರೋ ಅವರ ನಾಶ ಖಂಡಿತ !! | ಠಾಕ್ರೆ ಕುರಿತ ಕಂಗನಾ ಹಳೇ ವೀಡಿಯೋ ಫುಲ್ ವೈರಲ್

ಯಾರು ಮಹಿಳೆಯರಿಗೆ ಅಪಮಾನ ಮಾಡುತ್ತಾರೋ ಅವರ ನಾಶ ಖಂಡಿತ !! | ಠಾಕ್ರೆ ಕುರಿತ ಕಂಗನಾ ಹಳೇ ವೀಡಿಯೋ ಫುಲ್ ವೈರಲ್

0 comments

ಮಹಾರಾಷ್ಟ್ರ: ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಹಿಂದೆ ಹೇಳಿದ್ದ ಮಾತೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ರಣಾವತ್ ಕಿಡಿಕಾರಿದ್ದರು. ಈ ತಿಕ್ಕಾಟ ಜೋರಾದ ಸಮಯದಲ್ಲೇ ಕಂಗನಾ ರಣಾವತ್ ಮನೆ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಈ ಹಿಂದೆ ಬಿಎಂಸಿ ಮನೆಯನ್ನು ಕೆಡವಿತ್ತು. ಇದಕ್ಕೆ ಅಂದು ತಿರುಗೇಟು ಕೊಟ್ಟಿದ್ದ ನಟಿ, ನೆನಪಿರಲಿ ಉದ್ಧವ್ ಠಾಕ್ರೆಜೀ ಇಂದು ನನ್ನ ಮನೆ ಕೆಡವಿದ್ದೀರಿ. ನೋಡುತ್ತಾ ಇರಿ. ಮುಂದೊಂದು ದಿನ ನಿಮ್ಮ ದುರಹಂಕಾರ ಕೂಡ ನಾಶವಾಗುತ್ತದೆ ಎಂದಿದ್ದರು.

ಈ ವೀಡಿಯೋದ ಜೊತೆ ಮತ್ತೊಂದು ವೀಡಿಯೋ ವೈರಲ್ ಆಗುತ್ತಿದೆ. ನೀವು ನಮ್ಮ ಇತಿಹಾಸದಲ್ಲಿ ಗಮನಿಸಿರಬಹುದು, ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತವಾಗಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸೀತೆಗೆ ಅವಮಾನ ಮಾಡಿದ ರಾವಣ, ದ್ರೌಪದಿಗೆ ಅವಮಾನ ಮಾಡಿದ ಕೌರವರು ನಾಶವಾದರು. ನಾನು ಆ ದೇವಿಗಳಿಗೆ ಸಮಾನಳಲ್ಲ. ಆದರೆ ನಾನು ಕೂಡ ಮಹಿಳೆ. ನಾನು ನನ್ನ ಆಲೋಚನೆಗೆ ಬಂದಿದ್ದನ್ನು ಮಾತನಾಡುತ್ತೇನೆ. ನಾನು ಒಬ್ಬ ಮಹಿಳೆಯಾಗಿ ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ. ನನಗೂ ಈಗ ಅವಮಾನವಾಗಿದೆ. ಒಂದು ಅರ್ಥ ಮಾಡಿಕೊಳ್ಳಬೇಕಾದ ವಿಚಾರವೆಂದರೆ ಯಾವತ್ತು ನೀವು ಮಹಿಳೆಯರಿಗೆ ಮರ್ಯಾದೆ ನೀಡುವುದಿಲ್ಲವೋ ನಿಮ್ಮ ನಾಶ ಖಂಡಿತವಾಗಿರುತ್ತದೆ ಎಂದು ಹೇಳಿದ್ದರು.

ಈ ವೀಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.

https://twitter.com/SheebaChoudhry/status/1539629504028545024?s=20&t=qNMP3J5_hd0w2IQLGr8RAw

You may also like

Leave a Comment