Home » Mallikarjun Kharge: ಖರ್ಗೆ ಕುಟುಂಬದ ಹತ್ಯೆಗೆ ಸಂಚು! ಬಿಜೆಪಿ ಅಭ್ಯರ್ಥಿಯ ಆಡಿಯೋ ಲೀಕ್

Mallikarjun Kharge: ಖರ್ಗೆ ಕುಟುಂಬದ ಹತ್ಯೆಗೆ ಸಂಚು! ಬಿಜೆಪಿ ಅಭ್ಯರ್ಥಿಯ ಆಡಿಯೋ ಲೀಕ್

1 comment
Mallikarjuna kharge

Mallikarjun Kharge: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಕುಟುಂಬದ ಹತ್ಯೆಯ ಸಂಚಿಗೆ ಸಂಬಂಧಿಸಿದ ಆಡಿಯೋ ಲೀಕ್ (Audio Leak) ಒಂದು ಲೀಕ್ ಆಗಿದ್ದು, ರಾಜಕೀಯದಲ್ಲಿ ದೊಡ್ಡದಾದ ಷಡ್ಯಂತ್ರ ನಡೆಯುತ್ತಿರುವುದು ಸ್ಪಷ್ಟವಾದಂತಿದೆ.

ಈಗಾಗಲೇ ಸುದ್ದಿಗೋಷ್ಠಿಯಲ್ಲಿ ರವಿ ಎಂಬಾತನ ಜೊತೆಯಲ್ಲಿ ಮಣಿಕಂಠ ರಾಥೋಡ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ತುಣಕನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikant Rathod, BJP Candidate), ಕಾರ್ಯಕರ್ತ ರವಿ ಎಂಬಾತನ ಜೊತೆ ಮಾತನಾಡಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಡಿಯೋ ಸಂಬಂಧ ಇಂದು ಎಐಸಿಸಿ ನಾಯಕರಾದ ರಣ್​ದೀಪ್​ ಸುರ್ಜೇವಾಲಾ (Randeep Surjewala), ಪವನ್​ ಖೇರಾ (Pavan Khera) ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.

ಆಡಿಯೋ ದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ, ಹೆಂಡತಿ ಮಕ್ಕಳನ್ನ ಸಾಫ್ ಮಾಡ್ತೇನೆ ಎಂದು ಮಣಿಕಂಠ ರಾಥೋಡ್ ಹೇಳಿದ್ದಾರೆ. ಇದು ತುಂಬಾ ಅಪಾಯಕಾರಿ ನಡೆಯಾಗಿದ್ದು, ಖರ್ಗೆಯವರ ಕುಟುಂಬ ಆತಂಕದಲ್ಲಿದೆ ಎಂದು ರಣ್​​ದೀಪ್ ಸುರ್ಜೇವಾಲಾ ಹೇಳಿದ್ದಾರೆ .

ಅಲ್ಲದೆ ಪ್ರಧಾನಿ, ಸಿಎಂ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಹತ್ಯೆಗೆ ಸಂಚು ನಡೆದಿದೆ. ದಲಿತ ನಾಯಕರಾಗಿರುವ ಮಲ್ಲಿಕಾರ್ಜನ ಖರ್ಗೆಯವರ ಹತ್ಯೆಗೆ ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ರಣ್​ದೀಪ್​ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ 26 ಕಿಲೋಮೀಟರ್ ರೋಡ್ ಶೋನಲ್ಲಿ ಕಾಣಿಸಿಕೊಂಡ ‘ಬಜರಂಗಬಲಿ’

You may also like

Leave a Comment